ಉಡುಪಿಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ 44ನೇ ಚಾತುರ್ಮಾಸ್ಯವು ಸಿಲಿಕಾನ್ ಸಿಟಿ ಎಂಬ ಬಿರುದಿಗೆ ಪಾತ್ರವಾಗಿರುವ ಬೆಂಗಳೂರು ನಗರದಲ್ಲಿ ದಿನಾಂಕ 23/07/2022ರಂದು ನಡೆಯಿತು.
ಬೆಂಗಳೂರಿನ ಉತ್ತರ ಭಾಗದ ಮಲ್ಲೇಶ್ವರದಲ್ಲಿ ಬಹಳ ಅದ್ದೂರಿಯಾಗಿ, ವಿಜೃಂಭಣೆಯಿಂದ ಜರುಗಿತು. ಶ್ರೀಪಾದರ 44ನೇ ಚಾತುರ್ಮಾಸ್ಯದ ಸಮಾರಂಭದಲ್ಲಿ ಸ್ಥಳೀಯ ಭಕ್ತಾದಿಗಳಲ್ಲದೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಭಕ್ತಾದಿಗಳು ಆಗಮಿಸಿದ್ದದ್ದು ಎದ್ದು ಕಾಣುತ್ತಿತ್ತು. ಉಡುಪಿಗೂ ಬೆಂಗಳೂರು ನಗರದ ಮಲ್ಲೇಶ್ವರಕ್ಕೂ ಅವಿನಾಭಾವ ಸಂಬಂಧವಿರುವುದು ಎದ್ದು ಕಾಣುವಂತಿತ್ತು.
ಈ ಸಮಾರಂಭದಲ್ಲಿ ಭಕ್ತಾದಿಗಳು ಮಾತ್ರವಲ್ಲದೆ ಗಣ್ಯರು, ರಾಜಕೀಯ ಮುಖಂಡರು, ಸಮಾಜ ಸೇವಕರು ಭಾಗವಹಿಸಿದ್ದರು. ಶ್ರೀಪಾದರ ಚಾತುರ್ಮಾಸ್ಯದ ದಿನ ಮಲ್ಲೇಶ್ವರದಲ್ಲಿ ಹಬ್ಬದ-ಜಾತ್ರೆಯ ವಾತಾವರಣ ನಿರ್ಮಾಣವಾಗಿದ್ದಿದ್ದು ಕಂಡಿತು. ಈ ಸಮಾರಂಭದ ನಿಮಿತ್ತ ಶ್ರೀಪಾದರ ಹಾಗೂ ಶ್ರೀ ಕೃಷ್ಣದೇವರ ಪಲ್ಲಕ್ಕಿಯ ಮೆರವಣಿಗೆಯು ಶ್ರೀ ಕಾಡುಮಲ್ಲೇಶ್ವರ ದೇವಾಲಯದಿಂದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ನಂದಿತೀರ್ಥ ದೇವಸ್ಥಾನ, ಗಂಗಮ್ಮ ದೇವಸ್ಥಾನದ ರಸ್ತೆಯ ಮುಖಾಂತರ, ರಾಜ್ಯ ಬಿಜೆಪಿ ಕಚೇರಿ ರಸ್ತೆ ಮುಖಾಂತರ ಸಾಗಿ, ಮಲ್ಲೇಶ್ವರದ 11ನೇ ಅಡ್ಡರಸ್ತೆ ಮುಖಾಂತರ ಸಾಗಿ, ಸಂಪಿಗೆ ರಸ್ತೆ ಮಾರ್ಗವಾಗಿ ಸಾಗಿ, ಶಿರಡಿ ಸಾಯಿಬಾಬಾ ದೇವಾಲಯದ ರಸ್ತೆಯ ಮುಖಾಂತರ ಸಾಗಿ, ಪಲಿಮಾರು ಮಟ್ಟಕ್ಕೆ ಆಗಮಿಸಿದ ಶ್ರೀಪಾದರ ಹಾಗೂ ಶ್ರೀ ಕೃಷ್ಣದೇವರ ಪಲ್ಲಕ್ಕಿಯ ಮೆರವಣಿಗೆಯು ಎಂದೂ ಕಾಣದಂತಹ ಹೊಸ ಊರುಪನ್ನು ಈ ಭಾಗದಲ್ಲಿ ತಂದಿದ್ದು ವಿಶೇಷವಾಗಿತ್ತು.
ಈ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮವು ನೋಡುಗರ ಕಣ್ಣಿಗೆ ಸಮುದ್ರದ ಅಲೆಗಳ ರೀತಿ ಕಾಣುತಿದ್ದವು. ಈ ಸಮಾರಂಭದ ಉಸ್ತುವಾರಿಯನ್ನು ವಹಿಸಿದ್ದ ಸ್ಥಳೀಯ ರಾಜಕೀಯ ನಾಯಕರಾದ ಬಿ ಕೆ ಶಿವರಾಮ್, ಅನೂಪ್ ಅಯ್ಯಂಗಾರ್, ಮಲ್ಲೇಶ್ವರ ಬಳಗ ಹಾಗೂ ಸ್ಥಳೀಯರ ಸೇವೆಯನ್ನು ಮರೆಯಲಾಗದು ಹಾಗೂ ಈ ಚಾತುರ್ಮಾಸ್ಯದ ಸಮಾರಂಭಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನೋಡಿಕೊಳ್ಳುವಲ್ಲಿ ಇವರೆಲ್ಲರ ಪಾತ್ರವು ಪ್ರಮುಖ. ಈ ಸಮಾರಂಭವು ನೋಡುಗರ ಕಣ್ಣಿಗೆ ಉಡುಪಿಯ ಕೃಷ್ಣನ ಮಂದಿರದಲ್ಲಿ ನಡೆಯುತ್ತಿರುವ ಸಮಾರಂಭ ಎಂಬಂತೆ ಕಂಡಿದ್ದು ಭಕ್ತರಿಂದ - ಸ್ಥಳೀಯರಿಂದ ಬಂದ ಪ್ರತಿಕ್ರಿಯೆ.
ಈ ಸಮಾರಂಭದಲ್ಲಿ ಮಾತನ್ನಾಡಿದ ಬಿ ಕೆ ಶಿವರಾಮ್ ರವರು ಶ್ರೀಪಾದರ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ಥಾಪಿಸಿದರು. ಸಮಾರಂಭಕ್ಕೆ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳು - ಬೆಂಗಳೂರು ಉತ್ತರ ತಾಲೂಕು ಲೋಕಸಭಾ ಸದಸ್ಯರು, ಸಂಸದರಾದ ಸದಾನಂದ ಗೌಡರು ಆಗಮಿಸಿದ್ದದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ನೀಡಿತ್ತು.
ಸಭೆಯಲ್ಲಿ ಮಾತನಾಡಿದ ಸದಾನಂದ ಗೌಡರು ಉಡುಪಿಯ ಮತ್ತು ಮಲ್ಲೇಶ್ವರದ ಸಂಬಂಧವನ್ನು ಎಳೆಎಳೆಯಾಗಿ ಪ್ರಸ್ಥಾಪಿಸಿದರು. ಶ್ರೀಗಳ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ಥಾಪಿಸಿದರು. ನಾಡಿಗೆ ಮಠದಿಂದ ಆಗುತ್ತಿರುವ ಕಾರ್ಯಗಳು ಅವಸ್ಮರಿಯ ಎಂಬುದು ಗೌಡರ ಮನದಾಳದ ಮಾತು. ಶ್ರೀಪಾದರ ಚಾತುರ್ಮಾಸ್ಯವು ಮಲ್ಲೇಶ್ವರದಲ್ಲಿ ನಡೆಯುತ್ತಿರುವುದು ಉಡುಪಿಗೆ ಹೋದಷ್ಟು ಸಂಭ್ರಮ ಎಂದು ಗೌಡರು ಬಣ್ಣಿಸಿದರು.
ಶ್ರೀಪಾದರು ಸಮಾರಂಭದಲ್ಲಿ ನೆರೆದಿದ್ದ ಭಕ್ತರಿಗೆ, ಗಣ್ಯರಿಗೆ, ಸ್ಥಳೀಯರಿಗೆ ಆಶೀರ್ವಚನ ಆಶೀರ್ವಾದ ನೀಡಿದರು. ಸ್ಥಳೀಯರು ಸಮಾರಂಭಕ್ಕೆ ನೀಡಿದ ಸಹಕಾರವನ್ನು ಶ್ಲಾಘಿಸಿದರು. ಶ್ರೀಗಳ ಅನೇಕ ಸಮಾಜಮುಖಿ ಕಾರ್ಯಗಳನ್ನು ಮರೆಯಲಾಗದು, ಅವರ ನಿಸ್ವಾರ್ಥ ಸೇವೆಗಳ ಪ್ರತಿಬಿಂಬ ಎಂಬಂತೆ ಚಾತುರ್ಮಾಸ್ಯದ ಸಮಾರಂಭಕ್ಕೆ ಸೇರಿದ್ದ ಜನಸ್ತೋಮ ಸಾಕ್ಷಿ ಆಗಿತ್ತು. ಸಮಾರಂಭವನ್ನು ಅಚ್ಚುಕಟ್ಟಾಗಿ ಯಾವುದೇ ರೀತಿಯ ಕುಂದು ಬಾರದಂತೆ ಸ್ಥಳೀಯರು, ಭಕ್ತರು, ರಾಜಕೀಯ ನಾಯಕರು ನಡೆಸಿಕೊಟ್ಟದ್ದು ಶ್ಲಾಘನೀಯ. ಇದೇ ರೀತಿಯಾಗಿ ಆಶೀರ್ವಚನ ಆಶೀರ್ವಾದ ನಾಡಿನಲೆಲ್ಲ ಹರಡಲಿ ಹಾಗೂ ಸರ್ವರಿಗೂ ಸಿಗುವಂತಾಗಲಿ.







0 Comments