ಬೆಂಗಳೂರಿನ ಗಾಂಧಿ ಭವನದಲ್ಲಿ ಕಲಬುರಗಿಯ ಕುಟುಂಬ ಪ್ರಕಾಶನ ಪ್ರಕಟಿಸಿರುವ ಕರ್ನಾಟಕ ರಾಜ್ಯ ಹಾಗು ಭಾರತ ಕಂಡ ವಿಶಿಷ್ಠ ವ್ಯಕ್ತಿತ್ವದ ಹಿರಿಯ ರಾಜಕೀಯ ಮುತ್ಸದಿ ಮಲ್ಲಿಕಾರ್ಜುನ ಖರ್ಗೆರವರ ಕುರಿತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆರವರು ರಚಿಸಿರುವ ‘ಮಲ್ಲಿಕಾರ್ಜುನ ಖರ್ಗೆ’ ಜೀವನ ಕಥನವನ್ನು ನ್ಯಾಕ್ ನಿರ್ದೇಶಕ ಡಾ. ಎಸ್.ಸಿ. ಶರ್ಮ ಬಿಡುಗಡೆಗೊಳಿಸಿ ಮಾತನಾಡುತ್ತ ಕಳೆದ ಅರ್ಧ ಶತಮಾನದಿಂದ ಇರುಳು ಹಗಲೆನ್ನೆದೆ ಅವಿರತವಾಗಿ ಸಮಾಜಮುಖಿ ನೆಲೆಯಲ್ಲಿಯೇ ದುಡಿಯುತ್ತ ಬಂದಿರುವ ಮಲ್ಲಿಕಾರ್ಜುನ ಖರ್ಗೆರವರ ಎಂಬತ್ತು ವಸಂತಗಳ ವಯಸ್ಸಿನ ಮೌಲ್ಯಯುತ ರಾಜಕಾರಣದ ಹೋರಾಟದ ನಡೆ ಗಮನಿಸಿದಾಗ ಅಂಬೇಡ್ಕರ್ ಅವರ ಹೋರಾಟದ ಹೆಜ್ಜೆಗಳಲ್ಲಿ ಹೆಜ್ಜೆ ಇಟ್ಟಂತೆ ಭಾಸವಾಗುವ ಖರ್ಗೆಜಿ ಜೀವನದ ಸಂಕಥನ ಅನೇಕ ಮನಸ್ಸುಗಳಿಗೆ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ .ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ ಖರ್ಗೇಜಿರವರು ಸ್ವಾತಂತ್ರೊö್ಯÃತ್ತರ ಕರ್ನಾಟಕದ ಪ್ರಮುಖ ನಾಯಕರಾಗಿ ಬೆಳೆದು ರಾಜ್ಯದಿಂದ ರಾಷ್ಟç ರಾಜಧಾನಿಯತ್ತ ದಾಪುಗಲು ಹಾಕಿ ನಡೆದ ಬಗೆ ಅಪೂರ್ವ. ಅವರು ಮಾಡಿದ ಸಾಧನೆ , ಪಡೆದ ಸಿದ್ದಿ ಎಂದಿಗೂ ಅನೂಹ್ಯ , ಹಲವು ಜನಮುಖಿ ಕಾರ್ಯಗಳನ್ನು ಪ್ರಥಮವಾಗಿ ಜಾರಿಗೆ ತಂದ ಲೋಕೋತ್ತರ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಪ್ರೋ. ಡಿ. ಅಂಜನಪ್ಪ ಚಳ್ಳಕೆರೆ ಕೃತಿ ಪರಿಚಯ ಮಾಡಿಕೊಟ್ಟರು. ಕೃತಿಕಾರ ಪ್ರೋ.ಎಚ್.ಟಿ.ಪೋತೆ ಮತ್ತು ಪ್ರಕಾಶಕರಾದ ಡಾ.ರಮೇಶ್ ಪೋತೆ ರವರು ವೇದಿಕೆಯಲ್ಲಿದ್ದರು.

0 Comments