Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ನಿಂದ ಸ್ತ್ರೀ ಶಕ್ತಿ ಸಂಘಟನಾ ಸಮಿತಿ ರಚನೆ-ಉಮಾಶ್ರೀ

ಬಳ್ಳಾರಿ, ಜೂ.22-ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಸ್ತ್ರೀ ಶಕ್ತಿ ದಂಘಟನಾ ಸಮಿತಿ ರಚಿಸಲಾಗಿದ್ದು ನನ್ನ ಅಧ್ಯಕ್ಷತೆಯಲ್ಲಿ 40 ಜನ ಪ್ರಮುಖ ಮಹಿಳೆಯರ ತಂಡವನ್ನು ರಚಿಸಲಾಗಿದೆ ಎಂದು ಉಮಾಶ್ರೀ ಹೇಳಿದರು


.ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಚುನಾಬಣೆಯಲ್ಲಿ ಗೆದ್ದ ಕಾಂಗ್ರೆಸ್ ಮಹಿಳಾ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಪಕ್ಷ ಸಂಘಟಿಸುವ ಯೋಜನೆ ಇದೆ. ಇವರ ಮೂಲಕ ಎಲ್ಲ ಮಹಿಳೆಯರನ್ನು ಸಂಘಟಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸಂಘಟಿಸಿ ಇದೇ 24 ರಂದು ಸಂಗನಕಲ್ಲು ರಸ್ತೆಯ ಕೆಆರ್ ಎಸ್ ಫಂಕ್ಷನ್ ಹಾಲ್ ನಲ್ಲಿ ನಾ ನಾಯಕಿ ಎನ್ನುವ ಪೈಲೆಟ್ ಕಾರ್ಯಕ್ರಮ ಮಾಡುವುದಾಗಿ ಹೇಳಿದರು. ಇದು ಕೇವಲ ಬಳ್ಳಾರಿ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಕಾರ್ಯಕ್ರಮವಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಧುರೀಣೆಯರಾದ ಮಂಜುಳಾ ನಾಯ್ಡು, ಬಿ.ಭಾಗ್ಯಲಕ್ಷ್ಮಿ, ಎಂ.ಶಾಂತಮ್ಮ, ಕುಮಾರಮ್ಮ, ಸೌಭಾಗ್ಯಮ್ಮ, ಕಮಲಾ ಬಸವರಾಜ, ಶೋಭಾ ಕಳಿಂಗ, ಪರ್ವೀನ್,ಭಾನು, ಮಲ್ಲೇಶ್ವರಿ, ಎಂ.ಪಿ.ಕಮಲಾ, ಪದ್ಮ, ಚಂಪಾ ಚವ್ಹಾಣ್ ಮತ್ತಿತರರು ಈ ಸುದ್ದಿಗೋಷ್ಠಿಯಲ್ಲಿದ್ದರು.

 ಕೆಪಿಸಿಸಿ ಸ್ತ್ರೀ ಶಕ್ತಿ ಸಂಘಟನಾ ಸಮಿತಿಗೆ ರಾಜ್ಯಾಧಕ್ಷರಾಗಿ ಉಮಾಶ್ರೀ:-ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಅಧ್ಯಕ್ಷರಾಗಿದ್ದಾರೆ.ಸದಸ್ಯರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆಯರಾದ ರಾಣಿ ಸತೀಶ್, ಮೋಟಮ್ಮ, ಜಯಮಾಲಾ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಶಾಸಕಿಯರಾದ ಕನೀಜ್ ಫಾತಿಮಾ, ಸೌಮ್ಯ ರೆಡ್ಡಿ, ರೂಪಾ ಶಶಿಧರ್, ಕುಸುಮಾವತಿ ಸಿ.ಶಿವಳ್ಳಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಮಿಟಿ ರಾಜ್ಯಾಧ್ಯಕ್ಷೆ ಪುμÁ್ಪ ಅಮರನಾಥ್, ಮಾಜಿ ಅಧ್ಯಕ್ಷೆ ಆರ್.ಮಂಜುಳಾ ನಾಯ್ಡು, ವಿಧಾನ ಪರಿಷತ್ ಮಾಜಿ ಸದಸ್ಯೆ ಯರಾದ ಮಲ್ಲಾಜಮ್ಮ, ಜಲಜಾ ನಾಯಕ್, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಮಾಜಿ ಮೇಯರ್‍ಗಳಾದ  ಜಿ.ಪದ್ಮಾವತಿ, ಗಂಗಾಂಬಿಕೆ, ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಭಾರತಿ ಶಂಕರ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸಾ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳು ಹಾಗೂ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕಮಲಾಕ್ಷಿ ರಾಜಣ್ಣ, ಎಐಸಿಸಿ ಸ್ಪೀಕರ್ ಐಶ್ವರ್ಯ ಮಹಾದೇವ್, ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹೆಚ್., ಸಿಎಂಸಿ ಮಾಜಿ ಸದಸ್ಯೆ ದೀಪಾ ನಾಗರಾಜ ಗೌರಿ, ಡಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯರಾದ ಶಾಲೆಟ್ ಪಿಂಟೋ,   ದೇವಿಕಾ ಯೋಗಾನಂದ, ಕೆಪಿಸಿಸಿ ಸ್ಪೋಕ್ಸ್ ಪರ್ಸನ್ ಕುಮಾರಿ ಭವ್ಯ ನರಸಿಂಹಮೂರ್ತಿ, ಕೆಪಿಸಿಸಿ ಪ್ಯಾನೆಲಿಸ್ಟ್ ಅಕ್ಕಯ ಪದ್ಮಶಾಲಿ, ಕೆಪಿಸಿಸಿ ಕಂಟ್ರೋಲ್ ರೂಂನ ಕೆ ಎಸ್ ಜೈ ಶಾಂಭವಿ, ಜಯಲಕ್ಷ್ಮಿ ಪುತ್ರನ್ ಸಮಿತಿಯಲ್ಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವೆ ಸುಮಾ ವಸಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ವಾಸಂತಿ ಶಿವಣ್ಣ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮಮತಾ ಗತ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ್ ಇನ್ನಿತರರು ಸಮಿತಿಯಲ್ಲಿದ್ದಾರೆ.



 

Post a Comment

0 Comments

Ad Code

Responsive Advertisement