ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಜೆ.ಪಿ.ಪಾರ್ಕ್ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯರು, ಪಾಲಿಕೆಯ ಆಡಳಿತ ಪಕ್ಷದ ನಾಯಕರಾಗಿದ್ದ ಜೆ. ಪಿ. ಪಾರ್ಕ್ ಶಿಲ್ಪಿ ಬಿ. ಆರ್. ನಂಜುಂಡಪ್ಪನವರ ಸುಪುತ್ರರಾದ ಬಿಜೆಪಿ ಪಕ್ಷದ ಯುವ ಮುಖಂಡ ಬಿ. ಎನ್. ಯಧಿಷ್ಠರಾಮರವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಅವರ ಅಭಿಮಾನಿಗಳ ಹಾಗೂ ಬೆಂಬಲಿಗರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರಾದ ಜೆ. ಪಿ. ಪಾರ್ಕ್ ವಾರ್ಡ್ ಅಧ್ಯಕ್ಷ ಶ್ರೀಧರ್ ಜಿ. ಯಾಜಿ, ಸಂದೇಶ್ ಬಂಡಪ್ಪ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಯುವ ನಾಯಕನಿಗೆ ಶುಭ ಹಾರೈಸಿದರು.

0 Comments