ವಾರ್ತಾಜಾಲ ಸುದ್ದಿ ಮಧುಗಿರಿ:ಗ್ರಾಮೀಣಾ ಪ್ರದೇಶದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು ಕೋವಿಡ್ ಇಂದ ಕಳೆದ ೨ ವರ್ಷ ಶಿಕ್ಷಣದಲ್ಲಿ ಹಿನ್ನಡೆಯಾದ ಕಾರಣ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ ಸರಕಾರ ವ್ಯವಸ್ಥಿತ ಶಿಕ್ಷಣ ನೀಡಲು ಹೆಚ್ಚುವರಿ ತರಗತಿಗಳು ನಡೆಸುವ ಮೂಲಕ ಸಮನ್ವ ಶಿಕ್ಷಣ ನೀಡಲು ಶಿಕ್ಷಣ ಸಚಿವರ ಜತೆ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ತಿಳಿಸಿದರು.
ಪುರವರ ಹೋಬಳಿ ಗಿರೇಗೌಡನಹಳ್ಳಿ ಹೊರವಲಯದ ಬೇಲದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸಸಿ ನೆಡುವ ಕಾರ್ಯಕ್ರಮ, ಸಿಸಿರಸ್ತೆ ಕಾಮಗಾರಿ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋವಿಡ್ ವೇಳೆ ಎರಡು ವರ್ಷ ತರಗತಿಗಳು ನಡೆಯದ ಕಾರಣ ಹಲವು ಶಾಲಾ ಕೊಠಡಿಗಳು ದುಸ್ಥಿತಿಗೆ ತಲುಪಿವೆ, ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯ, ವಿರೋಧ ಪಕ್ಷದವರು ಇದನ್ನೇ ದೊಡ್ಡದ್ದು ಮಾಡವುದು ಸರಿಯಲ್ಲ. ಶಾಲಾ ಮಕ್ಕಳಿಗೆ ಶೂ ಬಟ್ಟೆ ಕೊಡುವುವುದು ಸರಕಾರ ಜವಾಬ್ದಾರಿ ಈಗಾಗಲೇ ಸರಕಾರ ೧೩೫ ಕೋಟಿ ಹಣ ಬಿಡುಗಡೆ ಮಾಡಿದೆ. ಎಸ್ ಡಿ ಎಂ ಸಿ ಅಧ್ಯಕ್ಷರೇ ನೇರವಾಗಿ ಖರೀಧಿ ಮಾಡಲು ಅವಕಾಶ ಕಲ್ಪಿಸಿದೆ, ಚುನಾವಣೆ ಸಮೀಪಿಸುತಿದ್ದು ಸರಕಾರದ ಮೇಲೆ ವಿನಾಃ ಕಾರಣ ವಿರೋಧ ಪಕ್ಷದವರು ಆರೋಪ ಮಾಡುತಿದ್ದಾರೆ ಎಂದರು.
ಹಿಂದೂ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಪರಸ್ಪರ ಹೊಂದಾಣಿಕೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾವಹಿಸುವುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ, ಈ ಭಾಗದ ಜನತೆ ಆರಾಧನೆ ಮಾಡುವ ದೇವಸ್ಥಾನ ನಿರ್ಮಾಣವಾಗಿದ್ದು ಸುಮಾರು ೩ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಕಾಂಪೌಂಡ್ ಸ್ಥಳಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಜತೆ ಹಾಗೂ ಸ್ಥಳಿಯರ ಸಹಕಾರದಿಂದ ಅಭಿವೃದ್ಧಿಯಾಗಿದೆ ಎಂದರು.
ಬಿಜೆಪಿ ಮುಖಂಡ ಕೃಷ್ಣಮೂರ್ತಿ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ಧಿ ಸರಕಾರ ಹೆಚ್ಚು ಒತ್ತು ನೀಡಿದ್ದು ಈಗಾಗಲೇ ಪುರವರ ಹೋಬಳಿಯಲ್ಲಿ ದುರಸ್ಥಿಯಲ್ಲಿರುವ ಸರಕಾರಿ ಶಾಲೆಗಳ ಮಾಹಿತಿ ಸಂಗ್ರಹಿಸಿಲಾಗಿದೆ ವಿ.ಪ ಸದಸ್ಯರು ಹಾಗೂ ಸಂಸದರ ಅನುದಾನ ಬಳಸಿಕೊಂಡು ಈ ಭಾಗದ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಸರಕಾರ ಮತ್ತು ನಮ್ಮ ಜನಪ್ರತಿನಿಧಿಗಳು ನಮಗೆ ಗುಣಾಮತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾಕ್ಷಾಯಣಿ ಕೃಷ್ಣಮೂರ್ತಿ, ಚೌಡಪ್ಪ, ಕಾಂತರಾಜು, ಹುಣಸವಾಡಿ ನಾಗರಾಜ್, ಹರೀಶ್, ಚಿಕ್ಕಣ್ಣ, ರಂಗನಾಥ್, ವೀರನಾಗೇನಹಳ್ಳಿ ನಾಗರಾಜ್, ಶಶಿಕುಮಾರ್, ಕೋಡ್ಲಾಪುರ ಶ್ರೀನಿವಾಸ್ ನರಸಿಂಹಮೂರ್ತಿ, ಹರೀಶ್ ಕುಮಾರ್, ಮತ್ತಿತರರಿದ್ದರು.
ವರದಿ: ನಾಗೇಶ್ ಜೀವಾ ಪುರವರ



0 Comments