Ticker

6/recent/ticker-posts

Ad Code

Responsive Advertisement

ಹಗಲು ಮತ್ತು ರಾತ್ರಿ ಕನ್ನಾ ಕಳವು ಮಾಡುತ್ತಿದ್ದ ಕುಖ್ಯಾತ 4 ಜನ ಆರೋಪಿಗಳ ಬಂಧನ,

ಪಿರ್ಯಾದುದಾರರು ದಿನಾಂಕ 02-06-2022 ರಂದು ಮಧ್ಯಾಹ್ನ 3-15 ಸಮಯದಲ್ಲಿ ಪೀಣ್ಯ ಠಾಣಾ ಸರಹದ್ದಿನ ಟಿ. ದಾಸರಹಳ್ಳಿ, ವಿದ್ಯಾನಗರದ 1ನೇ ಮುಖ್ಯರಸ್ತೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಮಗುವನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದು, ಪುನಃ ವಾಪಸ್ಸು ಸಂಜೆ 4-15 ಗಂಟೆ ಸುಮಾರಿಗೆ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವುವಾಗಿರುವ ಚಿನ್ನಾಭರಣಗಳನ್ನು ಮತ್ತು ನಗದು ಹಣವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಹಗಲು ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ. 


ಈ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 35.47 ಲಕ್ಷ ರೂ. ಬೆಲೆ ಬಾಳುವ 655 ಗ್ರಾಂ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 2-ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೀಣ್ಯ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಚಾಳಿಬಿದ್ದ ಹಳೆಯ ಎಂ.ಓ. ಆಸಾಮಿಯಾಗಿದ್ದು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಹಗಲಿನ ಮತ್ತು ರಾತ್ರಿ ವೇಳೆಯಲ್ಲಿ ಬಾಗಿಲ ಬೀಗ ಹೊಡೆದು ಕಳವು ಮಾಡುವ ಪ್ರವೃತ್ತಿ ಹೊಂದಿರುತ್ತಾರೆ. ಆರೋಪಿಗಳು ಒಬ್ಬರಿಗೊಬ್ಬರು ಬೇರೆ ಬೇರೆ ಪ್ರಕರಣಗಳಲ್ಲಿ ಜೈಲಿಗೆ ಹೋದಾಗ ಪರಿಚಯವಾಗಿರುತ್ತಾರೆ.  ಎ1) ಆರೋಪಿಯು ಗುಜರಿ ವ್ಯಾಪಾರ  ಮಾಡಿಕೊಂಡಿದ್ದು, 1990 ನೇ ಸಾಲಿನಿಂದ ಕನ್ನಾ ಕಳವು ಕೃತ್ಯಗಳನ್ನು ಮಾಡುತ್ತಿದ್ದು, ಈತನ ವಿರುದ್ಧ ಬೆಂಗಳೂರು ನಗರ, ಹಾಸನ, ಮಂಡ್ಯ, ಮೈಸೂರು ನಗರ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಒಟ್ಟು 24 ಕ್ಕೂ ಹೆಚ್ಚಿನ ಕನ್ನಾ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಆರೋಪಿಯು 6 ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿರುತ್ತಾನೆ. ಆರೋಪಿಯು 2022 ನೇ ಸಾಲಿನ ಮೇ ತಿಂಗಳಲ್ಲಿ ಮೈಸೂರು ಮಂಡಿ ಮಹಲ್ಲಾ ಪೊಲೀಸ್ ಠಾಣೆ ಹಗಲು & ರಾತ್ರಿ ಕನ್ನಾ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ. ಎ2) ಆರೋಪಿಯು ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, 2010ನೇ ಸಾಲಿನಿಂದ ಕನ್ನಾ ಕಳವು ಮಾಡುತ್ತಿದ್ದು, ಈತನ ವಿರುದ್ಧ ಬೆಂಗಳೂರು ನಗರ, ಚಿಕ್ಕಮಗಳೂರು, ಹಿರಿಯೂರು, ಭದ್ರಾವತಿ, ತುಮಕೂರು, ಉಡುಪಿ, ಚಾಮರಾಜನಗರ, ವಿಜಯಪುರ ಜಿಲ್ಲೆಗಳಲ್ಲಿ ಒಟ್ಟು 21 ಕ್ಕಿಂತ ಹೆಚ್ಚು ಕನಾ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಯು 11 ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿರುತ್ತಾನೆ. ಆರೋಪಿಯು 2021 ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಮೈಸೂರಿನ ಎನ್.ಆರ್. ಮೊಹಲ್ಲಾ ಪೊಲೀಸ್ ಠಾಣೆಯ ವಾರೆಂಟ್ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ. 

ಎ3) ಆರೋಪಿಯು 2020 ನೇ ಸಾಲಿನಲ್ಲಿ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ. ಎ4) ಆರೋಪಿಯು ಎ2) ಆರೋಪಿಯ ಸಂಬಂಧಿಯಾಗಿದ್ದು, ಕಳವು ಮಾಡಿರುವ ಚಿನ್ನಾಭರಣಗಳೆಂದು ಗೊತ್ತಿದ್ದರೂ ಸಹ ತನ್ನ ಹೆಸರಿನಲ್ಲಿ ಬ್ಯಾಂಕ್ ಮತ್ತು ಪೈನಾನ್ಸ್ ಕಂಪನಿಗಳಲ್ಲಿ ಅಡಮಾನವಿರಿಸಿ ಬಂದ ಹಣದಲ್ಲಿ ಪಾಲು ಪಡೆಯುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.  

ಆರೋಪಿಗಳ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆ-1 ಮತ್ತು ಯಾದಗಿರಿ ಟೌನ್ ಪೊಲೀಸ್ ಠಾಣೆ-1 ಹಗಲು ಕನ್ನಾ ಕಳವು ಪ್ರಕರಣ ಸೇರಿದಂತೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಮೇಲ್ಕಂಡ ಪ್ರಕರಣಗಳಲ್ಲಿ ಶ್ರೀ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಶ್ರೀ ಟಿ.ಎಂ. ಧರ್ಮೇಂದ್ರ, ಪೊಲೀಸ್ ಇನ್ಸ್‍ಪೆಕ್ಟರ್, ಪೀಣ್ಯ ಪೊಲೀಸ್ ಠಾಣೆ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಶ್ರೀ ಇಬ್ರಾಹಿಂ, ಶ್ರೀ ಭಾನುಪ್ರಕಾಶ್ ಹಾಗೂ ಸಿಬ್ಬಂದಿಯವರಾದ ಶ್ರೀ ಹರೀಶ್ ಹೆಚ್‍ಸಿ 7299, ಶ್ರೀ ಶಿವಕುಮಾರ್ ಹೆಚ್‍ಸಿ-9767, ಶ್ರೀ ಅನಿಲ್ ಕುಮಾರ್ ಹೆಚ್‍ಸಿ-7486, ಶ್ರೀ ವೀರೇಶ್. ಪಿಸಿ-19893, ಶ್ರೀ ಯಮನಪ್ಪ  ಮರಟಗೇರಿ ಪಿಸಿ-14229 ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. 


Post a Comment

0 Comments

Ad Code

Responsive Advertisement