ಬಳ್ಳಾರಿ ಜೂನ್ 07. ಇನ್ನರವೀಲ್ ಸಂಸ್ಥೆ ಶ್ರೀರಾಂಪುರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಬಿಸಿ ಊಟ ಮಾಡಲು ಸ್ಟೈನ್ಲೆಸ್ ಸ್ಟೀಲ್ ತಟ್ಟೆಗಳನ್ನು ನೀಡಿತು. ಸಂಸ್ಥೆಯ ಅಧ್ಯಕ್ಷರಾದ ರೂಪಶ್ರೀ ದೀಪಕ್‍ನವರು ಮಕ್ಕಳಿಗೆ ಚೆನ್ನಾಗಿ ಓದಿ ನಾಳೆಯ ದಿನ ಅವರೂ ನಾಲ್ಕು ಜನರಿಗೆ ಸಹಾಯ ಮಾಡುವಂಥವರಾಗಬೇಕೆಂದು ಕಿವಿ ಮಾತುನ್ನು ಹೇಳಿ ಪ್ರೋತ್ಸಹಿಸಿದರು. ಸದಸ್ಯರಾದ ಶ್ರೀಮತಿ ಅನಿತಾ ಜೈನ್ ಹಾಗೂ ಜಯಲಕ್ಷ್ಮಿಯವರು ಮತ್ತಿತರರು ಉಪಸ್ಥಿತರಿದ್ದರು.

0 Comments