ಬೆಂಗಳೂರು: "ಮೋಸ ಹೋಗುವವರು ಇರುವ ತನಕ ವಾಮಾಚಾರದ ಹೆಸರಿನಲ್ಲಿ ಮೋಸ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಇಂಥ ಸಮಯದಲ್ಲಿ ವೈಜ್ಞಾನಿಕ ಸಾಧ್ಯತೆಗಳ ಬಗ್ಗೆ ಚಿಂತನೆ ಮಾಡಿ. ಯೋಚಿಸದೇ ಮೋಸಕ್ಕೆ ಒಳಗಾಗಬೇಡಿ" ಎಂದು ಉಪನ್ಯಾಸಕ ಡಾ. ಹುಲಿಕಲ್ ನಟರಾಜ್ ಹೇಳಿದರು. ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದವು ಭಾನುವಾರ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟರಾಜ್ ಅವರು ತಮ್ಮ ಅನುಭವದ ಅನೇಕ ಸಂಗತಿಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು. "ಇಂದಿಗೂ ನಮ್ಮ ನಡುವೆ ಮೂಢನಂಬಿಕೆಗಳಿಂದಾಗಿ ಮೋಸಕ್ಕೆ ಒಳಗಾಗುವ ಅನೇಕ ಮಂದಿ ಇದ್ದಾರೆ.
ವಿದ್ಯಾವಂತರೇ ಇಂತಹ ಮೋಸಕ್ಕೆ ಗುರಿಯಾಗುತ್ತಿರುವುದು ವಿಷದನೀಯ. ದಯವಿಟ್ಟು ನಿಮ್ಮ ಸುತ್ತಮುತ್ತ ಇಂತಹ ಕೃತ್ಯಗಳಿಂದ ಮೋಸ ಮಾಡುತ್ತಿರುವ ಬಗ್ಗೆ ಯಾವುದೇ ಅನುಮಾನಗಳು ಕಂಡಲ್ಲಿ ಕೂಡಲೇ ನನಗೆ ತಿಳಿಸಿದಲ್ಲಿ ಸತ್ಯಾಸತ್ಯತೆ ಹೊರಗೆಡಹುವ ಕಾರ್ಯ ಮಾಡೋಣ. ಜನತೆಯಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳೋಣ. ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ಭಾಗಿಯಾಗೋಣ ಎಂದರು. ಯೋಗ ಕೇಂದ್ರದ ಯೋಗ ಗುರು ನಾಗೇಶ್ ಅವರು ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮದ ಬಳಿಕ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಕುಮಾರಿ ರಂಜಿತ. ವಿಜಯಕುಮಾರ್ ಅವರು ಕಥಕ್ ನೃತ್ಯ ಪ್ರದರ್ಶನ ನೀಡಿದರು. ಇನ್ನೊಬ್ಬ ವಿದ್ಯಾರ್ಥಿನಿ ಕುಮಾರಿ ಕ್ಷಮ, ಅಗ್ನಿಹೋತ್ರಿ ಭರತನಾಟ್ಯ ಪ್ರದರ್ಶನ ನೀಡಿ ರಂಜಿಸಿದರು. ಇದೇ ಸಂದರ್ಭದಲ್ಲಿ ಯೋಗ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಆಸನಗಳ ಮೂಲಕ ತಮ್ಮ ಸಾಮಥ್ರ್ಯ ಪ್ರದರ್ಶಿಸಿದರು.
ಕಳೆದ 25 ವರ್ಷಗಳಿಂದ ಯೋಗ ತರಬೇತಿ ಸೇರಿದಂತೆ ಇನ್ನೂ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿರುವ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ ಈವರೆಗೆ ಸಾವಿರಾರು ಮಂದಿಗೆ ಯೋಗ ತರಬೇತಿ ನೀಡಿದೆ. ಸತತ 15 ಗಂಟೆಗಳಲ್ಲಿ 1009 ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ಹಾಗೂ 144 ವಿದ್ಯಾರ್ಥಿಗಳು 17,43,552 ಯೊಗ ಭಂಗಿಗಳನ್ನು ಪ್ರದರ್ಿನ್ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ರೆ ಕಾರ್ಡ್ ನಾಲ್ನು ದಾಖಲೆಗಳನ್ನು ನಿರ್ಮಿಸಿದೆ. ಅನೇಕ ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಯೋಗ ಕೇಂದ್ರವು ತೊಡಗಿಸಿಕೊಂಡಿದೆ.
ಧನ್ಯವಾದಗಳು
ತಮ್ಮ ವಿಶ್ವಾಸಿ
ನಾಗೇಶ್ ರಾವ
ಪಾರಂರ್ನಪಾಲ್ರನ
ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ
ಮಹಾಲಕ್ಷ್ಮೀ ಪುರ, ಬೆಂಗಳೂರು
(ವಿವರಗಳಿಗೆ ಸಂಪರ್ಕಿಸಿ: +91 9845050333(

.jpeg)
0 Comments