ಬೆಂಗಳೂರು ನಗರ ರಾಮಯ್ಯ ಕಾಲೇಜಿನ ಕ್ಯಾಂಪಸ್‍ನಲ್ಲಿರುವ ಆರ್.ಎಂ.ಎಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಅನ್ನು ಕೊಡಿಸುವುದಾಗಿ ಕಲಬುರಗಿ ವೈದ್ಯರಿಂದ 66 ಲಕ್ಷ ರೂ. ಹಣವನ್ನು ಪಡೆದುಕೊಂಡು ವೈದ್ಯಕೀಯ ಸೀಟ್ ಅನ್ನು ಕೊಡಿಸದೆ ಮೋಸ ಮಾಡಿದ್ದು ಹಣವನ್ನು ವೈದ್ಯರು ವಾಪಸ್ಸು ಕೇಳಿದ್ದು ಹಣ ಕೊಡುವ ನೆಪದಲ್ಲಿ ವೈದ್ಯರನ್ನು ಬೆಂಗಳೂರಿಗೆ ಕರೆತಂದು ಮೆಜೆಸ್ಟಿಕ್‍ನಲ್ಲಿಟ್ಟು, ಇಬ್ಬರು ಹೆಂಗಸರನ್ನು ವೈದ್ಯರ ಬಳಿ ಕಳುಹಿಸಿ ನಕಲಿ ಪೊಲೀಸರಿಂದ ಲಾಡ್ಜ್ ಅನ್ನು ರೈಡ್ ಮಾಡಿಸುವಂತೆ ಸಂಚು ಮಾಡಿ ವೈದ್ಯರನ್ನು ಹೆದರಿಸಿ ವೈದ್ಯರಿಂದ ಪುನಹ 50 ಲಕ್ಷ ರೂ ಹಣವನ್ನು ಸುಲಿಗೆ ಮಾಡಿದ 05 ಜನ ಸುಲಿಗೆಕೋರರನ್ನು ದಸ್ತಗಿರಿ ಆರೋಪಿಗಳ ಮಾಹಿತಿ ಮೇರೆಗೆ 25 ಗ್ರಾಂ ಚಿನ್ನದ ಒಡವೆಗಳು, ನಗದು ಹಣ 24,00,000/- ರೂ ಕೃತ್ಯಕ್ಕೆ ಉಪಯೋಗಿಸಿದ ನಕಲಿ ವಾಕಿಟಾಕಿಯನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳ ಹಿನ್ನಲೆ:- ಎ1 ಆರೋಪಿ ಪಿರ್ಯಾದುದಾರರಿಗೆ ಪರಿಚಯವಿದ್ದು ಪಿರ್ಯಾದಿಯ ಮಗನಿಗೆ ಬೆಂಗಳೂರಿನ ರಾಮಯ್ಯ ಕಾಲೇಜ್ ಕ್ಯಾಂಪಸ್‍ನಲ್ಲಿರುವ ಆರ್.ಎಂ.ಎಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಅನ್ನು ಕೊಡಿಸುವುದಾಗಿ ಹೇಳಿ 1,75,000/- ರೂ ಹಣವನ್ನು ಪಡೆದು ಪಿರ್ಯಾದಿ ಮಗನಿಗೆ ಅಡ್ಮಿಷನ್ ಮಾಡಿಸಿದ್ದು ನಂತರ ಪಿರ್ಯಾದಿಯಿಂದ 66,00,000/- ರೂ ಹಣವನ್ನು ಪಡೆದುಕೊಂಡು ಹಣವನ್ನು ಕಾಲೇಜಿಗೆ ಕಟ್ಟದೆ ಪಿರ್ಯಾದಿಗೆ ಮೋಸ ಮಾಡಿರುತ್ತಾನೆ. ಕಾಲೇಜಿನ ಫೀಜ್ ಅನ್ನು ಕಟ್ಟದೆ ಇದ್ದ ಕಾರಣ ಪಿರ್ಯಾದಿಯ ಮಗನನ್ನು ಕಾಲೇಜಿನಿಂದ ವಾಪಸ್ಸು ಕಳುಹಿಸಿರುತ್ತಾರೆ.
ಪಿರ್ಯಾದುದಾರರ ಮಗನಿಗೆ ಕಾಲೇಜಿನಿಂದ ವಾಪಸ್ಸು ಕಳುಹಿಸಿದ ಕಾರಣ ಎ-1 ಆರೋಪಿಗೆ ಹಣವನ್ನು ಕೊಡುವುದನ್ನು ತಪ್ಪಿಸಿಕೊಳ್ಳಲು ಒಳ ಸಂಚನ್ನು ರೂಪಿಸಿ ಮಹಾರಾಷ್ಟ್ರದಲ್ಲಿ ಪರಿಚಯವಿದ್ದ ಲೈಂಗಿಕ ಕಾರ್ಯಕರ್ತೆಯರನ್ನು ಪಿರ್ಯಾದಿ ಜೊತೆಯಲ್ಲಿ ಮೆಜೆಸ್ಟಿಕ್‍ನಲ್ಲಿ ಲಾಡ್ಜ್ ಬುಕ್ ಮಾಡಿಕೊಂಡು ಲಾಡ್ಜ್‍ನಲ್ಲಿ ರೂಮ್ ಮಾಡಿಕೊಂಡಿರುತ್ತಾರೆ.
