ಬಳ್ಳಾರಿ ಜುಲೈ 06. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಚಾಗನೂರು ಗ್ರಾಮದಲ್ಲಿ "ಪಾರ್ಥ ವಿಜಯ" ಬಯಲಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಯಲಾಟ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಭಾಗವಹಿಸಿ, ಈ ಬಯಲಾಟ ಪ್ರದರ್ಶನಕ್ಕೆ 51,000 ರೂಪಾಯಿಗಳನ್ನು ದೇಣಿಗೆ ನೀಡಿದರು. ಮಾನ್ಯ ಶಾಸಕರು ಮಾತನಾಡಿ ನಮ್ಮ ಹಳ್ಳಿಗರು ಸಾಂಪ್ರದಾಯಿಕ ನಾಟಕಗಳನ್ನು ನೋಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ಉಳಿಸುತ್ತಿದ್ದಾರೆ. ಈ ನಾಟಕದಲ್ಲಿ ಬರುವ ಕೆಲವು ಪಾತ್ರಗಳ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಗ್ರಾಮದ ಆದಿ ದೇವತೆ ಶ್ರೀ ದ್ಯಾವಮ್ಮ ದೇವಿ ನಿಮ್ಮೆಲ್ಲರಿಗೂ ಸುಖ-ಸಂತೋಷ, ಆಯುಷ್ಯ-ಆರೋಗ್ಯ ಮತ್ತು ಉತ್ತಮ ಬೆಳೆಯನ್ನು ನೀಡಿ ರೈತರಲ್ಲಿ ಹರುಷ ತರಲಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಯಲಾಟಗಳನ್ನು ಆಡಲು ಶಕ್ತಿ ನೀಡಲೆಂದು ಗ್ರಾಮಿಣ ಶಾಸಕ ಬಿ.ನಾಗೇಂದ್ರ ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶೇಷರೆಡ್ಡಿ, ಕೋಟಿರೆಡ್ಡಿ, ಸೋಮರೆಡ್ಡಿ, ಎರ್ರಿಸ್ವಾಮಿ ರೆಡ್ಡಿ, ಕೆ.ಮೇಟಿ ಶ್ರೀನಿವಾಸ್, ಶೇಖಣ್ಣ, ಬಜ್ಜಯ, ಕೆಂಪು ದೇವೇಂದ್ರಪ್ಪ, ಸಣ್ಣ ಗಾದಿಲಿಂಗಪ್ಪ, ಕರಡಿ ತಿಪ್ಪಯ್ಯ, ಸೊಸೈಟಿ ನಾಗರಾಜ್, ಬುಗುಲು ಬಸವರಾಜ್, ಆಂಜನೇಯ, ಶಾಸಕರ ಆಪ್ತರಾದ ಗೋವರ್ಧನ್ ರೆಡ್ಡಿ, ಬಿ.ದುರುಗಣ್ಣ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಂಧುವಾಳ ಗಾದಿಲಿಂಗನಗೌಡ, ಯರ್ರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ಹಗರಿ ಗೋವಿಂದ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಮಾನ್ಯ ಶಾಸಕರ ಅಭಿಮಾನಿಗಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

0 Comments