Ticker

6/recent/ticker-posts

Ad Code

Responsive Advertisement

ಶ್ರೀಹರಿದಾಸ ಪಿತಾಮಹ ಶ್ರೀಪಾದರಾಜರು

 ನಮಃಶ್ರೀಪಾದರಾಜಾಯ

      ನಮಸ್ತೇ ವ್ಯಾಸಯೋಗಿನೇ/

      ನಮಃಪುರಂದರಾರ್ಯಾಯ

      ವಿಜಯರಾಜಾಯ ನಮಃ//


         *****

ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಬಹಳ

ಪ್ರಮುಖವಾದ ಹೆಸರು "ಶ್ರೀಪಾದರಾಜರು".

ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆಯಲ್ಲಿ

ಕೀರ್ತನೆಗಳನ್ನು ರಚಿಸಿದ ಶ್ರೇಷ್ಠ ಹರಿದಾಸರು

ಶ್ರೀಪಾದರಾಜರು.

ಶ್ರೀಪಾದರಾಜರು ಸಂಗೀತ ಪಿತಾಮಹ ಪುರಂದರ ದಾಸರಿಗಿಂತಲೂ ಹಿಂದಿನವರು.

ದಾಸ ಸಾಹಿತ್ಯದಲ್ಲಿ ರತ್ನಗಳಂತಿರುವ ಶ್ರೀವ್ಯಾಸತೀರ್ಥರು,ಶ್ರೀಪುರಂದರದಾಸರು,ಶ್ರೀಕನಕದಾಸರು,ಶ್ರೀವಿಜಯದಾಸರು ಮತ್ತು ಶ್ರೀಜಗನ್ನಾಥದಾಸರು ಇವರೆಲ್ಲರಿಗೂ ಗುರು ಸಮಾನರಾಗಿದ್ದವರು ಮತ್ತು ಹಿರಿಯರು ಶ್ರೀಪಾದರಾಜರು.ಹಾಗಾಗಿ ಅವರನ್ನು "ದಾಸ ಸಾಹಿತ್ಯ"ದ ಪಿತಾಮಹರು ಎಂದೇ ಕರೆಯಲಾಗಿದೆ.

ದಾಸ ಸಾಹಿತ್ಯ ವಿಶ್ವ ಸಾಹಿತ್ಯ ಕಂಡ ವಿನೂತನ

ಬಗೆಯ ಸಾಹಿತ್ಯ.ಸಂಗೀತ ಮಾಧ್ಯಮದ ಮೂಲಕ ತತ್ವ ಪ್ರಸಾರಕ್ಕೆ ತೊಡಗಿದ್ದುದು ವಿಶೇಷ.ಆಧ್ಯಾತ್ಮವು ಜೀವನದ ಉಸಿರು ಎಂಬತಾತ್ವಿಕ ಮಹತ್ವವನ್ನು ಎಲ್ಲ ಜನರಿಗೂತಿಳಿಸಿಕೊಟ್ಟದ್ದು ಇವರ ಸಾಧನೆ.

ಕರ್ನಾಟಕದ ಚನ್ನಪಟ್ಟಣದ ಹತ್ತಿರದ  ಅಬ್ಬೂರು ಎಂಬ ಒಂದು ಸಣ್ಣ ಗ್ರಾಮದಲ್ಲಿಅರಳಿದ ಬಂಗಾರದ ಹೂವು "ಶ್ರೀಪಾದರಾಜರು."ಇಡೀ ಭರತ ಖಂಡದಲ್ಲಿ

ವೇದಾಂತದ ಪರಿಮಳ ಬೀರಿದ ಮಹಾನುಭಾವರು ಶ್ರೀಪಾದರಾಜರು.

ಇವರ ಜನ್ಮ ನಾಮ ಲಕ್ಷ್ಮೀನಾರಾಯಣನೆಂದು.

ಮುಳಬಾಗಿಲು ಮಠದ ಪರಂಪರೆಯಲ್ಲಿ ಬಂದ

ಶ್ರೀಸ್ವರ್ಣವರ್ಣತೀರ್ಥರಿಂದ  ಸನ್ಯಾಸದೀಕ್ಷೆಯನ್ನು ಪಡೆದು "ಲಕ್ಷ್ಮೀನಾರಾಯಣತೀರ್ಥ"ರೆಂದು ನಾಮಕರಣಹೊಂದಿದರು.ಹೆಚ್ಚಿನ ವೇದಾಂತದ ಶಾಸ್ತ್ರಾಭ್ಯಾಸಗಳನ್ನು  ಯತಿಗಳಾದ ಶ್ರೀವಿಬುಧೇಂದ್ರ

ತೀರ್ಥರಲ್ಲಿ ಅಭ್ಯಾಸಮಾಡುತ್ತಾರೆ.

