Ticker

6/recent/ticker-posts

Ad Code

Responsive Advertisement

ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಜ್ಯಪಾಲರ ಭೇಟಿ, ವೀಕ್ಷಣೆ

 ಮಡಿಕೇರಿ ಜು.01(ಕರ್ನಾಟಕ ವಾರ್ತೆ):- ಗೌರವಾನ್ವಿತ  ರಾಜ್ಯಪಾಲರಾದ ಶ್ರೀ  ಥಾವರ್ ಚಂದ್ ಗೆಹ್ಲೋಟ್ ಅವರು ಕುಟುಂಬ ಸಮೇತ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.




ಇಲ್ಲಿನ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.  

ಬಳಿಕ ಅಲ್ಲಿನ ಯುದ್ಧ ಟ್ಯಾಂಕ್, ಯುದ್ಧ ವಿಮಾನ, ಯುದ್ಧ ಹಡಗು ವೀಕ್ಷಿಸಿದರು. ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಜನರಲ್ ತಿಮ್ಮಯ್ಯ ಅವರ ಬಾಲ್ಯದ ಜೀವನ, ವಿದ್ಯಾಭ್ಯಾಸ, ಸೇನಾ ಕ್ಷೇತ್ರದಲ್ಲಿನ ಸಾಧನೆ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿ ದೇಶದ ಬಗ್ಗೆ ಜನರಲ್ ತಿಮ್ಮಯ್ಯ ಅವರಿಗೆ ಇರುವ ಸಮರ್ಪಣಾ ಭಾವ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಕೊಂಡಾಡಿದರು.

ಜನರಲ್ ತಿಮ್ಮಯ್ಯ ಅವರ ಬದುಕು, ಜೀವನವು ಯುವ ಜನತೆಗೆ ಪ್ರೇರಣಾದಾಯಕವಾಗಿದೆ . ದೇಶದ ಯುವ ಜನತೆ ಕೊಡಗಿಗೆ ಪ್ರವಾಸಕ್ಕೆ ಬಂದಾಗ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡುವಂತಾಗಬೇಕು ಎಂದು ರಾಜ್ಯಪಾಲರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನಾ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.***

Post a Comment

0 Comments

Ad Code

Responsive Advertisement