ಮಧುಗಿರಿ :ತಾಲೂಕಿನ ದೊಡ್ಡೇರಿ ಹೋಬಳಿಯ ದೊಡ್ಡೇರಿ ಗ್ರಾಮದಲ್ಲಿ ಇಂದು ಶಾಸಕರಾದ ಎಂ.ವಿ ವೀರಭದ್ರಯ್ಯನವರು ಹೈ ಮಾಸ್ಕ್ ದೀಪ ಅಳವಡಿಸುವ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಹಾಗೂ ವಿವಿಧ ಯೋಜನೆಯಡಿ ವಸತಿ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ವಿತರಿಸಿದರು.
ಹಾಗೆಯೇ ತಿಮ್ಲಾಪುರ ಗ್ರಾಮದ ಬಿಳಿ ಜೋಳದ ರಾಶಿ ಬೆಟ್ಟ ಎಂದೇ ಪ್ರಖ್ಯಾತಿ ಪಡೆದ ಖ್ಯಾತಿಯಾದ ಬೆಟ್ಟಕ್ಕೆ ಪ್ರವಾಸಿಗಾರ ಮನ ಸೆಳೆಯುತ್ತಿರುವ ಈ ಬೆಟ್ಟಕ್ಕೆ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಉದ್ಯಾವನ ನಿರ್ಮಿಸಬೇಕೆಂದು ದೊಡ್ಡೇರಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹರೀಶ್ ಶಾಸಕರಿಗೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ನಾಗಮಣಿ ರಂಗಸ್ವಾಮಿ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಶಿಲ್ಪ ಡಿ ,ಬಿ ಮಂಜುನಾಥ್, ವಿಜಯ ಪ್ರಕಾಶ್, ರಾಮಣ್ಣ, ಡಿ ಎನ್ ನಾಗರಾಜ್, ಡಿ,ಟಿ ಮಾರಣ್ಣ, ವರದರಾಜ್, ಬಾವಿ ಮನೆ ಕೋಮಲ, ದ್ವಾರಕೀಶ್, ಪುಟ್ಟಪ್ಪ, ಬಡವನಹಳ್ಳಿ ಗಣೇಶ್, ಬೋರ್ವೆಲ್ ಕುಮಾರ್, ಡಿಟಿ ಚೇತನ್ ಹಾಗೂ ಮುಖಂಡರು ಮತ್ತಿತರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ


0 Comments