ಬೆಂಗಳೂರು, ಜುಲೈ 26 (ಕರ್ನಾಟಕ ವಾರ್ತೆ) :2018, 2019, 2020 ಹಾಗೂ 2021ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ “Direct Benefit Transfer (DBT) Programme”ನ ಅಡಿಯಲ್ಲಿ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಅವರ 1ನೇ, 2ನೇ, 3ನೇ ಹಾಗೂ 4ನೇ ನವೀಕರಣಕ್ಕೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದೆ.
ಈ ಸಂಬಂಧವಾಗಿ ಕೇಂದ್ರ ಸರ್ಕಾರದ ವತಿಯಿಂದ ವೆಬ್‍ಸೈಟ್ www.scholarships.gov.ನ National e-Scholarship Portal ನಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿರುತ್ತದೆ. ಆದಕಾರಣ, 2022ನೇ ಸಾಲಿನಲ್ಲಿ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ನವೀಕರಣಗಳ ನಿಮಿತ್ತ ಈ ಪೋರ್ಟಲ್‍ನಲ್ಲಿಯೇ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಿರುತ್ತದೆ. ವಿದ್ಯಾರ್ಥಿಗಳು ಈ ವೆಬ್‍ಸೈಟನ್ನು ಕೂಡಲೇ ಸಂಪರ್ಕಿಸಿ ಆನ್‍ಲೈನ್ ಮೂಲಕ ದಿನಾಂಕ:31-10-2022ರೊಳಗೆ ಅರ್ಜಿಯನ್ನು ಸಲ್ಲಿಸುವುದು.
ಇಲಾಖಾ ವೆಬ್‍ಸೈಟ್‍ನಲ್ಲಿಯೂ ಕೂಡ 2018, 2019, 2020 ಹಾಗೂ 2021ನೇ ಸಾಲಿನಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ನವೀಕರಣಗಳಿಗೆ ಅರ್ಜಿ ಸಲ್ಲಿಸುವ ಕುರಿತು ಸುತ್ತೋಲೆಯನ್ನು ಅಳವಡಿಸಲಾಗಿದೆ.
ವೆಬ್‍ಸೈಟ್ :http://pue.karnataka.gov.in =>Scholarship=>MHRD Scholarship=> MHRD Scholarship RENEWAL. ವಿದ್ಯಾರ್ಥಿಗಳು ಈ ವೆಬ್‍ಸೈಟನ್ನು ಸಂಪರ್ಕಿಸಿ ತಮಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದು ದಿನಾಂಕ:31-10-2022ರೊಳಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು. ಪ್ರಥಮ ನವೀಕರಣ ಹಾಗೂ ಇನ್ನುಳಿದ ಮುಂದಿನ ನವೀಕರಣಗಳಿಗೆ ಆಧಾರ್ ಸಂಖ್ಯೆಯನ್ನು ಪಡೆದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರುವುದು. ಪ್ರಾಚಾರ್ಯರುಗಳು / ಸಂಸ್ಥೆಯವರು ಅರ್ಹ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವ / ತಿರಸ್ಕರಿಸುವ ಕಾರ್ಯವನ್ನು ತಮ್ಮ ಹಂತದಲ್ಲಿಯೇ ನಿರ್ವಹಿಸಬೇಕಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments