Ticker

6/recent/ticker-posts

Ad Code

Responsive Advertisement

ಬಳ್ಳಾರಿ : ರಾಘವ ಪ್ರಶಸ್ತಿಗೆ ಅರ್ಜಿ ಅಹ್ವಾನ

ಬಳ್ಳಾರಿ ಜು.06: ದಿನಾಂಕ 2 ಮತ್ತು 3ನೇ ಅಗಸ್ಟ್ 2022ರಂದು ಬಳ್ಳಾರಿ ರಾಘವರವರ 142ನೇ ಜಯಂತಿ ಪ್ರಯುಕ್ತ ರಾಘವ ಮೆಮೋರಿಯಲ್ ಅಸೋಸಿಯೇಶನ್ ವತಿಯಿಂದ ಸತತವಾಗಿ 13 ವರ್ಷಗಳಿಂದ ಕನ್ನಡ ಮತ್ತು ತೆಲುಗು ರಂಗಭೂಮಿ ಕಲಾವಿದರಿಗೆ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ.

 ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ಮತ್ತು ತೆಲುಗು ರಂಗಭೂಮಿ ಕಲಾವಿದರಿಗೆ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಒಂದು ಮತ್ತು ಜಿಲ್ಲಾ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.


ಈ ಕಾರ್ಯಕ್ರಮದ ಅಂಗವಾಗಿ ರಾಜ್ಯ ಹಾಗೂ ಬಳ್ಳಾರಿ ಜಿಲ್ಲಾ ರಂಗಭೂಮಿ ಕಲಾವಿದರ ನಾಟಕ ಕಲಾ ಸೇವೆಯನ್ನು ಪ್ರತಿಬಿಂಬಿಸುವ ದಾಖಲೆಯ (ಬಯೋಡೇಟಾ) ವಿವರವನ್ನು ದಿನಾಂಕ 15.07.2022ರೊಳಗಾಗಿ ಅಧ್ಯಕ್ಷರು / ಗೌರವ ಕಾರ್ಯದರ್ಶಿ, ರಾಘವ ಕಲಾಮಂದಿರ, ಡಾ|| ರಾಜಕುಮಾರ್ ರಸ್ತೆ, ಬಳ್ಳಾರಿ ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿಸುತ್ತೇವೆ. ಕಲಾವಿದರ ವಯೋಮಿತಿ 50 ವರ್ಷ ಮೇಲ್ಪಟ್ಟಿರಬೇಕು. ಕಲಾವಿದರು ಕನಿಷ್ಠ 20 ವರ್ಷಗಳ ಕಾಲ ರಂಗಭೂಮಿ ನಾಟಕದಲ್ಲಿ ಕಲಾ ಸೇವೆಯನ್ನು ಮಾಡಿರಬೇಕು. 
ಹೆಚ್ಚಿನ ಮಾಹಿತಿಗಾಗಿ ಕೆ.ಕೋಟೇಶ್ವರರಾವು, ಅಧ್ಯಕ್ಷರು, ಮೊ: 9448077079, ರಮೇಶ್‍ಗೌಡ ಪಾಟೀಲ್, ಗೌರವ ಕಾರ್ಯದರ್ಶಿ, ಮೊ: 9448074355

 


Post a Comment

0 Comments

Ad Code

Responsive Advertisement