Ticker

6/recent/ticker-posts

Ad Code

Responsive Advertisement

ಗಿಡಮರಗಳನ್ನು ಬೆಳೆಸುವುದರಿಂದ ಮಣ್ಣಿನ ರಕ್ಷಣೆ,ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳನ್ನು ತಡೆಯುತ್ತದೆ

ಬಳ್ಳಾರಿ ಜೂನ್ 08.ಗಿಡಮರಗಳನ್ನು ಬೆಳೆಸುವುದರಿಂದ ಮಣ್ಣಿನ ರಕ್ಷಣೆ ಜೊತೆಗೆ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳನ್ನು ತಡೆಯುತ್ತದೆ. ಸಕಾಲಕ್ಕೆ ಮಳೆಯಾಗಿ,ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ ಗಳಾದ ಶ್ರೀನಿವಾಸ ರೆಡ್ಡಿ ಗಿಡ ನೆಟ್ಟು ನಂತರ ಮಾತನಾಡಿದ ಅವರು ಪರಿಸರ ನಾಶದಿಂದ ಮನುಕುಲದ ನಾಶವಾಗುತ್ತದೆ. ಆದ್ದರಿಂದ ನೀವು ನಿಮ್ಮ ಮನೆ ಮುಂದೆ ಗಿಡಗಳನ್ನು ಬೆಳಸಬೇಕೆಂದು ಹೇಳಿದರು. ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಮತಿ,ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ, ಶ್ವೇತಾ, ಉಮ್ಮೆಹಾನಿ,ಶಶಮ್ಮ,ಅಂಗನವಾಡಿ ಶಿಕ್ಷಕರಾದ ಶ್ರೀದೇವಿ, ನಿಂಗಮ್ಮ,ಆಶಾಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಮುಂತಾದವರು ಉಪಸ್ಥಿತರಿದ್ದರು.


 

Post a Comment

0 Comments

Ad Code

Responsive Advertisement