Ticker

6/recent/ticker-posts

Ad Code

Responsive Advertisement

ಕೆ.ಇ.ಬಿ ಅಧಿಕಾರಿ ಸೀನಿಯರ್ ಅಸಿಸ್ಟೆಂಟ್ ಶಶಿಕಲಾ ಸಾರ್ವಜನಿಕರಿಗೆ ಕೊಡುತ್ತಿರುವ ಉಡಾಫೆ ಉತ್ತರ.

ವಾರ್ತಾಜಾಲ ಸುದ್ದಿ ಮಧುಗಿರಿ :ಸರ್ಕಾರದ ಆದೇಶದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ  ಸೇರಿದ ಜನಾಂಗದವರಿಗೆ ಉಚಿತವಾಗಿ 75 ಯೂನಿಟ್ ಗಳ ವಿದ್ಯುತ್ ಅನ್ನು ನೀಡುವುದಾಗಿ ಹೇಳಿದ್ದು ಅದಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅರ್ಜಿ ಸಲ್ಲಿಸಲು  30-07-2022 ಕೊನೆಯ ದಿನಾಂಕ ಎಂದು  ಯೋಜನೆ ಹೊರಡಿಸಿದೆ.



ಅದರಂತೆ ಇಂದು ಮಧುಗಿರಿಯಲ್ಲಿ ಬೆಸ್ಕಾಂ ಕಚೇರಿಯಲ್ಲಿ ಎಲ್ಲಾ ಪರಿಶಿಷ್ಟ ಜಾತಿ ಪಂಗಡದವರು ಡೆಪಾಸಿಟ್ ಕಟ್ಟಲು ಕಚೇರಿ ಬಳಿ ಹೋಗಿದ್ದು ಹಣ ಕಟ್ಟಿ ನಂತರ ಅರ್ಜಿ ಸಲ್ಲಿಸಿ ಅರ್ಜಿಯ ಸ್ವೀಕೃತ ಪತ್ರ ನಕಲು ಕೇಳಿದಾಗ ನಾವು ಯಾವುದೇ ನಕಲನ್ನು ಕೊಡುವುದಿಲ್ಲ ಆ ರೀತಿಯಾಗಿ ಕೊಡುವುದಕ್ಕೆ ನಮಗೆ ಯಾವ ಆದೇಶವೂ ಕೂಡ ಇಲ್ಲ ಎಂದು ಅಲ್ಲಿ ಬಂದಿರುವಂತಹ ಅರ್ಜಿದಾರರಿಗೆ ಸೀನಿಯರ್ ಅಸಿಸ್ಟೆಂಟ್ ಶಶಿಕಲಾ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ.

ಇದನ್ನು ತಿಳಿದ ತಕ್ಷಣ ಅಲ್ಲಿಯ ಸ್ಥಳೀಯ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ  ಅರ್ಜಿ ಸಲ್ಲಿಸಲು ವಿದ್ಯಾವಂತರು ಅವಿದ್ಯಾವಂತರು ಇಬ್ಬರು ಕೂಡ ಬರುತ್ತಾರೆ , ಆದರೆ ಅಧಿಕಾರಿಗಳು ಅದಕ್ಕೆ ತಕ್ಕನಾಗಿ ಯಾವುದೇ ಸ್ವೀಕೃತಿ ನಕಲು ಪತ್ರವನ್ನು ಕೊಡದೆ ತಮ್ಮ ದೌರ್ಜನ್ಯವನ್ನು ವ್ಯಾಸಗುತ್ತಿದ್ದಾರೆ. ಸ್ವೀಕೃತಿ ಪತ್ರವಿದ್ದರೆ ನಾಳೆ  ಅಧಿಕಾರಿಗಳ ವರ್ಗಾವಣೆ ಆದರೂ ಸಹ ಮುಂಬರುವ ಅಧಿಕಾರಿಗಳು ಮತ್ತೆ ಕೇಳಿದರೆ ಆ ಸ್ವೀಕೃತಿಯನ್ನ ತೋರಿಸಬಹುದು. ನೀವು ಸ್ವೀಕೃತಿ ಪತ್ರ ನೀಡದಿದ್ದರೆ ನಾವು ಏನು ತೋರಿಸಬೇಕು, ಏನು ಮಾಡಬೇಕು, ಹಾಗೆ ಕೆಲ ವಿದ್ಯಾವಂತರಿಗೆ ಸರ್ಕಾರದ ಸವಲತ್ತುಗಳು ಲಭ್ಯವಿದ್ದರೂ ಕೂಡ ಕೈಗೆಟುಕದೆ, ಅರ್ಜಿಗಳನ್ನು ಕಳೆದುಕೊಂಡಿರುವ ಘಟನೆಗಳು ಕೂಡ ಸಾಕಷ್ಟು ಇವೆ ಇದರಿಂದಾಗಿ ಈ ಮೇಲಿನ ಅಧಿಕಾರಿಗಳು ತಕ್ಷಣ ಇಂತಹ ಉಡಾಫೆ ಉತ್ತರ ಕೊಡುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಈ ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement