Ticker

6/recent/ticker-posts

Ad Code

Responsive Advertisement

ಮಧುಗಿರಿ ಪೊಲೀಸ್ ಇಲಾಖೆಯಿಂದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ

ಕರ್ನಾಟಕ ರಾಜ್ಯ ಪೊಲೀಸ್ ತುಮಕೂರು ಜಿಲ್ಲೆ ಮಧುಗಿರಿ ಉಪವಿಭಾಗ ಮಧುಗಿರಿ ಪೊಲೀಸ್ ಠಾಣೆ ವತಿಯಿಂದ ಪಿ.ಎಸ್.ಐ ರಮೇಶ್ ರವರ ನೇತೃತ್ವದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಮಧುಗಿರಿ ಪಟ್ಟಣದ ಬಸ್ ಸ್ಟ್ಯಾಂಡ್ ಗಳಲ್ಲಿ ಹಾಗೂ ವಿವಿಧ ಕಡೆ ಜಾಗೃತಿ ಮೂಡಿಸುವ ಮೂಲಕ ಆಚರಣೆ ಮಾಡಲಾಯಿತು. 

ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಪಿ.ಎಸ್.ಐ ರಮೇಶ್ ಕುಮಾರ್ ಮಾತನಾಡಿ  ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಆಟೋದಲ್ಲಿ ಅಥವಾ ನಡೆದುಕೊಂಡು ಹೋಗಬೇಕಾದರೆ ಅಥವಾ ಯಾವುದೇ ಸಾರ್ವಜನಿಕ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಯಾರಾದರೂ ಮಕ್ಕಳು ಅಥವಾ ಮಹಿಳೆಯರು ಓಡಾಡಬೇಕಾದರೆ ಯಾರಾದರೂ ಇಂಥವರನ್ನು ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರೆ 

ಅಂತವರು ನಿಮಗೆ ಕಂಡು ಬಂದರೆ ಪೊಲೀಸ್ ಠಾಣೆ ಕಂಟ್ರೋಲ್ ನಂಬರ್ 112 ಕರೆ ಮಾಡಿ, ತಕ್ಷಣವೇ 5 ಮತ್ತು10 ನಿಮಿಷದಲ್ಲಿ ಬಂದು ರಕ್ಷಣೆ ಮಾಡುತ್ತೇವೆ ಹಾಗು ಯಾವುದಾದರೂ ಅಕ್ರಮ ಚಟುವಟಿಕೆಗಳು ತಿಳಿದುಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ ಎಂದರು ಇನ್ನು ಮುಂತಾದ ಸಲಹೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ A.S.I ಹೇಮಂತ್ ಕುಮಾರ್ ಪೊಲೀಸ್ ಪೇದೆಗಳಾದ ರಂಗನಾಥ್. ಪಾಂಡುರಂಗಯ್ಯ 112 ಸಿಬ್ಬಂದಿ ನಾಗಭೂಷಣ್. ಯೋಗಾನಂದ .ಮತ್ತಿತರರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement