Ticker

6/recent/ticker-posts

Ad Code

Responsive Advertisement

ಜುಲೈ 15 ಕ್ಕೆ ರಾಜ್ಯಾದ್ಯಂತ 'ಓ ಮೈ ಲವ್' ಕನ್ನಡ ಚಲನಚಿತ್ರ ತೆರೆಗೆ

ಬಳ್ಳಾರಿ ಜುಲೈ 04. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಸ್ಮೈಲ್ ಶ್ರೀನು ನಿರ್ದೇಶನದ 

'ಓ ಮೈ ಲವ್' ಮುಂಚೂಣಿಯಲ್ಲಿದೆ. ಹಾಡುಗಳು, ಟೀಸರ್, ಗ್ಲಿಂಪ್ಸ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿರುವ ಈ ಸಿನಿಮಾಕ್ಕೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಅಕ್ಷಿತ್ ಶಶಿಕುಮಾರ್ (ಸುಪ್ರೀಂ ಹೀರೋ ಶಶಿಕುಮಾರ್ ಇವರ ಪುತ್ರ) ಹಾಗೂ ಕೀರ್ತಿಕಲ್ಕೆರಿ ಪ್ರಮುಖ ಭೂಮಿಕೆಯಲ್ಲಿರುವ ಈ ಸಿನಿಮಾ ಜುಲೈ 15ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ತೆಲುಗು ಚಿತ್ರರಂಗದ ಸಿನಿಮಾಬ್ರಹ್ಮ ಕೆ.ರಾಘವೇಂದ್ರರಾವ್, ಮಾಜಿ ಪೊಲೀಸ್ ಆಯುಕ್ತರಾದ,  ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಡು ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದೀಗ ರಾಜಕೀಯ ಧುರೀಣ ಶ್ರೀರಾಮುಲು 'ಓ ಮೈ ಲವ್' ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. 


ಈ ಸಿನಿಮಾಕ್ಕೆ ಕಥೆ ಬರೆದು ಜಿ.ಸಿ.ಬಿ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ಅವರು ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ  ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಡೈರೆಕ್ಷನ್ ಹಾಗೂ ಸ್ಟೈಲಿಶ್ ಮೇಕಿಂಗ್   ಮಾಡಿದ್ದಾರೆ ಸ್ಮೈಲ್ ಶ್ರೀನು. ಚಿತ್ರದ ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ. ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್'ನಲ್ಲಿ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿದೆ ಎಂದರು.



 

Post a Comment

0 Comments

Ad Code

Responsive Advertisement