ವಾರ್ತಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಇಮ್ಮಮಡಗೋಂಡನಹಳ್ಳಿ ಮತ್ತು ರಾಮನಹಳ್ಳಿಗೆ ಹಾದುಹೋಗುವ ಜಯಮಂಗಲಿ ನದಿಯ ಸೇತುವೆ ಇದ್ದು ಈ ಸೇತುವೆ ಬರೀ ಗುಂಡಿಗಳಿಂದ ಸೇರಿದ್ದು ಇಲ್ಲಿ ತುಂಬಾ ಅಪಘಾತಗಳು ಸಂಭವಿಸುತಲೇಯಿದ್ದು. ಈ ಗುಂಡಿಗಳು ಸಾವಿಗಾಗಿಯೆ ಬಾಯಿ ತೆರೆದಿರುವಂತೆ ಕಾಣುತ್ತದೆ.
ಹಾಗೆ ಮಳೆಗಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಾದಾಗ ಜಯಮಂಗಲಿ ನದಿಯು ಹರಿಯುತ್ತದೆ, ಆಗ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ಇಮ್ಮಡಗೊಂಡನಹಳ್ಳಿ ಕಡೆ ತಲುಪುವುದಕ್ಕೂ ಕೂಡ ಆಗುವುದಿಲ್ಲ. ಹಾಗೆ ಮೊದಲು ಈ ರಸ್ತೆಯು ಸರಿ ಇದ್ದಾಗ ಈ ಊರಿಗೆ ಬಸ್ಸಿನ ಸೌಲಭ್ಯವು ಕೂಡ ಇತ್ತು ಆದರೆ ಈಗ ಸೇತುವೆಯ ರಸ್ತೆ ಸಂಚರಿಸಲು ಅಲ್ಪಪ್ರಮಾಣದಲ್ಲಿ ಯೋಗ್ಯವಾದ ಕಾರಣ ಈಗ ಬಸ್ಸುಗಳ ವ್ಯವಸ್ಥೆಯು ಕೂಡ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಇನ್ನು ಈ ರಸ್ತೆಯು ಸುತ್ತಮುತ್ತ ಹಳ್ಳಿಗಳಾದ ಕೊಡ್ಲಾಪುರ, ತಾಳಕೆರೆ, ಹೊಸಹಳ್ಳಿ, ವೀರನಾಗೇನಹಳ್ಳಿ, ಕಾಳೆನಹಳ್ಳಿ, ಗೋವಿಂದನಹಳ್ಳಿ, ಮುಂತಾದ ಹಳ್ಳಿಗಳಿಗೆ ಇದೊಂದೇ ರಸ್ತೆ ಮುಖ್ಯ ಸಂಪರ್ಕ ರಸ್ತೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚಾದಾಗ ಈ ಹಳ್ಳಿಯ ಗ್ರಾಮಸ್ಥರು ಕೆಲವೊಮ್ಮೆ ಮೂರು ನಾಲ್ಕು ದಿನಗಳವರೆಗೆ ತಮ್ಮ ಹಳ್ಳಿಯಲ್ಲಿಯೇ ಉಳಿದು ಕೊಳ್ಳಬೇಕಾಗುತ್ತದೆ.
ಕಾರಣ ಬೇರೆಡೆಗೆ ರಸ್ತೆ ಸಂಪರ್ಕ ಕಲ್ಪಿಸುವ ದಾರಿಯು ಕೂಡ ಇಲ್ಲದಂತಾಗುತ್ತದೆ. ಈ ಸೇತುವೆಯ ಎತ್ತರ ಕಡಿಮೆ ಇದ್ದು ನೀರಿನ ಪ್ರಮಾಣ ಹೆಚ್ಚಾದಾಗ ರಾಮನಹಳ್ಳಿ ಮತ್ತು ಇಮ್ಮಡಮಡಗೋಂಡನಹಳ್ಳಿ ಯ ಜನರು ತಮ್ಮ ತಮ್ಮ ಊರುಗಳಲ್ಲಿಯೇ ಇರಬೇಕಾಗುವ ಪರಿಸ್ಥಿತಿ ಉಂಟಾಗಿದೆ. ರಸ್ತೆಯು ಈ ಎಲ್ಲಾ ಹಳ್ಳಿಗಳಿಗೆ ಸಂಪರ್ಕ ಸೇತುವೆ ಆಗಿದ್ದು ಅಕ್ಕಪಕ್ಕದ ಹಳ್ಳಿಗಳಾದ ಕೊಡ್ಲಾಪುರ, ತಾಳಕೆರೆ, ಹೊಸಹಳ್ಳಿ, ವೀರನಾಗೇನಹಳ್ಳಿ, ಕಾಳೆನಹಳ್ಳಿ, ಗೋವಿಂದನಹಳ್ಳಿ ಗ್ರಾಮಗಳ ಸಾರ್ವಜನಿಕರು ಪರದಾಡುವಂತಾಗಿದೆ. ಹಾಗೂ ಇನ್ನು ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೊರಡಲು ತೊಂದರೆಯಾಗುತ್ತಿದೆ.
ಇನ್ನೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲೀ ಗಮನಿಸದೇ ಇರುವುದು ನಿಜಕ್ಕೂ ಸೋಜಿಗವೇ ಸರಿ. ಹಾಗೆಯೇ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಈ ರಸ್ತೆಯ ಕಡೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವುದು ಅವರ ಕರ್ತವ್ಯವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ತಂದಂತಾಗಿದೆ. ಸಾರ್ವಜನಿಕರು ತಮ್ಮ ಮಕ್ಕಳ ಮತ್ತು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರದ ಸ್ಥಿತಿಗಳನ್ನು ಕಂಡು ಕಿಡಿಕಾರುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲೀ ತಕ್ಷಣ ಈ ರಸ್ತೆಯನ್ನು ಸರಿಪಡಿಸಿದರೆ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಊರಿನ ಗ್ರಾಮಸ್ಥರಾದ ರಂಗನಾಥ ಗೌಡ, ನಂಜೇಗೌಡ, ಹನುಮಂತರಾಯಪ್ಪ, ಮಹೇಶ್, ನವೀನ್, ನಾಗರಾಜು, ನಂಜುಂಡಪ್ಪ, ಮೋಹನ್ ಕುಮಾರ್, ನರಸಿಂಹಮೂರ್ತಿ ಹನುಮಂತರಾಯಪ್ಪ, ರವಿಶಂಕರ್, ಲಿಂಗೇಗೌಡ, ದಾಸಪ್ಪ, ದೇವರಾಜು, ಮುಂತಾದವರು ಆಗ್ರಹ ಮಾಡಿದ್ದಾರೆ.
ವರದಿ:ನಾಗೇಶ್ ಜೀವಾ ಪುರವರ.
ವಾರ್ತಾಜಾಲ.



0 Comments