Ticker

6/recent/ticker-posts

Ad Code

Responsive Advertisement

ಪುರವರದ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್

ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರದ ನಾಡಕಚೇರಿಯಲ್ಲಿ  ಪಿಂಚಣಿ ಅದಾಲತ್ ನ್ನು ಏರ್ಪಡಿಸಿದ್ದು ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಕಚೇರಿಗೆ ಬಂದು ಪಡೆದುಕೊಳ್ಳಬಹುದು. ಇಲ್ಲಿ ಯಾವುದೇ ಮಧ್ಯವರ್ತಿಗಳ ಬಳಿ ಹೋಗಬಾರದೆಂದು ಉಪ ತಹಶೀಲ್ದಾರ್ ಜಯಲಕ್ಷ್ಮಮ್ಮ ಕರೆ ನೀಡಿದರು.



ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ವೇತನ, ವೃದ್ಧಾಪ್ಯ ವೇತನ ವಿಧವಾ ವೇತನ, ಮನಸ್ವಿನಿ ವೇತನ, ಅಂಗವಿಕಲ ವೇತನ,

ಸುಮಾರು 20 ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು. ಹೊಸದಾಗಿ ಪಿಂಚಣಿ ಮಾಡಿಸಲು ಸುಮಾರು 07 ಅರ್ಜಿಗಳು ಬಂದಿದ್ದು ಈ ಹಿಂದೆ ಸ್ಥಗಿತ ಗೊಂಡಿದ್ದ ಪಿಂಚಣಿ ಗಳಿಗೆ ಸುಮಾರು 10 ಮರು ಅರ್ಜಿ ಗಳು ಬಂದಿದ್ದು ಅದರಲ್ಲಿ 10 ನ್ನು ಅಲ್ಲೇ ಇತ್ಯರ್ಥಪಡಿಸಲಾಯಿತು. ಇನ್ನು ಉಳಿದಂತಹ ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದು ಉಪತಹಶೀಲ್ದಾರ್ ಜಯಲಕ್ಷ್ಮಮ್ಮ ಹಾಗೂ ಕಂದಾಯ ತನಿಖಾಧಿಕಾರಿಗಳಾದಂತಹ ಕೆ.ನಟರಾಜು ತಿಳಿಸಿದರು. 

ಈ ವೇಳೆಯಲ್ಲಿ ಕಂದಾಯ ಇಲಾಖೆಯ, ಶ್ರೀಧರ್, ನಾಗಭೂಷಣ್, ಶ್ರೀನಿವಾಸ್, ಶಿವರಾಮಯ್ಯ ಮೀನಮ್ಮ, ಕಂಪ್ಯೂಟರ್ ಆಪರೇಟರ್  ಸಂಧ್ಯಾ, ಚರಣ್, ಹಾಗೂ ಎಲ್ಲಾ ಗ್ರಾಮ ಸಹಾಯಕರು ಮತ್ತಿತರರಿದ್ದರು.


ವರದಿ:ನಾಗೇಶ್ ಜೀವಾ ಪುರವರ

Post a Comment

0 Comments

Ad Code

Responsive Advertisement