Ticker

6/recent/ticker-posts

Ad Code

Responsive Advertisement

ಶಿಕ್ಷಣದಿಂದ ಮಾತ್ರ ಪ್ರಗತಿ, ಸರ್ವತೋಮುಖ ಅಭಿವೃದ್ಧಿ ಸಾಧ್ಯ : ಶಾಸಕ ಬಿ.ನಾಗೇಂದ್ರ

ಬಳ್ಳಾರಿ ಜುಲೈ 07.ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಹೇಳಿದರು.ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಮರಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗೋಡೆಹಾಳು ಗ್ರಾಮದಲ್ಲಿ ಡಿಎಂಎಫ್ ಅನುದಾನದಲ್ಲಿ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಶಾಸಕ ಬಿ.ನಾಗೇಂದ್ರ ರವರು ಸಮಾಜದಲ್ಲಿರುವ ಶಿಕ್ಷಣದಿಂದ ಮಾತ್ರ ದಲಿತರ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲಾ ಸಮುದಾಯಗಳ ಪ್ರಗತಿಗೆ ಶಿಕ್ಷಣ  ಅತ್ಯಗತ್ಯವಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲೂ ತಮ್ಮ ಮಕ್ಕಳಿಗೆ ನೈತಿಕ ಯುಕ್ತವಾದ ಗುಣಾತ್ಮಕ ಶಿಕ್ಷಣವನ್ನು ಅದೂ ಉನ್ನತಮಟ್ಟದವರೆಗೆ ಕೊಡಿಸಬೇಕೆಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಅಮರಾಪುರ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಶಂಕರಗೌಡ, ಪಿಡಿಓ ಹುಸೇನ್ ಪೀರಾ, ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನಗೌಡ, ಅಂಜಿನಿ, ಹನುಮೇಶ್, ಗಾದಿಲಿಂಗಪ್ಪ, ಶಿವಣ್ಣ ತಾ.ಪಂ. ಮಾಜಿ ಸದಸ್ಯ ಅಮರೇಗೌಡ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಲಕ್ಷ್ಮೀಕಾಂತರೆಡ್ಡಿ, ವಿರುಪಾಕ್ಷ ರೆಡ್ಡಿ, ಲಿಂಗಾರೆಡ್ಡಿ, ದೇವೇಂದ್ರ, ರಾಜಾ, ಗೋಪಾಲ್, ಶಾಸಕರ ಆಪ್ತರಾದ ಗೋವರ್ಧನ್ ರೆಡ್ಡಿ, ಬಿ.ದುರುಗಣ್ಣ, ಮಹಾನಗರ ಪಾಲಿಕೆ ಸದಸ್ಯರಾದ ಬಿ.ಆರ್.ಎಲ್ ಸೀನಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಂಧುವಾಳ ಗಾದಿಲಿಂಗನಗೌಡ, ಯರ್ರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ಹಗರಿ ಗೋವಿಂದ ಸೇರಿದಂತೆ ಈ ಭಾಗದ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ಹಿರಿಯ ಧುರೀಣರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



 

Post a Comment

0 Comments

Ad Code

Responsive Advertisement