ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಜಗದೀಶ ಹರಿ ಕುಲಕರ್ಣಿ, ಯೋಗೇಂದ್ರ ಕೌಶಿಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪದವಿಗಳ ಪ್ರದಾನ :
35 ನೇ ಘಟಿಕೋತ್ಸವದಲ್ಲಿ 42 ಪಿಹೆಚ್ಡಿ, 253 ಸ್ನಾತಕೋತ್ತರ, 595 ಸ್ನಾತಕ ಪದವಿಗಳನ್ನೊಳಗೊಂಡು ಒಟ್ಟು 890 ಅಭ್ಯರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. 48 ಚಿನ್ನದ ಪದಕಗಳು ಹಾಗೂ 11 ನಗದು ಬಹುಮಾನಗಳನ್ನು ಅತಿಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕೃಷಿ ವಿವಿ ಕುಲಪತಿ ಡಾ.ಮಹದೇವ ಬಿ.ಚೆಟ್ಟಿ ಸ್ವಾಗತಿಸಿ,ವಾರ್ಷಿಕ ವರದಿ ವಾಚಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ, ಕುಲಸಚಿವ ಶಿವಾನಂದ ಕರಾಳೆ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ, ವಿದ್ಯಾವಿಷಯಕ ಪರಿಷತ್ತು ಹಾಗೂ ಅಧ್ಯಯನ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದರು.
Thaawarchand Gehlot, Hon'ble Governor of Karnataka, attended the 35th convocation of University of Agricultural Sciences, Dharwad today. Agriculture minister B.C Patil, Dr. Rakeshchandra Agrawal, Dr. Mahadeva B. Chetty and others were present.
0 Comments