ಬೆಂಗಳೂರು, ಜುಲೈ 27 (ಕರ್ನಾಟಕ ವಾರ್ತೆ) : 2022-23ನೇ ಸಾಲಿನ ಆಯವ್ಯಯ ಘೋಷಣೆಯಂತೆÉ 200 ಪರಿಶಿಷ್ಠ ಜಾತಿ ಮತ್ತು 100 ಪರಿಶಿಷ್ಠ ಪಂಗಡಗಳ ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಐ.ಐ.ಎಂ - ಬೆಂಗಳೂರಿನಲ್ಲಿ ಉದ್ಯಮಶೀಲತಾ ತರಬೇತಿ ನೀಡಲಾಗುತ್ತಿದೆ.
ಈ ತರಬೇತಿಯನ್ನು ಪಡೆಯಲು ಅಭ್ಯರ್ಥಿಯು ಪದವೀಧರರಾಗಿರಬೇಕು, ಗರಿಷ್ಠ ವಯೋಮಿತಿ 45 ವರ್ಷ ಹಾಗೂ ತರಬೇತಿಯು 5 ರಿಂದ 6 ತಿಂಗಳು ಇರುತ್ತದೆ. ತರಬೇತಿಯು ಆನ್‍ಲೈನ್ ಮತ್ತು ಆಫ್‍ಲೈನ್ ಮುಖಾಂತರ ಇರುವುದರಿಂದ ಆನ್‍ಲೈನ್ ತರಬೇತಿಗಾಗಿ ಅಭ್ಯರ್ಥಿಯು ಸ್ಮಾರ್ಟ್ ಫೋನ್ ಹೊಂದಿರಬೇಕು. ಆಫ್‍ಲೈನ್ ತರಬೇತಿಗಾಗಿ ಅಭ್ಯರ್ಥಿಗಳು ಐ.ಐ.ಎಂ - ಬೆಂಗಳೂರು ಕ್ಯಾಂಪಸ್‍ಗೆ ಹಾಜರಾಗಬೇಕಾಗಿರುತ್ತದೆ.
ದಿನಾಂಕ: 18-06-2022ರಂದು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್: www.sw.kar.nic.in ನಲ್ಲಿ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ದಿನ ಪತ್ರಿಕೆ, ಸಾಮಾಜಿಕ ಜಾಲತಾಣ ಹಾಗೂ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದ್ದು, ಅದರಂತೆ ಸುಮಾರು 600 ಅರ್ಜಿಗಳು ಸ್ವೀಕೃತಗೊಂಡಿರುತ್ತದೆ. ಪ್ರತಿ ಅಭ್ಯರ್ಥಿಗೆ ರೂ.1,97,000/- ಗಳನ್ನು ಸರ್ಕಾರದಿಂದ ಐ.ಐ.ಎಂ-ಬೆಂಗಳೂರು ರವರಿಗೆ ಭರಿಸಲಾಗುವುದು ಹಾಗೂ ತರಬೇತಿಗಾಗಿ ಪ್ರತಿ ಅಭ್ಯರ್ಥಿಗೆ ಒಂದು ಬಾರಿಗೆ ರೂ.10,000/-ಗಳ ಶಿಷ್ಯವೇತನವನ್ನು ಸರ್ಕಾರದಿಂದ ನೀಡಲಾಗುವುದು.
ದಿನಾಂಕ: 25-07-2022 ರಂದು ಈ ಎಲ್ಲಾ ಅರ್ಹ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲಾಯಿತು ಹಾಗೂ ಅವರೊಂದಿಗೆ ಸಂದರ್ಶನವನ್ನು ಸಹ ನಡೆಸಲಾಯಿತು. ಮೊದಲನೆಯ ಬ್ಯಾಚ್ 75 ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಲಾಗಿರುತ್ತದೆ.
ದಿನಾಂಕ: 28-07-2022 ರಂದು ಬ್ಯಾಂಕ್ವೆಟ್ ಹಾಲ್ ವಿಧಾನಸೌಧ ಇಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು 2022-23ನೇ ಸಾಲಿನ ಪ್ರಮುಖ ಆಯವ್ಯಯ ಘೋಷಣೆಗಳ ಕಾರ್ಯಕ್ರಮಗಳ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮುಖ್ಯಸ್ಥರು ಮತ್ತು ಐ.ಐ.ಎಂ.ಬಿ ನಿರ್ದೇಶಕರು ಎಂ.ಒ.ಯು. ವನ್ನು ಸಹಿ ಮಾಡಲಿದ್ದಾರೆ. ಇದರೊಂದಿಗೆ ಆಯ್ಕೆಯಾದ 10 ಮಹಿಳಾ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿಗಳಿಂದ ಆಯ್ಕೆ ಪತ್ರವನ್ನು ವಿತರಣೆ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments