Ticker

6/recent/ticker-posts

Ad Code

Responsive Advertisement

ASARA - PRESS CLUB OF BANGALORE - ಪತ್ರಕರ್ತರ ಕುಟುಂಬದವರಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

ಬೆಂಗಳೂರು : ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಆಸ್ರ ಆಸ್ಪತ್ರೆ ಬೆಂಗಳೂರು ಇವರ ಆಶ್ರಯದಲ್ಲಿ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರಿಗೆ 16-07-2022ರ ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮವನ್ನು  ಏರ್ಪಡಿಸಲಾಗಿತ್ತು.





ಈ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಶುಗರ್, ಬಿಪಿ, ಕಣ್ಣು ಪರೀಕ್ಷೆ, ಇಸಿಜಿ ಮತ್ತಿತರೆ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಪ್ರೆಸ್ ಕ್ಲಬ್ ಸದಸ್ಯರು, ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರು ಭಾಗವಹಿಸಿ ಸದುಪಯೋಗಪಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್‍ನ ಅಧ್ಯಕ್ಷರಾದ ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಬೆಂಗಳೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಾಸಕ ರಿಜ್ವಾನ್ ಇರ್ಷಾದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರ ಬಗ್ಗೆ ಹಿತನುಡಿಗಳನ್ನಾಡಿದರು.

ಪತ್ರಕರ್ತರ ಏಳಿಗೆಗಾಗಿ ಸದಾ ಮಿಡಿಯುತ್ತಿರುವ ಪ್ರೆಸ್ ಕ್ಲಬ್ ಇದೇ ರೀತಿ ಹಲವಾರು ಸದುಪಯೋಗದ ಯೋಜನೆಗಳನ್ನು ಪತ್ರಕರ್ತರ ಪರವಾಗಿ ನಿರಂತರವಾಗಿ ಮಾಡಲಿ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹೆಚ್ಚಿನ ಶಕ್ತಿ ಪ್ರೋತ್ಸಾಹ ಸಿಗಲಿ ಎಂಬುದೇ ಪತ್ರಕರ್ತರ ಆಶಯ.

Post a Comment

0 Comments

Ad Code

Responsive Advertisement