Ticker

6/recent/ticker-posts

Ad Code

Responsive Advertisement

ಮುನ್ಸಿಪಲ್ ಕಾರ್ಮಿಕರ ನ್ಯಾಯೋಜಿತ ಹಕ್ಕೋತ್ತಾಯಗಳನ್ನು ಪರಿಗಣಿಸಲು ಕೊರಿ ಸಲ್ಲಿಸಿದ ಮನವಿ ಪತ್ರ

ಈ ಮೂಲಕ  ಮೇಲ್ಕಂಡ  ವಿಷಯಕ್ಕೆ ಸಂಬಂದಿಸಿದಂತೆ  ತಮ್ಮಲ್ಲಿ  ಒತ್ತಾಯ ಪೂರಕವಾಗಿ  ಕೋರುವುದೆನೆಂದರೆ   ರಾಜ್ಯದ  ನಗರ ಸ್ಥಳಿಯ ಸಂಸ್ಥೆಗಳಲ್ಲಿ   ದುಡಿಯುವ  ರಾಜ್ಯದ ಎಲ್ಲಾ ನೇರ ಪಾವತಿ , ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ, ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛ ತಾ , ಪಾರ್ಕ, ಸ್ಮಶಾಣ, ಘನ ತ್ಯಾಜ್ಯ ಘಟಕ,  ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು , ನೀರು  ಸರಬರಾಜು ,ನೌಕರರು ,  ಕಂಪ್ಯೂಟರ್ ಅಪರೇಟರ್ಗಳನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ಜುಲೈ 1,2022ರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸ ್ವಚ ್ಚತಾಕಾರ್ಯ  ಸ ್ಥಗಿತಮಾಡಿ  ರಾಜ್ಯದ  ಎಲ್ಲಾ  ಮುನಿಸಿಪಲ್ ಕಾರ್ಮಿಕರ ಸಂಘಟನೆಗಳು ಜಂಟಿ ಹೋರಾಟ ಸಮಿತಿಯ  ಮುಂದಾಳ್ವದಲ್ಲಿ   ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಇದ್ದಾರೆ .

 ಮುನಿಸಿಪಲ್   ಕಾರ್ಮಿಕರ ಸೇವೆಗಳು  ನಾಗರೀಕ ಸಮಾಜದ ಮೂಲಭೂತ  ಅಗತ್ಯತೆಗಳಾ ಸ್ವಚ್ಚತೆ, ಒಳ ಚರಂಡಿ, ನೀರು ಸರಬರಾಜು, ಇವುಗಳಲ್ಲಿ   ಕಳೆದ  25-30 ವರ್ಷಗಳಿಂದ ದುಡಿದರು ಅವರ ಸೇವೆಗಳನ್ನು  ಖಾಯಂಗೊಳಿಸದ  ಕ್ರಮ  ನ್ಯಾಯ ಸಮ್ಮತವಾದ್ದುದಲ್ಲ,  ಮುನಿಸಿಪಲ್   ಕಾರ್ಮಿಕರ ನಡುವೆ  ಒಡಕ್ಕುಂಟು ಮಾಡದೆ  ಕಾರ್ಮಿಕರ  ನ್ಯಾಯೋಜಿತವಾದ ಹಕ್ಕೋತ್ತಾಯಗಳನ್ನು  ಪರಿಗಣಿಸುವಂತೆ  ಸೆಂಟರ್ ಅಫ್  ಇಂಡಿಯಾನ್ ಟ್ರೇಡ್ ಯೂನಿಯನ್  [ ಸಿಐಟಿಯು ]  ರಾಜ್ಯ ಸಮಿತಿಯು  ತಮ್ಮಲ್ಲಿ  ಅಗ್ರಹ ಪೂರಕವಾಗಿ ಕೊರುತ್ತದೆ. ನಾಗರಿಕರ ಹಿತದೃಷ್ಟಿಯಿಂದ ಸಹ  ಈ ಕಾರ್ಮಿಕರ  ಸೇವೆಗಳು  ತುರ್ತು ಅಗತ್ಯವಾಗಿರುವ  ಸೇವೆಗಳಾಗಿವೆ . ತಾವು ಈ ಬಗ್ಗೆ ಎಲ್ಲಾ ಖಾಯಂ ಅಲ್ಲದೆ ಇರುವ ಮುನಿಸಿಪಲ್ ಕಾರ್ಮಿಕರ ಹಿತಕಾಪಾಡುವ  ಮೂಲಕ  ನಾಗರೀಕರಿಗೆ ಅಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕೋರುತ್ತೆವೆ.

ಹಕ್ಕೊತ್ತಾಯಗಳು

 1. ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದಿ ್ಧ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪೌರಕಾರ್ಮಿಕರ, ಪಾರ್ಕ, ಸ್ಮಶಾಣ, ಘನ ತ್ಯಾಜ್ಯ ಘಟಕ,  ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟು ್ಟ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು , ನೀರು ಸರಬರಾಜು ಕಾರ್ಮಿಕರನ್ನು, ಕಂಪ್ಯೂಟರ್ ಅಪರೇಟೆರ್ಸ್ ಗಳನ್ನು ಏಕ ಕಾಲಕ್ಕೆ ಖಾಯಂ ಮಾಡಲೇಬೇಕು. 

2. ಅತಿ ಹೆಚಿ ್ಚನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು.

3. ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷು ್ಟ ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಎಲ್ಲಾ ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದಿ ್ಧ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನಚಾಲಕರು, ಸಹಾಯಕರನ್ನು, ಪಾರ್ಕ್, ಸ್ಮಶಾಣ, ಘನ ತ್ಯಾಜ್ಯ ಘಟಕ,  ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಗೃಹಭಾಗ್ಯ ಯೋಜನೆಗೆ ಸೇರಿಸುವ ಸರ್ಕಾರ ಅದೇಶವನ್ನು ಕೂಡಲೇ ಹೊರಡಿಸಬೇಕು,

ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ದಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರ ಮಕ್ಕಳು ಖಾಸಗಿ ಶಾಲೆಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅದಕ್ಕೆ ಅಗತ್ಯವಿರುವ ಹಣ ಕಾಸಿನ ನೆರವು ನೀಡಲು ಸೂಕ್ತ ಅದೇಶ ಹೊರಡಿಸಬೇಕು, 

4. ನೇರ ಪಾವತಿಯಡಿ 60 ವರ್ಷದವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಿರುವ/ ಸೇವೆಯಲ್ಲಿ  ಮರಣ ಹೊಂದುವವರ ಅವಲಂಬಿತರಿಗೆ ಸ್ವಚ್ಛತಾ/ ಮುನಿಸಿಲ್  ಕಾರ್ಮಿಕರು ಯಾವ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿಗೈಲಿ ಹೋಗುತ್ತಿದ್ದಾರೆ. ಈ ಕಾರ್ಮಿಕರಿಗೆ ತಲಾ ರೂ.10 ಲಕ್ಷ ಪರಿಹಾರ ನೀಡಬೇಕು, ಮಾಸಿಕ ರೂ.5000ಪಿಂಚಣಿ ಹಾಗೂ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು, ಮತ್ತು ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡಬೇಕು , ಕಾಯಿದೆ  ಪ್ರಕಾರ ಉಪಧನವನ್ನು ನೀಡಬೇಕು.

