ಬಳ್ಳಾರಿ ಜೂನ್ 23. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಿಂದ ಸಿರುಗುಪ್ಪಕ್ಕೆ ಹೋಗುವ ದಾರಿ ಮಧ್ಯದಲ್ಲಿ ಶಾಸನವಾಸಪುರ ಮತ್ತು ನಾಡಂಗ ಬೈಕ್ ಸವಾರರು ಒಂದಕ್ಕೊಂದು ಬೈಕ್ ಡಿಕ್ಕಿಯಾಗಿ ಶಾಸನವಾಸಪುರದ ಗೊಲ್ಲರ ಚಂದ್ರಪ್ಪನಿಗೆ (ವಯಸ್ಸು 45) ತೀವ್ರ ಗಾಯಗೊಂಡಿದ್ದು ನಾಡಂಗ ಮಹಿಳೆಗೆ ಕೂಡ ಗಾಯವಾಗಿದ್ದು ಅದೇ ದಾರಿಯಲ್ಲಿ ತೆರಳುತಿದ್ದ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ದಾರಿಯ ಮಧ್ಯದಲ್ಲಿ ಅಪಘಾತ ಕಂಡ ತಕ್ಷಣ ಅವರನ್ನು ಸಿದ್ದಪ್ಪನವರ ಕಾರಿನಲ್ಲಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
.jpg)
0 Comments