ಮಧುಗಿರಿ : ಜೂ. 25 ರಂದು ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಎಲ್ಲಾ ನ್ಯಾಯಾಲಯಗಳಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂದಾನಗಳ ಮೂಲಕ ಇತ್ಯರ್ಥ ಪಡಿಸುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎ. ಶಿಲ್ಪ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಎಂ.ವಿ.ಸಿ.ಪ್ರಕರಣಗಳು, ಚಕ್ ಬೌನ್ಸ್, ಜಮೀನು ವ್ಯವಹಾರ ಹಾಗೂ ಜೀವನಾಂಶ ಪ್ರಕರಣಗಳನ್ನು ರಾಜಿ ಸಂದಾನ ನಡೆಸಿ ಇತ್ಯರ್ಥ ಗೊಳಿಸುವುದರಿಂದ ಸಮಯ ಹಾಗೂ ಹಣ ಉಳಿಯುತ್ತದೆ ಎಂದರು.
ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವವರು ಮರು ಪಾವತಿಸದೇ ಇರುವ ಪ್ರಕರಣಗಳಲ್ಲಿ ಅಸಲಿಗಿಂದ ಬಡ್ಡಿ ಜಾಸ್ತಿಯಾಗಿರುತ್ತದೆ ಇಂತಹ ಪ್ರಕರಣಗಳು ಲೋಕ ಅದಾಲತ್ನಲ್ಲಿ ರಾಜಿ ಸಂದಾನವಾದರೆ ನ್ಯಾಯಾಲಯದ ಶುಲ್ಕ ಪೂರ್ತಿ ವಾಪಸ್ ಬರುತ್ತದೆ ಎಂದರು.
ಅದಿಕ ಹಿರಿಯ ಸಿವಿಲ್ ನ್ಯಾಯಾಧೀಶ ಸಾಗರ್ ಗುರುಗೌಡ ಪಾಟೀಲ್ ಮಾತನಾಡಿ, ಹೆಣ್ಣು ಮಕ್ಕಳ ಆಸ್ತಿ ಹಂಚಿಕೆಯ ಹಿಸ್ಸೆ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗುವುದು ಇದನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಜೂ 6ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ 4ನೇ ಅಧಿಕ ಜಿಲ್ಲಾ ನ್ಯಾಯಾಧೀಶರಾದ ಯಾದವ ಕೆ. ರವರ ಅಧ್ಯಕ್ಷತೆಯಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುವುದು. ಎಲ್ಲಾ ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿ ರವಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಸರಕಾರಿ ಅಭಿಯೋಜಕ ಸಣ್ಣೀರಪ್ಪ ಇದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.

0 Comments