Ticker

6/recent/ticker-posts

Ad Code

Responsive Advertisement

ಕೆ.ಜಿ.ಬಿ ಬ್ಯಾಂಕ್ ರಿಟೈಲ್ ಸಾಲಗಳಿಗೆ ಹಳೇ ಬಡ್ಡಿ ದರದಲ್ಲಿ ಸಾಲ, ಜೂಲೈ 31 ರ ತನಕ ವಿಸ್ತರಣೆ-ಶ್ರೀನಾಥ್ ಜೋಶಿ

ಬಳ್ಳಾರಿ ಜುಲೈ 06. ರಿಟೈಲ್ ಲೆಂಡಿಂಗ್ ಸೆಲ್ ಉದ್ಘಾಟನೆಯನ್ನು  ಬಳ್ಳಾರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಛೇರಿಯಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ  ಮಾತನಾಡಿದ ಬ್ಯಾಂಕ್‍ನ ಅಧ್ಯಕ್ಷರಾದ ಶ್ರೀನಾಥ್ ಜೋಶಿ ಅವರು  ಈ ಒಂದು ರಿಟೈಲ್ ಸಾಲ ವಿತರಣಾ ಕೇಂದ್ರದ ಮೂಲ ಉದ್ದೇಶ ತ್ವರಿತ ಗ್ರಾಹಕ ಸೇವೆ, ವಿಶೇಷವಾಗಿ ಗೃಹ ನಿರ್ಮಾಣ, ಅಪಾಟ್ಮೆರ್ಂಟ್, ಹಾಗು ವಾಹನ ಖರೀದಿ, ಹಾಗು ಇತರೇ  ಸಾಲಗಳಲ್ಲಿ  ವಿಶೇಷ ಮುತುರ್ವರ್ಜಿ ವಹಿಸಿ  ಸಾಲವನ್ನ ಸುಲಭವಾಗಿ, ಹಾಗು ತ್ವರಿತಗತಿಯಲ್ಲಿ ಕೊಡಬಹುದು ಎಂದರು.


RBI ಇತ್ತೀಚಿಗೆ ತನ್ನ ರೆಪೋ ಧರವನ್ನು  ಹೆಚ್ಚಿಸಿದ್ದರು ಕೂಡ ನಮ್ಮ ಬ್ಯಾಂಕ್ ರಿಟೈಲ್ ಸಾಲಗಳಿಗೆ ಅದೇ ಹಳೇ ಬಡ್ಡಿ ದರ ದಲ್ಲಿ ಸಾಲ ನೀಡುವುದಾಗಿ ತಿಳಿಸಿ ಅದನ್ನು  ಜೂಲೈ 31 ರ ತನಕ ವಿಸ್ತರಿಸೋದಾಗಿ, ಇದರ ಉಪಯೋಗವನ್ನ ಗ್ರಾಹಕರಿಗೆ ತಿಳಿಸಿ, ಹೆಚ್ಚಿನ ಗ್ರಾಹಕರಿಗೆ ಸಾಲ ವಿತರಿಸಬೇಕಾಗಿ ತಿಳಿಸಿದರು.  ಇನ್ನೋರ್ವ ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ಶ್ರೀಮತಿ  ಭಾಗ್ಯರೇಖಾ  ಮಾತನಾಡಿ ನಮ್ಮ ಬ್ಯಾಂಕಿನ ಬಳ್ಳಾರಿ ಹಾಗು ತಾಲೂಕು ಕೇಂದ್ರಗಳಾದ ಸಿರುಗುಪ್ಪ, ಕಂಪ್ಲಿ, ಕುರುಗೋಡು, ಹಾಗು ಸಂಡೂರು ಶಾಖಾಧಿಕಾರಿಗಳು ಹೆಚ್ಚು ಹೆಚ್ಚು ಅರ್ಜಿಗಳನ್ನ ಈ ತಿಂಗಳ ಕೊನೆಯೊಳಗೆ ಸಾಲ ವಿತರಣೆ ಮಾಡಬೇಕೆಂದು ತಿಳಿಸಿದರು.  ರಮಾನಾಥ ಆಚಾರ್ಯ ಅವರು ಹಾಗು ಪ್ರಾದೇಶಿಕ ಕಚೇರಿ ಸಿಬ್ಬಂದಿ ಬಳ್ಳಾರಿ ಹಾಗು ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement