Ticker

6/recent/ticker-posts

Ad Code

Responsive Advertisement

ಕೊಟ್ಟೂರುಸ್ವಾಮಿ ಬಿಎಡ್ ಕಾಲೇಜಿನಲ್ಲಿ ಜು.08 ಮತ್ತು 09ರಂದು “ಸಾಂಸ್ಕøತಿ ವೈಭವ ಯುವಜನೋತ್ಸವ” ಕಾರ್ಯಕ್ರಮ-ಸತೀಶ್ ಹಿರೇಮಠ್

ಬಳ್ಳಾರಿ ಜು.06: ನಗರದ ನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪಧವಿ ಹಾಗೂ ವೃತ್ತಿಪರ ವಿದ್ಯಾರ್ಥಿಗಳಿಗೆ ಈ ತಿಂಗಳ 8 ಮತ್ತು 9 ರಂದು “ಸಾಂಸ್ಕøತಿ ವೈಭವ ಯುವಜನೋತ್ಸವ” ಹಮ್ಮಿಕೊಳ್ಳಲಾಗಿದೆ.  ಈ ಕುರಿತು ಯುವಜನೋತ್ಸವವನ್ನು ಆಯೋಜಿಸಿರು ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯನಿ ಮರಿದೇವಯ್ಯ ಮತ್ತು ಪ್ರಾಂಚುಪಾಲ ಡಾ.ಎ.ಸತೀಶ ಹಿರೇಮಠ ಅವರು ಮಾಹಿತಿ ನೀಡಿದರು. 31 ಪದವಿ ಹಾಗೂ ವೃತ್ತಿಪರ ಮಹಾವಿದ್ಯಾಲಯಗಳ 1500 ವಿದ್ಯಾರ್ಥಿಗಳು 27 ವಿವಿಧ ಸ್ಪರ್ದೇಗಳಲ್ಲಿ ಭಾಗವಹಿಸಲಿದ್ದಾರೆ.


ಈ ಎರಡು ದಿನಗಳ ಕಾಲ, ಗೀತಾಗಾಯನ, ಶಾಸ್ತ್ರೀಯ ಗಾಯನ, ಸಮೂಹ ನೃತ್ಯ, ಪಾಚತ್ಯ ನೃತ್ಯ, ಸಿನಿಮಾ, ಜನಪದ ಗೀತಾ ಗಾಯನ, ಅದೇ ರೀತಿ ಜನಪದ ನೃತ್ಯಗಳು, ಶಾಸ್ತ್ರೀಯ ನೃತ್ಯಗಳು, ಆಶುಭಾಷಣ, ಚರ್ಚಾ ಸ್ಪರ್ದೆ, ರಸಾಪ್ರಶ್ನೆಗಳು, ಏಕಪತ್ರಾಭಿನಯ, ನಾಟಕ, ಲಘನಾಟಕ, ಕವನ ರಚನೆ, ಮೂಕಾಭಿನಯ, ಮಿಮಿಕ್ರಿ, ಕಾರ್ಟೂನ್ ರಚನೆ, ಸೇರಿದಂತೆ ಇನ್ನೂ ಹಲವು 27 ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಹದುಗಿರುವ ವಿವಿಧ ಕಲಾ ಪ್ರತಿಭೆಗಳನ್ನು ಗುರುತಿಸುವ ಉದ್ದೇಶ ಈ ಸ್ಪರ್ಧೆಗಳದ್ದು ಆಗಿದೆ. ಮೂರು ಜಿಲ್ಲೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಮಟ್ಟದಲ್ಲಿ ಆಯ್ಕೆಯಾದವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಅಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ದಕ್ಷಿಣ ಭಾತರದ ಅಂತರ್ ವಿಶ್ವವಿದ್ಯಾಲಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿಯವರಗೆ ಜಿಲ್ಲೆಯ 16 ಕಾಲೇಜಿಲ್ಲಿರುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಇದರ ಉದ್ಘಾಟನೆಯನ್ನು 8 ರಂದು ವಿವಿ ಕುಲಪತಿ ಉದ್ಘಾಟಿಸಲಿದ್ದಾರೆ. ಜೊತೆಗೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮತ್ತು 9ರಂದು ಸಂಜೆ ನಡೆಯುವ ಮುಕ್ತಾಯ ಸಮಾರಂಭವನ್ನು ಬಳ್ಳಾರಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ ಅವರು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು. 


Post a Comment

0 Comments

Ad Code

Responsive Advertisement