Ticker

6/recent/ticker-posts

Ad Code

Responsive Advertisement

ಶುದ್ಧ ನೀರಿನ ಕೊರತೆಯಾದರೆ ನೀರನ್ನು ಸಂಗ್ರಹಿಸಲು ಮಾಡಿಕೊಳ್ಳಬೇಕಾದ ಪರ್ಯಾಯ ವ್ಯವಸ್ಥೆ !

ಪ್ರವಾಹ ಬಂದಾಗ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ನೀರಿನಲ್ಲಿ ಮುಳುಗಿ ಹೋಗುವುದರಿಂದ ವಿದ್ಯುತ್ ಕೊರತೆ ನಿರ್ಮಾಣವಾಗುತ್ತದೆ. ವಿದ್ಯುತ್‌ದ ಅಭಾವದಿಂದ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ರಸ್ತೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ನೀರಿನ ಟ್ಯಾಂಕರ್‌ಗಳೂ ತಲುಪುವುದು ಕಠಿಣವಾಗುತ್ತದೆ. ಇದರ ಪರಿಣಾಮವಾಗಿ ಕುಡಿಯುವ ನೀರು ದೊರೆಯುವುದಿಲ್ಲ. ಇದಕ್ಕಾಗಿ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.

೧. ಹೆಚ್ಚು ನೀರನ್ನು ಸಂಗ್ರಹಿಸಲು ದೊಡ್ಡ ಸಂಪು, ಪಾತ್ರೆ ಮತ್ತು ಕೊಳಾಯಿಗಳು ಇರಬೇಕು.೨. ಅನೇಕ ಮನೆಗಳ ಮೇಲ್ಛಾವಣಿಯ ಮೇಲೆ ನೀರನ್ನು ಸಂಗ್ರಹಿಸಲು ಟ್ಯಾಂಕಿರುತ್ತದೆ. ಸಾಧ್ಯವಿದ್ದರೆ ಅದೇ ಸಂಪಿಗೆ ಹೆಚ್ಚುವರಿ ಸಂಪನ್ನು ಜೋಡಿಸಿ ನೀರನ್ನು ಸಂಗ್ರಹಿಸಬಹುದು, ಇದರಿಂದ ಅಧಿಕ ಕಾಲಾವಧಿಗಾಗಿ ನೀರು ಶೇಖರಣೆಗೊಳ್ಳಬಹುದು.೩. ಮನೆಯ ಮೇಲ್ಛಾವಣಿಯಿಂದ ಮಳೆಯ ನೀರು ಕೆಳಗೆ ಬರುವಲ್ಲಿ ಮೇಲ್ಛಾವಣಿಗೆ ನೀರಿನ ಹರಿನಾಳವನ್ನು ಜೋಡಿಸಿ ಸ್ವಚ್ಛ ನೀರನ್ನು ಉಪಯೋಗಿಸಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು.೪. ಉಪಲಬ್ಧವಿರುವ ನೀರನ್ನು ಮಿತವಾಗಿ ಬಳಸಬೇಕು. ನೀರನ್ನು ಮಿತವಾಗಿ ಬಳಸಲು ಊಟಕ್ಕೆ ತಟ್ಟೆ ಮತ್ತು ಬಟ್ಟಲುಗಳ ಬದಲು ಪತ್ರಾವಳಿ ಅಥವಾ ಕಾಗದದ (ಡಿಸ್ಪೋಸೆಬಲ್) ತಟ್ಟೆ, ಬಟ್ಟಲು, ಚಮಚ ಇತ್ಯಾದಿಗಳನ್ನು ಉಪಯೋಗಿಸಬೇಕು.

