Ticker

6/recent/ticker-posts

Ad Code

Responsive Advertisement

ಶ್ರೀಪಾದರಾಜರ ಆರಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು.

ಹರಿದಾಸ ಸಾಹಿತ್ಯದ ಸವ್ಯಸಾಚಿ ಮುಳಬಾಗಿಲಿನ ತಪೋನಿದಿ ಶ್ರೀಪಾದರಾಜರ ಆರಾಧನೆಯನ್ನು ದಿನಾಂಕ 13.6.22 ಸೋಮವಾರ ನಾಡಿನಾದ್ಯಂತ ಸಂಭ್ರಮದ ಸಡಗರ ಹಾಗು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಬಾರಿ  ಬೆಂಗಳೂರಿನ ಸಿಟಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ  ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಚ ಬಾರತ ಆಂದೋಲನದ ಅಂಗವಾಗಿ ಹಾಗು ಪರಿಸರ ದಿನಾಚರಣೆಯ ಸಲುವಾಗಿ ಕೋಣನ ಕುಂಟೆ ಯ ರಾಯರ ಮಠದ ಸುತ್ತಮುತ್ತಲಿನ ರಸ್ತೆಯನ್ನು ಶುಚಿ ಮಾಡಿದರು. ಹಾಗು ಶ್ರೀಮಠದ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಿದರು  .


ಕೋಣನ ಕುಂಟೆ ರಾಯರ ಮಠದ ಕಾರ್ಯದರ್ಶಿಗಳಾದ ಶ್ರೀ ಯುತ ಪಿ . ಎನ್. ಫಣಿ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ  ಪ್ರಾಮುಖ್ಯತೆಯನ್ನು ತಿಳಿಸಿದರು. ಶ್ರೀಮಠದ ಅಧ್ಯಕ್ಷರಾದ ಡಾ||ಅನಂತ ಪದ್ಮನಾಭ ರಾವ್ ಅವರು  ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ವಿದ್ಯಾರ್ಥಿಗಳಿಗೆ ನೀಡಿ  ರಾಘವೇಂದ್ರ ಸ್ವಾಮಿಗಳು  ಎಲ್ಲರಿಗೂ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸಿದರು.



Post a Comment

0 Comments

Ad Code

Responsive Advertisement