ಶ್ರೀ ಸಮೀರ ಸಮಯ ಸಂಜೀವಿನಿ ಸಂಸತ್ ಪ್ರತಿಷ್ಠಾನದವರು ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ ಜೂನ್ 12, ಭಾನುವಾರ ಸಂಜೆ, ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ, ವಿ|| ಕೊವಿಲಾಡಿ ಆರ್ ಮಧ್ವಪ್ರಸಾದ್ (ಶ್ರೀರಂಗಂ) ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ, ವಿ|| ಶ್ರೀ ವೆಂಕಟೇಶ್ ಜೋಶಿಯಾರ್ (ಪಿಟೀಲು), ವಿ|| ಶ್ರೀ ಎನ್. ವಾಸುದೇವ (ಮೃದಂಗ), ವಿ|| ಶ್ರೀ ಎನ್ ಎಸ್ ಕೃಷ್ಣಪ್ರಸಾದ್ (ಘಟ) ವಾದ್ಯಗಳಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ವಿ|| ಶ್ರೀ ಚಿಂತಲಪಲ್ಲಿ ವಿ ಶ್ರೀನಿವಾಸ್, ಸಂಸ್ಥೆಯ ಅಧ್ಯಕ್ಷರಾದ ಶ್ರೀ ವೇದವ್ಯಾಸಾಚಾರ್, ಗೌರವ ಕಾರ್ಯದರ್ಶಿಗಳಾದ ಶ್ರೀ ಕಟ್ಟೆ ಸತ್ಯನಾರಾಯಣ ಹಾಗೂ ಸಂಗೀತಾಭಿಮಾನಿಗಳು ಹಾಜರಿದ್ದರು.

0 Comments