Ticker

6/recent/ticker-posts

Ad Code

Responsive Advertisement

ಸಚಿವ ಮುನಿರತ್ನ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

ಬೆಂಗಳೂರು : ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ತೋಟಗಾರಿಕೆ ಸಚಿವರು ಆಗಿರುವ ಮುನಿರತ್ನರವರ ಹುಟ್ಟು ಹಬ್ಬದ ಅಂಗವಾಗಿ, ಜೆ.ಪಿ.ಪಾರ್ಕ್‌ ವಾರ್ಡ್ ನ ಶ್ರೀ ಚೌಡೇಶ್ವರಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೆ.ಪಿ.ಪಾರ್ಕ್ ವಾರ್ಡಿನ ಬಿಜೆಪಿ ಪಕ್ಷದ ಮುಖಂಡರಾದ  ಶ್ರೀಮತಿ ಸುನಂದ ಬೋರೇಗೌಡ ಹಾಗೂ ಧನಲಕ್ಷ್ಮೀ ಕನ್ಸ್ಟ್ರಟ್ರಕ್ಷನ್ ,ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್. ರಮೇಶ್ ರವರುಗಳು ಆಯೋಜಿಸಿದ್ದರು.

ರೋಟರಿ ಗೋಕುಲ್ ವಿದ್ಯಾ ಸಹಯೋಗದೊಂದಿಗೆ ರೋ. ಬಿ.ನರಸಿಂಹರಾಜು ಮತ್ತು ಅವರ ತಂಡದವರು ಶಿಬಿರದ ನಿರ್ವಹಣೆ ಜವಾಬ್ದಾರಿಯನ್ನು  ವಹಿಸಿದ್ದರು. 

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ  ಸಚಿವ ಮುನಿರತ್ನರವರ ಯುವ ಅಭಿಮಾನಿಗಳು, ತಮ್ಮ ನೆಚ್ಚಿನ ನಾಯಕನ ಹೆಸರಿನಲ್ಲಿ ಸಾರ್ವಜನಿಕ ಉಪಯುಕ್ತತೆಗಾಗಿ ಸ್ವಯಂಪ್ರೇರಿತರಾಗಿ ಶಿಬಿರದಲ್ಲಿ ರಕ್ತವನ್ನು ದಾನ ಮಾಡಿದರು. ಈ ಸಂದರ್ಭದಲ್ಲಿ ಜೆ. ಪಿ. ಪಾರ್ಕ್ ವಾರ್ಡ್ ಬಿಜೆಪಿ  ಅಧ್ಯಕ್ಷ ಶ್ರೀಧರ್ ಜಿ.ಯಾಜಿ,   ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement