Ticker

6/recent/ticker-posts

Ad Code

Responsive Advertisement

ವೀರಶೈವ ಲಿಂಗಾಯತ ಎಲ್ಲಾ ಒಳ ಪಂಗಡಗಳ ಸಮುದಾಯಗಳನ್ನು ಹಿಂದುಳಿದ ವರ್ಗದ (ಓ.ಬಿ.ಸಿ) ಪಟ್ಟಿಗೆ ಸೇರಿಸಲು ಈಶ್ವರಖಂಡ್ರೆ ಆಗ್ರಹ

 ಬಳ್ಳಾರಿ ಜೂನ್ 30. ವೀರಶೈವ ಲಿಂಗಾಯತದ ಎಲ್ಲಾ ಒಳ ಪಂಗಡಗಳ ಸಮುದಾಯಗಳನ್ನು ಹಿಂದುಳಿದ ವರ್ಗದ (ಓ.ಬಿ.ಸಿ) ಪಟ್ಟಿಗೆ ಸೇರಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಈಶ್ವರಖಂಡ್ರೆ ಒತ್ತಾಯಿಸಿದರು.  ಜಿಲ್ಲೆಯ ಸಂಡೂರು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ, ಬಳ್ಳಾರಿ-ವಿಜಯನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ದೇಶದಲ್ಲಿ ವೀರಶೈವ ಲಿಂಗಾಯತರು ಸುಮಾರು 3.5ಕೋಟಿಗೂ ಅಧಿಗ ಜನಸಂಖ್ಯೆ ಹೊಂದಿದ್ದು, ನಮ್ಮ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಂಪೂರ್ಣ ಹಿಂದುಳಿದಿದ್ದು, ಕೇಂದ್ರ ಸರ್ಕಾರ ಸಮುದಾಯವನ್ನು ಓ.ಬಿ.ಸಿ. ಪಟ್ಟಿಗೆ ಸೇರಿಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡಬೇಕು. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ಈ ಬಗ್ಗೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಗಮನ ಸೆಳೆಯಲಾಗುವುದೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಈಗ್ಗೆ 8 ತಿಂಗಳ ಹಿಂದೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ಶ್ರೀ ಹಾನಗಲ್ಲು ಕುಮಾರೇಶ್ವರ ಜಯಂತೋತ್ಸವದ ಅಂಗವಾಗಿ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆಯವರಿಗೆ ಸಕ್ಕರೆ ಕರಡೀಶ ಪ್ರಶಸ್ತಿ, ಲಿಂ|| ಕೊಟ್ಟೂರು ಸಂಸ್ಥಾನ ಮಠದ ಡಾ.ಸಂಗನ ಬಸವ ಮಹಾಸ್ವಾಮಿಜಿಯವರಿಗೆ ಹಾನಗಲ್ಲು ಕುಮಾರಸ್ವಾಮಿ ಪ್ರಶಸ್ತಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದ್ದ ಕಾರ್ಯಕ್ರಮ ಖ್ಯಾತ ನಟ ಪುನೀತ್ ರಾಜಕುಮಾರ್ ರವರ ಅಕಾಲಿಕ ನಿಧನನಿಂದಾಗಿ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ನಿಗಧಿ ಪಡಿಸಿ, ಬಳ್ಳಾರಿ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಲ್ಲಿ ಸಂಘಟನೆಯ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ ಮಾಡಿ, ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ನಮ್ಮ ಸಮುದಾಯವಿದ್ದು, ಅತೀ ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕೆಂದು ಸೂಚಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕಳೆದ 20 ವರ್ಷಗಳಿಂದ ಮಹಾಸಭಾ ನಿಂತ ನೀರಾಗಿದ್ದು, ಈಗ ಒಂದು ವರ್ಷದಿಂದ ಜಿಲ್ಲೆಯಲ್ಲಿ ವೀರಶೈವ ಮಹಾಸಭಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಪ್ರಚಲೀತವಾಗಿದ್ದು, ಅದೇ ರೀತಿ ಮಾನ್ಯ ಮುಖ್ಯಮಂತ್ರಿಗಳಿಗೆ ಬಳ್ಳಾರಿ ನಗರದಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಾಣಕ್ಕೆ 2.00ಎಕರೆ ಜಮೀನು ಮನವಿ ಮಾಡಿದಾಗ ತಕ್ಷಣ ಸ್ಪಂದಿಸಿ ಜಿಲ್ಲಾಡಳಿತಕ್ಕೆ ಆದಷ್ಟು ಬೇಗ ವೀರಶೈವ ಭವನ ನಿರ್ಮಾಣ ಮಾಡುವುದಕ್ಕೆ ಮಂಜೂರು ಮಾಡಬೇಕೆಂದು ಆದೇಶಿಸಿದ್ದು, ಅದು ಪ್ರಗತಿಯಲ್ಲಿದ್ದು, ಮುಂದಿನ ದಿನಮಾನಗಳಲ್ಲಿ ಸಮುದಾಯವನ್ನು ಹೆಚ್ಚಿನ ಸಂಘಟನೆ ಮಾಡಲು ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಡೂರು ವಿರಕ್ತ ಮಠದ ಪ್ರಭುಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸರೆಡ್ಡಿ, ಬಿ.ಕೆ.ಜಿ. ಮೈನಿಂಗ್ ಕಂಪನೀ ಮಾಲೀಕರಾದ ನಾಗನಗೌಡ,ಚಾನಾಳ್ ಶೇಖರ್, ವೇಸ್ಕೋ. ಕಂಪನಿ ಮಾಲೀಕರಾದ ಕೆ.ಚನ್ನಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ವಿಜಯಪಾಟೀಲ್, ಜಿಲ್ಲಾಧ್ಯಕ್ಷ ಅಶ್ವಿನಿ ಕೋತಂಬರಿ, ಯುವ ಘಟಕದ ಅಧ್ಯಕ್ಷರಾದ ಯಾಳ್ಪಿ ಮೇಟಿ ದಿವಾಕರ್, ಕೋಶಾಧ್ಯಕ್ಷರಾದ ಚೋರನೂರು ರುದ್ರೇಶ್ ಎಲ್ಲಾ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



 

Post a Comment

0 Comments

Ad Code

Responsive Advertisement