Ticker

6/recent/ticker-posts

Ad Code

Responsive Advertisement

ಶ್ರೀ ಗುರು ರಾಯರ ಸನ್ನಿಧಿಯಲ್ಲಿ ಉತ್ಸವಗಳು ಹಾಗೂ "ಭರತನಾಟ್ಯ"

 ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಗುರುವಾರದ ಪ್ರಯುಕ್ತ ಪರಮಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.

ಸಂಜೆ ಸಮಯದಲ್ಲಿ ಪಲ್ಲಕ್ಕಿ ಉತ್ಸವ ಗಜವಾಹನೋತ್ಸವ ರಥೋತ್ಸವ ದೀಪೋತ್ಸವದೊಂದಿಗೆ ಮಹಾ ಮಂಗಳಾರತಿಯು ನೆರವೇರಿತು ತದನಂತರ ಶ್ರೀಮತಿ ವಿದುಷಿ- ದರ್ಶಿನಿ ಮಂಜುನಾಥ್ ಇವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳು "ಭರತನಾಟ್ಯ" ವನ್ನು ಶ್ರೀ ಸುಧೀಂದ್ರ ದೇಸಾಯಿ ಅವರ ಸಹಕಾರ ದೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು ಪುರೋಹಿತ್ ನಂದಕಿಶೋರ್ ಆಚಾರ್ಯ ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಿ  ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ "ಭರತನಾಟ್ಯ"ದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹಿಸಿದರು. 

















Post a Comment

0 Comments

Ad Code

Responsive Advertisement