Ticker

6/recent/ticker-posts

Ad Code

Responsive Advertisement

ಗುರುಕೃಪೆ ಪಡೆದವರೇ ಪರಮ ಭಾಗ್ಯವಂತರು !

ಆತ್ಮೀಯರೇ, ಎಲ್ಲರ ಜೀವನದಲ್ಲಿ ತಾಯಿ ತಂದೆ, ಪಂಚಭೂತಗಳು, ಕುಲದೇವತೆ, ಸತಿ ಪತಿ, ಸಂತಾನ, ಉದ್ಯೋಗ, ಹುಟ್ಟು ಸಾವು ದೊರೆಯುತ್ತದೆ. ಆದರೆ ಗುರುಕೃಪೆ ಎಂಬುದು 84 ಲಕ್ಷ ಜೀವರಾಶಿಯಲ್ಲಿ ಜನಿಸಿದ ನಂತರ ಯಾರಿಗೆ ಆತ್ಮ ಉದ್ದಾರ ಆಗುವುದಿದೆ, ಜನನ ಮರಣ ಚಕ್ರದಿಂದ ಬಿಡುಗಡೆ ಆಗುವ ಸೌಭಾಗ್ಯವಿದೆ, ಅಂತವರ ಜೀವನದಲ್ಲಿ ಮಾತ್ರ ಅವರು ಎಲ್ಲೇ ಇದ್ದರೂ, ಯಾವ ರೂಪದಲ್ಲಿಯಾದರೂ ಗುರುಗಳ ಆಗಮನ ಆಗುವುದು, ಗುರುಕೃಪೆ ಆಗುವುದು. 

ಮಾನವರು ಎಷ್ಟೇ ಜನ್ಮವೆತ್ತಿ ಬಂದರೂ  ಗುರುಕೃಪೆ ಆಗುವವರೆಗೂ ಜನನ ಮರಣ ಚಕ್ರದಿಂದ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಮುಂದಿನ ಜನ್ಮದಲ್ಲಿ ಮನುಷ್ಯ ಜನ್ಮ ಸಿಗುವುದೋ, ಇಲ್ಲವೋ ಗೊತ್ತಿಲ್ಲ. ಹಿಂದಿನ ಎಷ್ಟೋ ಜನ್ಮದ ಪುಣ್ಯದ ಫಲವಾಗಿ ಈಗ ಅಮೂಲ್ಯವಾದ  ಮನುಷ್ಯ ಜನ್ಮವನ್ನು ಭಗವಂತ ಕೃಪೆ ಮಾಡಿದ್ದಾನೆ. ಆದ್ದರಿಂದ ಈ ಜನ್ಮದಲ್ಲೇ ಸಂಸಾರ, ಉದ್ಯೋಗದ ಜೊತೆಗೆ ಆಧ್ಯಾತ್ಮಿಕ ಸಾಧನೆ ಪ್ರಾರಂಭ ಮಾಡಿ ಇದೇ ಜನ್ಮದಲ್ಲಿ ಗುರುಕೃಪೆ ಪಡೆದು ಜೀವನ್ಮುಕ್ತಿ ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದು ಮನುಷ್ಯ ಜನ್ಮದ ವಿಶೇಷ ಸೌಭಾಗ್ಯ ಮತ್ತು ಮೂಲ ಉದ್ದೇಶ ಆಗಿದೆ. 

ಶ್ರೀ.ನಾರಾಯಣ ಮಹಾವಿಶ್ವ

9972928619


Post a Comment

0 Comments

Ad Code

Responsive Advertisement