ಎ-1 ಆರೋಪಿ ಬೆಂಗಳೂರಿನ ಪಬ್‍ನಲ್ಲಿ ಪರಿಚಯವಿದ್ದ ಮತ್ತೊಬ್ಬ ಸ್ನೇಹಿತನ ಮುಖಾಂತರ ಮತ್ತಿಬ್ಬರನ್ನು ಕರೆಹಿಸಿಕೊಂಡು ಅವರನ್ನು ನಕಲಿ ಪೊಲೀಸರಂತೆ ಬಿಂಬಿಸಿ, ಅವರಿಗೆ ವಾಕಿಟಾಕಿಯನ್ನು ವ್ಯವಸ್ಥೆ ಮಾಡಿ ಪಿರ್ಯಾದುದಾರರು ಮತ್ತು ಇಬ್ಬರು ಹೆಂಗಸರು ಲಾಡ್ಜ್‍ನಲ್ಲಿರುವ ಸಮಯದಲ್ಲಿ ವಾಕಿಟಾಕಿಯನ್ನು ಹಿಡಿದುಕೊಂಡು ಬಂದು ಪಿರ್ಯಾದಿಗೆ ಪೊಲೀಸರು ಎಂದು ಹೇಳಿ ಲಾಡ್ಜ್ ರೈಡ್ ಆಗಿದೆ ಎಂದು ಪಿರ್ಯಾದಿಗೆ ಹೆದರಿಸಿ ನಂತರ ಪಿರ್ಯಾದಿಗೆ ಮಹಿಳೆಯರ ಜೊತೆಯಲ್ಲಿರುವಂತೆ ಪೋಟೋವನ್ನು ತೆಗೆದು ಪಿರ್ಯಾದಿ ಬಳಿ ಇದ್ದ ಒಂದು ಚಿನ್ನದ ಚೈನ್, ಒಂದು ಚಿನ್ನದ ಉಂಗುರ, ಒಂದು ಹಿತ್ತಾಳೆ ಉಂಗುರ ಮತ್ತು ನಗದು ಹಣ 30000/-ರೂ ಅನ್ನು ಕಿತ್ತುಕೊಂಡು ನಕಲಿ ಪೊಲೀಸರು ಅಲ್ಲಿಂದ ಹೋಗುತ್ತಾರೆ.
ಇದಾದ ನಂತರ ಎ-1 ಆರೋಪಿ ಪೊಲೀಸರು ನಿಮ್ಮ ಮೇಲೆ ಕೇಸನ್ನು ಹಾಕುತ್ತಾರೆ ನಿಮ್ಮ ಮಾನ ಮರ್ಯಾದೆ ಹಾಳಾಗುತ್ತೆ ಎಂದು ಪಿರ್ಯಾದಿಗೆ ಹೆದರಿಸಿ ಪರಿಚಯವಿದ್ದರ ಮುಖಾಂತರ ಪಿರ್ಯಾದಿ ಬಳಿ ಮಾತನಾಡಿ ಪೊಲೀಸರಿಗೆ 50 ಲಕ್ಷ ಕೊಟ್ಟರೆ ಯಾವುದೇ ಕೇಸನ್ನು ಹಾಕುವುದಿಲ್ಲ ಎಂದು ಹೇಳಿದ ನಂತರ ಪಿರ್ಯಾದುದಾರರ ಜೊತೆಯಲ್ಲಿ ಇಬ್ಬರು ಆರೋಪಿಗಳನ್ನು ಪಿರ್ಯಾದಿ ಊರಿಗೆ ಕಳುಹಿಸಿ ಅವರ ಆಸ್ತಿಯನ್ನು ಚತ್ರಪತಿ ಶಿವಾಜಿ ಮಹಾರಾಜ ಕೋ ಆಪರೇಟಿವ್ ಸೊಸೈಟಿಯಲ್ಲಿ ಒತ್ತೆ ಇಟ್ಟು 50 ಲಕ್ಷ ಹಣವನ್ನು ಆರೋಪಿಗಳು ಪಡೆದುಕೊಂಡು ಆ 50 ಲಕ್ಷ ಹಣವನ್ನು ಆರೋಪಿಗಳು ನೀಡಿದ್ದಾರೆ.
ಆರೋಪಿಗಳು ಪಿರ್ಯಾದುದಾರರ ಬಳಿ ಮತ್ತೆ 20 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಾಗ ಪಿರ್ಯಾದುದಾರರು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರು. ಈ ಕೇಸಿನ ತನಿಖೆಯನ್ನು ಹಿರಿಯ ಅಧಿಕಾರಿಗಳು ಸಿಸಿಬಿಗೆ ವಹಿಸಿದ್ದರು.
ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದ 05 ಜನ ಆರೋಪಿಗಳನ್ನು ದಸ್ತಗಿರಿ ಮಡಿ ಆರೋಪಿಗಳಿಂದ 24 ಲಕ್ಷ ನಗದು ಹಣ, 25 ಗ್ರಾಂ ತೂಕದ ಚಿನ್ನದ ಒಡವೆಗಳು, ಮೊಬೈಲ್ ಫೋನ್‍ಗಳು, ಎರಡು ನಕಲಿ ವಾಕಿಟಾಕಿ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಎರಟಿಗ ಕಾರನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments