Ticker

6/recent/ticker-posts

Ad Code

Responsive Advertisement

TUMKUR ಮಧುಗಿರಿ : ಸ್ಥಳೀಯ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ನಡೆಸುತ್ತೇವೆ

 ಮಧುಗಿರಿ : ಸ್ಥಳೀಯ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ನಡೆಸುತ್ತೇವೆ ಎಂದು ಮಧುಗಿರಿ ಜಿಲ್ಲಾ ಭಾಜಪ ಅಧ್ಯಕ್ಷ ಬಿಕೆ ಮಂಜುನಾಥ್ ತಿಳಿಸಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಧುಗಿರಿ ಮಂಡಲ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಧುಗಿರಿ ಮಂಡಲದಲ್ಲಿ 248 ಭೂತಗಳಲ್ಲಿ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗು ವಿಧಾನಸಭಾ ಚುನಾವಣೆಗೆ ತಯಾರಾಗ ಬೇಕಾಗಿದೆ ವಿಧಾನಸಭಾ ಚುನಾವಣೆಗೆ ಮಧುಗಿರಿ ಕ್ಷೇತ್ರದಿಂದ ಮಧುಗಿರಿ ಅವರನ್ನೇ ಆಯ್ಕೆ ಮಾಡಬೇಕಾಗಿದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹೊರಗಿನವರಿಗೆ ಆದ್ಯತೆ ನೀಡಲಾಗಿದೆ, ಆದರೆ ಭಾಜಪ ಮಾತ್ರ ಸ್ಥಳೀಯರಿಗೆ ಹೊಣೆಗಾರಿಕೆ ನೀಡಲಾಗುತ್ತಿದೆ ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬ ಪಕ್ಷವಾಗಿದ್ದು ಭಾಜಪ ಕಾರ್ಯಕರ್ತರ ಪಕ್ಷವಾಗಿದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹತಾಶ ಮನೋಭಾವ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮಡಿವಾಳರ ಕುರುಬರ ಸಮಾವೇಶಗಳನ್ನು ನಡೆಸಿ ಅವರುಗಳ ಮತ ಪಡೆಯಲು ಯತ್ನಿಸುತ್ತಿದ್ದು ನಮ್ಮ ಕಾರ್ಯಕರ್ತರು ಸರಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸಬೇಕು ಈ ದಿನದ ಕಾರ್ಯಕಾರಿ ಸಭೆ ಪ್ರತಿಯೊಬ್ಬರಿಗೂ ಪ್ರೇರಣೆ ಆಗಬೇಕು ಎಂದರು.

ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಮಧುಗಿರಿಯಲ್ಲಿ ಬಿಜೆಪಿಯವರನ್ನು ಶಾಸಕರನ್ನಾಗಿಸುವ ದಿನಗಳು ಬಹಳ ದೂರವಿಲ್ಲ ಈ ಹಿಂದಿನ ಲೋಕಸಭೆಯ ಚುನಾವಣೆಯಲ್ಲಿ ಹನುಮಾನ್ ಸಿಂಗ್ ಭಾಜಪ ವತಿಯಿಂದ ಸ್ಪರ್ಧೆ ಮಾಡಿದ್ದು ಅಂದೂ ನಮ್ಮ ಪಕ್ಷಕ್ಕೆ ಹೆಚ್ಚು ಮತಗಳು ಬಂದಿದ್ದವು ನಂತರ ಲೋಕಸಭಾ ಚುನಾವಣೆಯಲ್ಲಿ 75 ಸಾವಿರ ಮತಗಳು ಪಕ್ಷ ಪಡೆದು ಕೊಂಡಿದೆ ಇದಕ್ಕೆಲ್ಲಾ ಮೊದಲ ಕಾರಣ ನರೇಂದ್ರ ಮೋದಿಯವರಾಗಿದ್ದು ಯಾರ ಭಿಕ್ಷೆಯಲ್ಲಾ ಎರಡನೇಯದಾಗಿ ನಮ್ಮ ಪಕ್ಷ ದ ಸಂಘಟನೆ ಮತ್ತು ಕಾರ್ಯಕರ್ತರಿಂದಾಗಿ ನಮ್ಮ ಪಕ್ಷವು ಬಲವರ್ಧನೆ ಗೊಂಡಿದೆ ಎಂದರು.

ಜಿಲ್ಲಾ ಪ್ರಭಾರಿ ವಿಕಾಸ್ ಪುತ್ತೂರು ಜಿ.ಟಿ ದಿನೇಶ್, ಹನುಮಂತರಾಯಪ್ಪ, ಮಧುಗಿರಿ ಮಂಡಲ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುರೇಶ್, ಪಾವಗಡ ರವಿ, ತಿಮ್ಮಜ್ಜ, ಜಯಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ಲತಾ ಪ್ರದೀಪ್, ಕಂಬಣ್ಣ, ಎಸ್ಪಿ ಮೋರ್ಚಾ ಅಧ್ಯಕ್ಷರಾದ ಮಾರುತಿ ಗಂಗಹನುಮಯ್ಯ, ಮತ್ತಿತರರು ಹಾಜರಿದ್ದರು.

Post a Comment

0 Comments

Ad Code

Responsive Advertisement