5. ಕಾರ್ಮಿಕರ  ಕಾನೂನುಗಳ ಅನ್ವಯ  8  ಗಂಟೆ  ಕೆಲಸ , ಹೆಚ್ಚುವರಿ ಕೆಲಸಕ್ಕೆ  ಹೆಚ್ಚುವರಿ ವೇತನ,  ವಾರದ  ರಜೆ, ಸಂದಾರ್ಭಿಕ ರಜೆ,  ಗಳಿಕೆ  ರಜೆ,  ಸಂಬಳದ  ಚೀಟಿ,  ಗುರುತಿನ ಚೀಟಿ, ಪಿ,ಎಫ್/ ಇ.ಎಸ್.ಐ ಪಾವತಿ,ಗಳನ್ನು  ಕಡ್ಡಾಯವಾಗಿ  ಜಾರಿ ಮಾಡವಬೇಕು

6. ರಾಜ್ಯಾದ್ಯಂತ ನಗರ ಪ್ರದೆಶಗಳು(ನಗರ ಸ್ಥಳೀಯ ಸಂಸ್ಥೆಗಳು) ಮತ್ತು ಗ್ರಾಮೀಣಭಾಗಗಳಲ್ಲಿ (ಗ್ರಾಮಪಂಚಾಯಿತಿಗಳು) ಮತ್ತು ಖಾಸಗಿವಲಯಗಳಲ್ಲಿ (ಬಸ್‍ನಿಲ್ದಾಣ, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಕಂಪನಿಗಳು, ದೊಡ್ಡ ಕಛೇರಿಗಳು, ಲಾಡ್ಜ್‍ಗಳು, ಹೋಟೆಲ್ ಇತ್ಯಾದಿ ಕಡೆಗಳಲ್ಲಿ) ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುವ ಸಾವಿರಾರುಸ್ವಚ್ಛತಾ ಕಾರ್ಮಿಕರ ನೇಮಕಾತಿ, ವೇತನ ಮತ್ತು ಇತರ ಸಾಮಾಜಿಕ ಭದ್ರತೆಗಾಗಿ ಬೇಕಾದ ಸೂಕ್ತ ಕಾಯ್ದೆ ನಮ್ಮ ರಾಜ್ಯದಲ್ಲಿಲ್ಲ. ರಾಷ್ಟ್ರೀಯ ಕಾನೂನು ಶಾಲೆ ವಿಶ್ವ ವಿದ್ಯಾಲಯ, ಬೆಂಗಳೂರು ಇವರು ನಡೆಸಿರುವ ಅಧ್ಯಯನದ ಶಿಫಾರಸ್ಸಿನಂತೆ ಸ್ವಚ್ಛತಾ ಕಾರ್ಮಿಕರ ಭದ್ರತೆ, ಅರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ-ನ್ಯಾಯಕ್ಕಾಗಿಸೂಕ್ತ ಕಾನೂನು ಜಾರಿಮಾಡಬೇಕು. ಈ ಎಲ್ಲಾ ನ್ಯಾಯಯುತ, ಕಾನೂನು ಬದ್ಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸರ್ಕಾರವು ಮುನಿಸಿಪಲ್‍ಕಾರ್ಮಿರಕ ಬೇಡಿಕೆಗಳಬಗ್ಗೆ ಸಹಾನುಭೂತಿಯಿಂದ ಪರಿಶಿಲಿಸಿ ಹಕ್ಕೋತ್ತಾಯಗಳನ್ನು    ಪರಿಗಣಿಸುವಂತೆ ಅಗ್ರಹಪೂರಕವಾಗಿ ಸಿಐಟಿಯು  ಒತ್ತಾಯಿಸುತ್ತೆವೆ. 

                        ವಂದನೆಗಳೂಂದಿಗೆ


[ಎಸ್. ವರಲಕ್ಷ್ಮಿ]                                                   [ ಮಿನಾಕ್ಷಿ ಸುಂದರಂ]

ಅಧ್ಯಕ್ಷರು                                                          ಪ್ರಧಾನ ಕಾರ್ಯದರ್ಶಿ    

9448087189 9448070267


ಪ್ರತಿಗಳು

1]  ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಸರ್ಕಾರ, ಬೆಂಗಳೂರು

2] ಪ್ರಧಾನ ಕಾರ್ಯದರ್ಶಿಗಳು  ನಗರಾಭಿವೃದ್ದಿ ಇಲಾಖೆ, ವಿಕಾಸ ಸೌಧ, ಬೆಂಗಳೂರು


Post a Comment

0 Comments

Ad Code

Responsive Advertisement