ಇವರ ಪ್ರಕಾಂಡ ಮೇಧಾಶಕ್ತಿಯನ್ನು ಮತ್ತು

ಪ್ರಖರವಾದ ವಿದ್ಯೆಯ ಕಿರಣಗಳನ್ನು ಕಂಡು ಮೆಚ್ಚಿ

ಉತ್ತರಾಧಿಮಠದ ಪೀಠಾಧಿಕಾರಿಗಳಾಗಿದ್ದ

ಶ್ರೀರಘುನಾಥತೀರ್ಥರು ಇವರಿಗೆ ಶ್ರೀಪಾದರಾಜರು ಎಂಬ ಹೆಸರುಕೊಟ್ಟು ಆಶೀರ್ವಾದಮಾಡುತ್ತಾರೆ.

ಅವರು ಸರ್ವ ಶಾಸ್ತ್ರಪಾರಂಗತರಾಗಿ ವೇದವಿದ್ಯೆ ಕಲಿತ ಮೇಲೆಶ್ರೀರಂಗಂನಲ್ಲಿದ್ದ ತಮ್ಮ ಗುರುಗಳಾದ ಶ್ರೀಸ್ವರ್ಣವರ್ಣತೀರ್ಥರ ಬಳಿಗೆ ಹಿಂದಿರುಗುತ್ತಾರೆ.

ಶ್ರೀಸ್ವರ್ಣವರ್ಣತೀರ್ಥರು ತಮ್ಮ ಪೀಠಕ್ಕೆ ಶ್ರೀಪಾದರಾಜರನ್ನು ಉತ್ತರಾಧಿಕಾರಿಯಾಗಿ

ಪಟ್ಟಾಭಿಷೇಕ ಮಾಡುತ್ತಾರೆ.

ಮುಂದೆ ಶ್ರೀಪಾದರಾಜರು ಶ್ರೀರಂಗಂ ನಿಂದ

ದೇಶ ಸಂಚಾರಹೊರಡುತ್ತಾರೆ.ಹೋದಊರುಗಳಲ್ಲೆಲ್ಲ ವೇದಾಂತ ಚರ್ಚಾಗೋಷ್ಠಿಗಳಲ್ಲಿ ಜಯಮಾಲೆ ಇವರ ಕೊರಳನ್ನು ಅಲಂಕರಿಸುತ್ತೆ.

ಸಂಚಾರ ಮಾಡುತ್ತಾ ಇವರು ಶ್ರೀಪದ್ಮನಾಭ

ತೀರ್ಥರು ಎಂಬ ಯತಿಗಳಿಂದ ಸ್ಥಾಪಿಸಲ್ಪಟ್ಟ

ಮುಳಬಾಗಿಲು ಮಠಕ್ಕೆ ಬರುತ್ತಾರೆ.

ಮುಳಬಾಗಿಲಿನಲ್ಲಿ ಒಂದು ವಿದ್ಯಾಪೀಠವನ್ನು

ಸ್ಥಾಪಿಸುತ್ತಾರೆ.ಈ ವಿದ್ಯಾಪೀಠದಲ್ಲಿ ಕಲಿತವರಲ್ಲಿ ಶ್ರೀವ್ಯಾಸರಾಜರು ಪ್ರಮುಖರು.

ಇವರು ಶ್ರೀಪಾದರಾಜರ ಬಳಿ ಸುಮಾರು

ಹನ್ನೆರಡು ವರ್ಷಗಳ ಕಾಲ ಶಿಷ್ಯರಾಗಿರುತ್ತಾರೆ.

ಒಂದು ದಿನ ವ್ಯಾಸರಾಜರು ಅಂದಿನ ಪಾಠಗಳನ್ನು ಮನನ ಮಾಡಿ ನಿದ್ರೆಗೆ ಹೋದಾಗಒಂದು ದೊಡ್ಡ ಸರ್ಪ ಅವರನ್ನು ನುಂಗುವುದಕ್ಕೆ ಬರುತ್ತದೆ.ಇದನ್ನು ತಿಳಿದ ಶ್ರೀಪಾದರಾಜರು ಸರ್ಪದ ಭಾಷೆಯಲ್ಲಿ ಮಾತನಾಡಿ,ಸರ್ಪವುಶ್ರೀವ್ಯಾಸರಾಜರನ್ನು ಬಿಟ್ಟು ಹೋಗುವಂತೆ ಮಾಡುತ್ತಾರೆ.

