ಮಧುಗಿರಿ: ತಾಲೂಕಿನಲ್ಲಿ ಖಾತೆ ಬದಲಾವಣೆ ಮಾಡಿಕೊಡುವ ಸಲುವಾಗಿ ಲಂಚಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಒಳಗಾಗಿರುವ ಘಟನೆ ಮಧುಗಿರಿ ಉಪವಿಭಾಗ ಕಚೇರಿಯ ಸಮೀಪ ಇರುವ ಟೀ ಸ್ಟಾಲ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಶಿರಾ ತಾಲೂಕ್ ಬುಕ್ಕಾಪಟ್ಟಣ ವಾಸಿಯೊಬ್ಬರು ಸಿವಿಲ್ ನ್ಯಾಯಾಲಯದ ಡಿಗ್ರಿಯ ಆದೇಶದಂತೆ ಅವರ ತಂದೆ ಹೆಸರಿಗೆ ಶಿರಾ ತಾಲೂಕ್ ಮಾದೇನಹಳ್ಳಿ ಸರ್ವೆ ನಂಬರ್ 34/2 ರ ಜಮೀನಿನ ಖಾತೆಗಾಗಿ ಶಿರಾ ತಹಶೀಲ್ದಾರ್ ಕಛೇರಿಗೆ ಮನವಿ ಕೊಟ್ಟಿದ್ದರು . ಅದರಂತೆ ಕಡತವು ಶಿರಾ ತಾಲೂಕ್ ಕಛೇರಿಯಿಂದ ಮಧುಗಿರಿ ಎಸಿ ರವರ ಕಛೇರಿಯಲ್ಲಿ ಸ್ವೀಕೃತವಾಗಿತ್ತು . 2022 ರ ಜೂಲೈ 20 ರಂದು ಉಪವಿಭಾಗಾಧಿಕಾರಿ ರವರ ಕಛೇರಿಯ ಎಸ್.ಡಿ.ಎ ಆದ ಎಲ್. ಮೋಹನ್‌ಕುಮಾರ್ ಸದರಿ ಜಮೀನಿನ ಖಾತೆ ಮಾಡಿಸಿಕೊಡುವ ಸಲುವಾಗಿ ಪಿರಾದಿ ರವರಿಗೆ 3 ಸಾವಿರ ರೂ ಲಂಚದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಿರಾದಿ ರವರು ನೀಡಿದ್ದ ದೂರಿನನ್ವಯ ತುಮಕೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು .
ಮಂಗಳವಾರ ನಡೆಸಿದ ಟ್ರಾಪ್ ಕಾರ್ಯಚರಣೆಯಲ್ಲಿ ಆರೋಪಿತ ಮೋಹನ್‌ಕುಮಾರ್ ಎಲ್ ರವರು ಮಧುಗಿರಿ ಟೌನ್‌ನ ಸಿವಿಲ್ ಬಸ್ಟಾಂಡ್ ನಲ್ಲಿರುವ ಮಾರುತಿ ಟೀ ಸ್ಟಾಲ್ ಬಳಿ ಪಿರಾದಿ ರವರಿಂದ 3000 / - ರೂ ಲಂಚದ ಹಣವನ್ನು ಸ್ವೀಕರಿಸುವಾಗ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಹಿತ ಆರೋಪಿಯನ್ನು ವಶಕ್ಕೆ ಪಡೆದು, ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತಾರೆ .
ಭ್ರಷ್ಟಾಚಾರ ನಿಗ್ರಹದಳ, ಕೇಂದ್ರವಲಯದ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಎಸಿಬಿ ಘಟಕದ ಡಿವೈಎಸ್‌ಪಿ ಮಲ್ಲಿಕಾರ್ಜುನ ಚುಕ್ಕಿ ಎಸ್. ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವೀರೇಂದ್ರ ಎನ್, ವಿಜಯಲಕ್ಷ್ಮಿ ಎಸ್ ಹಾಗೂ ಸಿಬ್ಬಂದಿಗಳಾದ ಡಿ. ನರಸಿಂಹರಾಜು, ಮೋಹನ್‌ಕುಮಾರ್ ಎಂ. ಶಿವಣ್ಣ ಕೆ.ಪಿ. ಚಂದ್ರಶೇಖರ್ ಎಂ.ಎಲ್.ನರಸಿಂಹರಾಜು, ಗಿರೀಶ್ ಕುಮಾರ್ ಟಿ.ಎಸ್ . ಯಶೋಧ, ರಮೇಶ್, ಮಹೇಶ್‌ಕುಮಾರ್ ರವರು ದಾಳಿಯಲ್ಲಿ ಭಾಗವಹಿಸಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.


0 Comments