Ticker

6/recent/ticker-posts

Ad Code

Responsive Advertisement

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣ

ಹತ್ಯೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಗೃಹಸಚಿವರಿಗೆ ಮನವಿ

  ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ರಾಜಸ್ಥಾನದ ಕನ್ನಯ್ಯಲಾಲ್ ಘಟನೆ ಖಂಡಿಸಿ, ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಕೇಂದ್ರ ಗೃಹ ಸಚಿವರಿಗೆ ಮನವಿ ನೀಡಲಾಯಿತು.

ಮನವಿಯಲ್ಲಿ ಹಿಂದೂಗಳನ್ನು ಮತ್ತು ಪ್ರಧಾನಮಂತ್ರಿಯವರನ್ನು ಸಹ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಹೇಳಿರುವುದು ಅತ್ಯಂತ ಭಯಾನಕ ಘಟನೆಯಾಗಿದೆ. ಇದನ್ನು ಸಮಸ್ತ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡನೆಯನ್ನು ಮಾಡುತ್ತೇವೆ. ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಮುಸಲ್ಮಾನ್ ಓಲೈಕೆಯ ಫಲವಾಗಿ ಮತಾಂಧ ಶಕ್ತಿಗಳು ಹಿಂದೂಗಳನ್ನು ನಾಮವಶೇಷ ಮಾಡುವ ಕೃತ್ಯವು ಮುಂದುವರೆದಿದೆ. ಇದು ಹಿಂದೂಗಳ ಅಸ್ತಿತ್ವದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.

೧. ಎಪ್ರಿಲ್ ೩ ರಂದು ರಾಜಸ್ಥಾನದ ಕರೋಳಿ ಎಂಬಲ್ಲಿ ಹೊಸವರ್ಷದ ಮೆರವಣಿಗೆಯ ಮೇಲೆ ಮತಾಂಧರು ಆಕ್ರಮಣ ಮಾಡಿದರು. ೫೦ ಹಿಂದೂಗಳ ವಾಹನ, ಅಂಗಡಿಯನ್ನು ಸುಟ್ಟು ಹಾಕಿದರು, ೫೦ ಕ್ಕೂ ಅಧಿಕ ಜನರು ಗಾಯಗೊಂಡರು. ಈ ಘಟನೆಯ ನಂತರ ಅನೇಕ ಹಿಂದೂಗಳು ಅಲ್ಲಿಂದ ಜೀವಭಯದಿಂದ ಪಲಾಯನವಾಗಬೇಕಾಯಿತು.

೨. ಮೇ ೨೨ ರಂದು ರಾಜಸ್ಥಾನದ ಜೋದಪುರದಲ್ಲಿ ದಲಿತ ಹಿಂದೂ ಕುಟುಂಬದ ಮೇಲೆ ರೋಹಿಂಗ್ಯಾ ಮತಾಂಧರು ಆಕ್ರಮಣ ಮಾಡಿದರು.

೩. ಮೇ ೧೨ ರಂದು ರಾಜಸ್ಥಾನದ ಹನುಮಂಗರ್‌ದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀ. ಸತ್ವೀರ್ ಸಹರಣ ಮೇಲೆ ಮತಾಂಧರು ಆಕ್ರಮಣ ಮಾಡಿದರು.

೪. ಜೂನ್ ೧ ರಂದು ರಾಜಸ್ಥಾನದ ಚಿತ್ತೊರಗರದಲ್ಲಿ ರಾಕೇಶ್ ಸಿಂಗ್ ಎನ್ನುವ ಹಿಂದೂ ನಾಯಕನನ್ನು ಮತಾಂಧರು ಬರ್ಭರವಾಗಿ ಹತ್ಯೆ ಮಾಡಿದರು.

೫. ಅಗಸ್ಟ ೧೦ ರಂದು ರಷಿರಾಜ್ ಜಿಂದಾಲ್ ಎನ್ನುವ ಹಿಂದೂ ಯುವಕನನ್ನು ರಾಜಸ್ಥಾನದಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಯಿತು.

೬. ಮಾರ್ಚ ೨೬ , ೨೦೨೨ ರಂದು ಮತಾಂಧನು ಹಿಂದೂ ಯುವತಿಯನ್ನು ರಾಜಸ್ಥಾನದಲ್ಲಿ ಬರ್ಭರವಾಗಿ ಹತ್ಯೆ ಮಾಡಿದನು.

೭. ಮೇ ೧೨ , ೨೦೨೨ ರಂದು ರಾಜಸ್ಥಾನದ ಬಲ್ವಾರ್ ನಗರದಲ್ಲಿ ಆದರ್ಶ ತಪೊಡಿಯ ಎನ್ನುವ ಯುವಕನನ್ನು ಮತಾಂಧರು ಬರ್ಭರವಾಗಿ ಹತ್ಯೆ ಮಾಡಿದರು.

ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ರಾಜಸ್ಥಾನ ಸರ್ಕಾರದ ಮುಸಲ್ಮಾನ ಸಮುದಾಯದ ಓಲೈಕೆಯ ನೀತಿಯಿಂದಾಗಿ, ಮತಾಂಧ ಶಕ್ತಿಗಳು ಕುಮ್ಮಕ್ಕಿನಿಂದ ಹಿಂದೂಗಳ ಹತ್ಯಾಖಾಂಡವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಈ ಮೇಲಿನ ಎಲ್ಲ ಘಟನೆಗಳು ಅತ್ಯಂತ ಗಂಭೀರವಾಗಿದ್ದು, ರಾಜಸ್ಥಾನದಲ್ಲಿ ಹಿಂದೂಗಳ ಅಸ್ತಿತ್ವದ ಪ್ರಶ್ನೆ ನಿರ್ಮಾಣವಾಗಿದೆ ಮತ್ತು ಅಲ್ಲಿ ಅಲ್ಪಸಂಖ್ಯಾತರಿಂದ ಹಿಂದೂ ಸಮುದಾಯವು ಅಪಾಯದಲ್ಲಿರುವುದರ ದ್ಯೋತಕವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಈ ಎಲ್ಲ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜಸ್ಥಾನದ ಹಿಂದೂಗಳ ರಕ್ಷಣೆಗೆ ದಾವಿಸಬೇಕು ಮತ್ತು ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾದ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕು. ತಪ್ಪಿತಸ್ತರ ಮೇಲೆ ಉಗ್ರ ಕ್ರಮ ಜರುಗಿಸಬೇಕು ಹಾಗೂ ಹಿಂದೂಗಳಿಗೆ ರಕ್ಷಣೆಯನ್ನು ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹ ಮಾಡುತ್ತಿದೆ. ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ಶ್ರೀರಾಮ ಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ. ಚಂದ್ರಶೇಖರ್, ಹಿಂದೂ ಮಹಾಸಭಾದ ಅಧ್ಯಕ್ಷರಾದ ಶ್ರೀ. ಸುರೇಶ ಜೈನ್, ಕನ್ನನ್ ಸುಭ್ರಮಣಿ, ನ್ಯಾಯವದಿಗಳಾದ ಡಿ ಸಿ ಗಂಗಾಧರ ಮತ್ತು ಶ್ರೀ. ಡಿ ಪಿ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.

ಇoತಿ ತಮ್ಮ ವಿಶ್ವಾಸಿ,

ಶ್ರೀ. ಮೋಹನ ಗೌಡ,

ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,

ದೂ. ಕ್ರ. ೭೨೦೪೦೮೨೬೦೯


Post a Comment

0 Comments

Ad Code

Responsive Advertisement