ಶ್ರೀಪಾದರಾಜರು ರಚಿಸಿದ ತಮ್ಮ ಮಹಾನ್ ಕೃತಿಗಳು,

ಕೀರ್ತನೆಗಳು,ಸುಳಾದಿಗಳು,ದಂಡಕಗಳು,

ಉಗಾಭೋಗಗಳು,ವೃತ್ತನಾಮ ಮತ್ತು ಇತರ

ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾಭಂಡಾರದ ಪಿತಾಮಹರೆಂದೇಪ್ರಖ್ಯಾತರಾದರು.ಶ್ರೀಪಾದರಾಜ

ರಿಂದ ದಾಸಸಾಹಿತ್ಯದ ಅರುಣೋದಯ ಎಂದೇ ನಮ್ಮಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೇಳಲಾಗಿದೆ.

ಇವರು ಧೃವಾಂಶ ಸಂಭೂತರೂ ಹೌದು.

ಶ್ರೀಪಾದರಾಜರು ತೊಂಬಂತ್ತೆಂಟು ವರ್ಷಗಳ

ತುಂಬು ಸಾರ್ಥಕ ಜೀವನ ನಡೆಸಿ ಕ್ರಿ.ಶ.1504 ರಲ್ಲಿ ಮುಳುಬಾಗಿಲಿನಲ್ಲಿರುವ ನರಸಿಂಹತೀರ್ಥದಲ್ಲಿ ವೃಂದಾವನ ಪ್ರವೇಶಿಸಿದರು.ಪ್ರಾತ:ಕಾಲದಲ್ಲಿ ಇವರ ಸ್ಮರಣೆ ಮಾಡಿದರೆ ಸಾಕು,ಸೊಗಸಾದ ಊಟದ ಅನುಗ್ರಹ ಅಂದು.ಇದು ಭಕ್ತರು ಅನುಭವದ ಮಾತು.ಇವರ ಆರಾಧನೆಯು ಜ್ಯೇಷ್ಠಶುದ್ಧ ಚತುರ್ದಶಿ ಮೂಲವೃಂದಾವನವಿರುವಮುಳಬಾಗಿಲಿನಲ್ಲಿ ಬಹಳ ವಿಜ್ರಂಭಣೆಯಿಂದನೆರವೇರಿಸಲಾಗುತ್ತದೆ.

ಶ್ರೀಪಾದರಾಜರು "ರಂಗವಿಠಲ" ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನುರಚಿಸಿದ್ದಾರೆ.ಇವರ ಜನಪ್ರಿಯ ದೇವರನಾಮಗಳೆಂದರೆ:-

"ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ"

"ಭೂಷಣಕೆ ಭೂಷಣ"

"ಇಟ್ಟಾಂಗೆ ಇಡುವೇನೋ ಹರಿಯೇ,ನನ್ನ ದೊರೆಯೇ"

ಶ್ರೀಪಾದರಾಜರು ಭಾಗವತ ಧರ್ಮ,ಕನ್ನಡ ಭಕ್ತಿ

ಸಾಹಿತ್ಯಗಳಿಗೆ ಜೀವತುಂಬಿ ಧೃವತಾರೆಯಂತೆ

ಬಾಳಿ,ಬೆಳಗಿದ್ದಾರೆ.

ಶ್ರೀಪಾದರಾಜರ ಆರಾಧನ ದಿನದಂದು ,ಭಕ್ತಿಯ

ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ

ಪಾತ್ರರಾಗೋಣ.

"ಬಲ್ಲವನು ಎಲ್ಲವನು ಹರಿಯಿರಲು ಭಜಿಸದೆ/

   ಕ್ಷುಲ್ಲದೇವರ ಬೇಡಿ ಸುಖವ ಬಯಸುವೆ ನೀನು/

   ಕಲ್ಲುಗೋವಿನ ಪಾಲ ಕರುವು ಬಯಸಿದಂತೆ

   ಹಲ್ಲು ಹೋಹದನರಿಯ ಅಕ್ಕಟಕಟ/ಬಲ್ಲಿದ

   ದೈವ ಶ್ರೀರಂಗವಿಠಲನು ಕೈವಲ್ಯವನೇ ಕೊಟ್ಟು

   ಸಂತೈಸುವನು ಭಜಿಸೋ//   

   ಎಂದ ಅವರ ಹಿತೋಪದೇಶವನ್ನು ಮನದಲ್ಲಿ

  ಮೆಲುಕು ಹಾಕುತ್ತಾ ಗುರುಗಳನ್ನು ಭಕ್ತಿಯಿಂದ

   ಸ್ಮರಿಸೋಣ.

************

  ಲೇಖಕರು :

ಜಯಭೀಮ ಜೋಯಿಸ್, ಶಿವಮೊಗ್ಗ

Post a Comment

0 Comments

Ad Code

Responsive Advertisement