ನೀರನ್ನು ಶುದ್ಧಗೊಳಿಸುವ ಪದ್ಧತಿಗಳು

೧. ಮಳೆಗಾಲದಲ್ಲಿ, ಹಾಗೆಯೇ ಪ್ರವಾಹಗಳ ಪರಿಸ್ಥಿತಿಯಲ್ಲಿ ಕಲುಷಿತ ನೀರಿನ ಪೂರೈಕೆಯಾಗುತ್ತದೆ. ಆದುದರಿಂದ ನೀರನ್ನು ಕುದಿಸಿ, ಸೋಸಿ ಕುಡಿಯುವುದು, ಸ್ಫಟಿಕದ ಉಪಯೋಗ ಇತ್ಯಾದಿ ನೀರು ಶುದ್ಧಗೊಳಿಸುವ ದೇಶಿ ಪದ್ಧತಿಗಳನ್ನು ಉಪಯೋಗ ಮಾಡಬೇಕು.

೨. ತೆಂಗಿನಕಾಯಿಯ ಗೆರಟೆಗಳನ್ನು ಸುಟ್ಟ ನಂತರ ಅದರ ಸುಟ್ಟ ತುಂಡುಗಳು ಉಳಿಯುತ್ತವೆ. ಅವುಗಳನ್ನು ನೀರಿನಲ್ಲಿ ಹಾಕಿದರೆ ನೀರು ನೈಸರ್ಗಿಕ ರೀತಿಯಲ್ಲಿ ಶುದ್ಧವಾಗುತ್ತದೆ.

೩. ಅನೇಕ ಔಷಧಾಲಯಗಳಲ್ಲಿ ‘ವಾಟರ್ ಡಿಸ್‌ಇನ್ಫೆಕ್ಷನ್ ಟ್ಯಾಬಲೆಟ್ಸ್ (ನೀರು ಶುದ್ಧೀಕರಿಸುವ ಮಾತ್ರೆಗಳು) ಸಿಗುತ್ತವೆ. ೨೦ ಲೀಟರ್ ನೀರಿಗೆ ಒಂದು ಮಾತ್ರೆ ಹಾಕಿದರೆ ಅರ್ಧ ಗಂಟೆಯಲ್ಲಿ ನೀರು ಉಪಯೋಗಿಸುವಷ್ಟು ಶುದ್ಧವಾಗುತ್ತದೆ.

೪. ಸದ್ಯ ಮಾರುಕಟ್ಟೆಯಲ್ಲಿ ಫಿಲ್ಟರ್ ಇರುವ ಬಾಟಲಿಗಳು ಸಿಗುತ್ತವೆ. ಈ ಬಾಟಲಿಗಳಲ್ಲಿ ಅಳವಡಿಸಿದ ಫಿಲ್ಟರ್‌ಗೆ ೧ ಸಾವಿರ ಲೀಟರ್ ನೀರನ್ನು ಶುದ್ಧಗೊಳಿಸುವ ಕ್ಷಮತೆಯಿರುತ್ತದೆ. ಈ ಬಾಟಲಿಯಲ್ಲಿ ಅಶುದ್ಧ ನೀರನ್ನು ಹಾಕಿದಾಗ ಅದರಲ್ಲಿರುವ ಫಿಲ್ಟರಿನಿಂದಾಗಿ ನೀರಿನಲ್ಲಿರುವ ಜೀವ-ಜಂತುಗಳು, ಕ್ಷಾರ ಇತ್ಯಾದಿಗಳು ನಾಶವಾಗಿ ನೀರು ಶುದ್ಧವಾಗುತ್ತದೆ. ಆಪತ್ಕಾಲದ ಸ್ಥಿತಿಯಲ್ಲಿ ಕುಡಿಯುವ ನೀರು ಉಪಲಬ್ಧವಿಲ್ಲದಿದ್ದರೆ, ನೀರು ಶುದ್ಧೀಕರಿಸಲು ಈ ಪರ್ಯಾಯವನ್ನು ಉಪಯೋಗಿಸಬಹುದು.

(ಹೆಚ್ಚಿನ ಮಾಹಿತಿಗಾಗಿ ಓದಿರಿ, ಸನಾತನ ನಿರ್ಮಿತ ಗ್ರಂಥ : 'ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ !')





Post a Comment

0 Comments

Ad Code

Responsive Advertisement