In a shocking development, a three-year old kid born with neprhological issues was silently suffering. She was unable to mingle with others as urine kept leaking. Upon investigation, it was found that the girl was suffering from a neurogenic bladder. As a result of this problem, the girl was facing a problem and it had affected her social activities too.
Pediatric neurogenic bladder is a bladder dysfunction in children caused by damage to the body’s central nervous system. For most children and adults, the muscles and nerves of the urinary system work together to carry messages from the brain to the bladder. But sometimes these communications break down due to a developmental malformation or physical injury to the nervous system or other impairment; when this happens, a child may experience incomplete bladder emptying or incontinence, caused by a neurogenic bladder. Other potential related problems include kidney or bladder stones.
Dr Pradeep, well-known urologist from NU Hospital, Shivamogga said, "When the girl was brought to us, we found that the urine was leaking all the time. As a result, the girl was unable to concentrate on studies or play. The parents had visited many hospitals till date without any luck." The doctors diagnosed the problem and found that the bladder had shrunk. As a result, the bladder could store only 25 to 30 ml of urine. Hence, a bladder was reconstructed and attached to the kidney bladder. Now, the young girl is hale and hearty and taking part in her regular activities. Dr Pradeep said that early detection and treatment is the key to provide better treatment.
ನೆಪ್ರೊಲಾಜಿಕಲ್ ಸಮಸ್ಯೆಗಳೊಂದಿಗೆ ಜನಿಸಿದ್ದ ಮೂರು ವರ್ಷದ ಮಗು ತನ್ನ ಸಮಸ್ಯೆ ಹೇಳಿಕೊಳ್ಳಲಾರದೆ ನರಳುತ್ತಿತ್ತು. ನಿರಂತರವಾಗಿ ಮಗುವಿನಲ್ಲಿ ಮೂತ್ರ ಸೋರಿಕೆಯಾಗುತ್ತಿದ್ದರಿಂದ ಇತರೆ ಮಕ್ಕಳೊಂದಿಗೆ ಬೆರೆತು ಆಟವಾಡಲು ಮಗುವಿಗೆ ಕಷ್ಟವಾಗಿತ್ತು. ಈ ಬಗ್ಗೆ ಸೂಕ್ತವಾಗಿ ತಪಾಸಣೆ ನಡೆಸಿದ ನಂತರ ಬಾಲಕಿ ನ್ಯೂರೋಜೆನಿಕ್ ಮೂತ್ರಕೋಶದಿಂದ (ಬ್ಲಾಡರ್) ಬಳಲುತ್ತಿರುವುದು ಪತ್ತೆಯಾಯಿತು. ಈ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ಒಟ್ಟಾರೆ ಸಮಗ್ರ ಚಟುವಟಿಕೆಗಳ ಮೇಲೆ ಅಗಾಧ ಪರಿಣಾಮ ಬೀರಿತ್ತು.
ದೇಹದ ಕೇಂದ್ರ ನರಮಂಡಲದ ಹಾನಿಯಿಂದ ಉಂಟಾಗುವ ಮಕ್ಕಳಲ್ಲಿ ಪೀಡಿಯಾಟ್ರಿಕ್ ನ್ಯೂರೋಜೆನಿಕ್ ಮೂತ್ರಕೋಶದಿಂದುಂಟಾಗುವ ಗಾಳಿಗುಳ್ಳೆಯಂತಹ ಅಪಸಾಮಾನ್ಯ ಕ್ರಿಯೆ ಹೆಚ್ಚಿನ ಸಮಸ್ಯೆಗೆ ಕಾರಣವಾಗಿತ್ತು. ಹೆಚ್ಚಾಗಿ ಮಕ್ಕಳು ಮತ್ತು ವಯಸ್ಕರಿಗೆ, ಮೂತ್ರದ ವ್ಯವಸ್ಥೆಯ ಸ್ನಾಯುಗಳು ಹಾಗೂ ನರಗಳು ಮೆದುಳಿನಿಂದ ಮೂತ್ರಕೋಶಕ್ಕೆ (ಬ್ಲಾಡರ್) ಸಂದೇಶಗಳನ್ನು ಸಾಗಿಸಲು ಏಕಕಾಲದಲ್ಲಿ ಕೆಲಸ ಮಾಡುತ್ತವೆ. ಆದರೆ ಬೆಳವಣಿಗೆಯ ಸಮಯದ ದೈಹಿಕ ದೋಷ ಅಥವಾ ನರಮಂಡಲದ ದೈಹಿಕ ಗಾಯ ಅಥವಾ ಇತರ ದುರ್ಬಲತೆಯಿಂದಾಗಿ ಕೆಲವೊಮ್ಮೆ ಈ ಸಂವಹನಗಳು ಮುರಿದುಹೋಗುವ ಸಾಧ್ಯತೆಯಿರುತ್ತದೆ. ಇಂತಹ ಸಂಭವನೀಯತೆಯಿದ್ದಾಗ ನ್ಯೂರೋಜೆನಿಕ್ ಮೂತ್ರಕೋಶದಿಂದ ಉಂಟಾಗುವ ಅಪೂರ್ಣ ಬ್ಲಾಡರ್ ಖಾಲಿಯಾಗುವಿಕೆಯಂತಹ ತೊಂದರೆಯನ್ನು ಮಗು ಅನುಭವಿಸಬಹುದು. ಇತರ ಸಂಭಾವ್ಯ ಸಂಬಂಧಿತ ಸಮಸ್ಯೆಗಳು ಮೂತ್ರಪಿಂಡ ಅಥವಾ ಕಿಡ್ನಿ ಸ್ಟೋನ್.
ಶಿವಮೊಗ್ಗದ ಎನ್‌ಯು ಆಸ್ಪತ್ರೆಯ ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಪ್ರದೀಪ್ ಮಾತನಾಡಿ, "ಬಾಲಕಿಯನ್ನು ನಮ್ಮ ಬಳಿಗೆ ಕರೆತಂದಾಗ, ನಿರಂತರವಾಗಿ ಮೂತ್ರ ಸೋರಿಕೆಯಾಗುತ್ತಿರುವುದನ್ನು ಕಂಡುಕೊಂಡೆವು. ಹೀಗಾಗಿ ಆ ಬಾಲಕಿಗೆ ಆಕೆಯ ಅಧ್ಯಯನ ಅಥವಾ ಆಟದ ಕಡೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ. ಬಾಲಕಿಯ ಪೋಷಕರು ಇಲ್ಲಿಯವರೆಗೆ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ನಾವು ಈ ಸಮಸ್ಯೆಯನ್ನು ಪತ್ತೆಹಚ್ಚಿದ ನಂತರ ಮೂತ್ರಕೋಶದ ಗಾತ್ರ ಕುಗ್ಗಿರುವುದು ಕಂಡುಬಂದಿತು. ಪರಿಣಾಮವಾಗಿ, ಮೂತ್ರಕೋಶ ಕೇವಲ 25 ರಿಂದ 30 ಮಿಲಿ ಮೂತ್ರವನ್ನು ಮಾತ್ರ ಸಂಗ್ರಹಿಸಬಹುದಾದ ಸ್ಥಿತಿಯಲ್ಲಿತ್ತು. ಆದ್ದರಿಂದ, ನಂತರ ಮೂತ್ರಕೋಶವನ್ನು ಪುನರ್ ನಿರ್ಮಿಸಲಾಯಿತು ಮತ್ತು ಮೂತ್ರಪಿಂಡದ ಮೂತ್ರಕೋಶಕ್ಕೆ ಜೋಡಿಸಲಾಯಿತು. ಈಗ ಯಶಸ್ವಿ ಚಿಕಿತ್ಸೆಯ ನಂತರ, ಆ ಪುಟ್ಟ ಹುಡುಗಿ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಮರ್ಥಳಾಗಿದ್ದಾಳೆ” ಎಂದು ಮಾಹಿತಿ ನೀಡಿದರು.
0 Comments