Ticker

6/recent/ticker-posts

Ad Code

Responsive Advertisement

ರಾಯರ ಸನ್ನಿಧಿಯಲ್ಲಿ "ಭರತನಾಟ್ಯ"

 ರಾಯರ ಸನ್ನಿಧಿಯಲ್ಲಿ "ಭರತನಾಟ್ಯ"  ರಾಯರ ದರ್ಶನ ಪಡೆದ ಚಿತ್ರ ನಟ "ಚಿಕ್ಕಣ್ಣ" ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಯಲ್ಲಿ ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ  ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ರಾಯರ ಬೃಂದಾವನಕ್ಕೆ ಅಭಿಷೇಕ ಅಲಂಕಾರ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು ಈ ಸಂದರ್ಭದಲ್ಲಿ ಚಿತ್ರ ನಟರಾದ ಶ್ರೀ ಚಿಕ್ಕಣ್ಣನವರು  ಶ್ರೀ ಗುರು ರಾಯರ ಸನ್ನಿಧಿಯಲ್ಲಿ ರಾಯರ ಪೂಜೆ ಹಾಗೂ   ತಮ್ಮ "ಉಪಾಧ್ಯಕ್ಷ" ಚಿತ್ರದ  ಪೂಜೆಯನ್ನು ರಾಘವೇಂದ್ರ ಸ್ವಾಮಿಗಳ ಮುಂಭಾಗದಲ್ಲಿ ದೀಪಗಳನ್ನು ಪ್ರಜ್ವಲಿಸುವ ಮೂಲಕ ಪ್ರಾರ್ಥನೆ ಯೊಂದಿಗೆ ಶ್ರೀರಾಯರ ದರ್ಶನ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದರು, ತದ ನಂತರ  ಸನ್ನಿಧಿಯಲ್ಲಿ ಸಂಜೆ ಆರು ಮೂವತ್ತಕ್ಕೆ ದೀಪೋತ್ಸವ ಪಲ್ಲಕ್ಕಿ ಉತ್ಸವ ಗಜವಾಹನೋತ್ಸವ ರಥೋತ್ಸವ ತೊಟ್ಟಿಲು ಸೇವಾ ಮಹಾ ಮಂಗಳಾರತಿಯ ನೆರವೇರಿತು,ನಂತರ  ಶ್ರೀಮತಿ ಜೋಶಿ ಹೆಡ್ಡಸೆ  ಅವರ  ಶಿಷ್ಯರಾದ  ಶ್ರೀಮತಿ ದರನಿತಾ ಸುರೀಕಾ ಹಾಗೂ ಕುಮಾರಿ ಸಂಚಿತಾ ಸಾರಂಗನ್ ರವರು ವಿಶೇಷವಾಗಿ "ಭರತನಾಟ್ಯ" ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು  ನಂದಕಿಶೋರ್ ಆಚಾರ್ಯ ತಿಳಿಸಿದರು ಈ ಸಂದರ್ಭದಲ್ಲಿ  ಭಕ್ತರು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .



Post a Comment

0 Comments

Ad Code

Responsive Advertisement