ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನ್ಯಾಯಬೆಲೆ ಅಂಗಡಿ ಮಾಲೀಕರ “ಬೃಹತ್ ಪ್ರತಿಭಟನೆ” ನಡೆಸಲಿದ್ದಾರೆ.
ದಿನಾಂಕ 05-07-2022ರ ಮಂಗಳವಾರ ಸಮಯ : 10-30 ಗಂಟೆಗೆ ಸ್ಥಳ : ಫ್ರೀಡಂ ಪಾರ್ಕ್ (ಸ್ವತಂತ್ರ್ಯ ಉದ್ಯಾನವನ), ಬೆಂಗಳೂರು. ಹಾಗೂ ದಿನಾಂಕ 02-08-2022ರಂದು ರಾಮಲೀಲಾ ಮೈದಾನ, ದೆಹಲಿಯಲ್ಲಿ ಪ್ರತಿಭಟನೆ ನಡೆಯಲಿದೆ.
ರಾಜ್ಯಾದ್ಯಂತ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರು, ತಾ.ಅಧ್ಯಕ್ಷರು, ತಾ.ಕಾರ್ಯದರ್ಶಿಗಳು, ವಿ.ಎಸ್.ಎಸ್.ಎನ್. ಕಾರ್ಯದರ್ಶಿಗಳು, ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು, ಸೀಮೆಎಣ್ಣೆ ವಿತರಕರು, ಅಮಾಲಿ(ಕಾರ್ಮಿಕರು) ಮತ್ತು ಲಾರಿ ಮಾಲೀಕರು ಭಾಗವಹಿಸಿ ತಮ್ಮ ಈ ಕೆಳಕಂಡ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕೋರಿ ಸಮಾವೇಶವನ್ನು ಏರ್ಪಡಿಸಿರುವರು.
ಪ್ರಮುಖ ಅಂಶಗಳು:
1) ಭಾರತ ಸರ್ಕಾರದ ಹಣಕಾಸು ಸಚಿವಾಲಯವು ರಚಿಸಿರುವ ವಿಶ್ವ ಆಹಾರ ಕಾರ್ಯಕ್ರಮದ ವರದಿಯ ಆಧಾರದ ಮೇಲೆ ಭಾರತ ಸರ್ಕಾರವು ಪ್ರತಿ ಕ್ವಿಂಟಾಲ್‍ಗೆ 440/- ರೂ.ಗಳು ಮಂಜೂರು ಮಾಡುವ ಶಿಫಾರಸ್ಸನ್ನು ಮುಂದೂಡಿರುವ ಬಗ್ಗೆ.
2) ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯನ್ನು ನಡೆಸುತ್ತಿರುವ ದೇಶದ ಎಲ್ಲಾ ಮಾರಾಟಗಾರರಿಗೆ ವಿಶ್ವ ಆಹಾರ ಕಾರ್ಯಕ್ರಮವು ಶಿಫಾರಸ್ಸು, ಮಾಡಿದ ಪ್ರತಿ ಕ್ವಿಂಟಲ್‍ಗೆ ಆಹಾರ ಪದಾರ್ಥಗಳಿಗೆ 440/- ಕಮೀಷನ್ ಮೊತ್ತವನ್ನು ಕೇಂದ್ರ ಸರ್ಕಾರ ಅನುಮತಿಕೊಡಬೇಕು.
3) ಅಕ್ಕಿ, ಗೋಧಿ, ಸಕ್ಕರೆಯಂತಹ ಆಹಾರ ಪದಾರ್ಥಗಳಲ್ಲಿ ಕ್ವಿಂಟಾಲ್‍ಗೆ ಒಂದು ಕೆ.ಜಿ. ನಿರ್ವಹಣೆ ನಷ್ಟವನ್ನು ನೀಡುವ ಒಪ್ಪಂದದ ಆಧಾರದ ಮೇಲೆ ಇದನ್ನು ಎಲ್ಲಾ ರಾಜ್ಯಗಳಲ್ಲಿ ತಕ್ಷಣವೇ ಜಾರಿಗೊಳಿಸಬೇಕು.
4) ಎಲ್ಲಾ ರಾಜ್ಯಗಳ ಪಡಿತರ ಅಂಗಡಿಗಳಲ್ಲಿ ದೇಶದ ಹೆಚ್ಚಿನ ಜನಸಂಖ್ಯೆಗೆ ಆಹಾರದ ಜೊತೆಗೆ ತೈಲ, ಬೇಳೆ, ಸಕ್ಕರೆ ಹಾಗೂ ದಿನನಿತ್ಯಗೆ ಬೇಕಾದಂತಹ ಆಹಾರ ಪದಾರ್ಥವನ್ನು ಅನುಮತಿಕೊಡಬೇಕು.
5) ದೇಶದ ಎಲ್ಲಾ ಜಿಲ್ಲೆಗಳಲ್ಲಿ ಇರುವ ವಿತರಕರ ಮೂಲಕ ಗ್ರಾಹಕರಿಗೆ ವಿತರಿಸುವ ಎಲ್.ಪಿ.ಜಿ.ಗ್ಯಾಸ್, ಕೆಲವು ಗ್ರಾಹಕರನ್ನು ಪಡಿತರ ಅಂಗಡಿಗಳೊಂದಿಗೆ ಜೋಡಿಸಲು ಮತ್ತು ಎಲ್.ಪಿ.ಜಿ.ಸಿಲಿಂಡರ್‍ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಇದು ಪಡಿತರ ಅಂಗಡಿಗಳ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮತ್ತು ಸಾರ್ವಜನಿಕರು ಅದರ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಅವಕಾಶ ಮಾಡಿಕೊಡಬೇಕು.
6) ಆಹಾರ ಧಾನ್ಯಗಳನ್ನು ಹಿಂದಿನ ಪದ್ದತಿಯಂತೆ ಸೆಣಬಿನ ಚೀಲಗಳಲ್ಲಿ ಪೂರೈಸಲು ಆದೇಶ ನೀಡಬೇಕು, ಪಡಿತರ ಅಂಗಡಿಕಾರರಿಗೆ ಖಾಲಿ ಚೀಲಗಳಿಂದ ನಿರ್ದಿಷ್ಟ ಆದಾಯವಿದೆ ಎಂದು ತಿಳಿದು ಪ್ಲಾಸ್ಟಿಕ್ ಚೀಲಗಳ ಏರಿಕೆಯನ್ನು ಬಲವಾಗಿ ವಿರೋಧಿಸುತ್ತೇವೆ ಇತ್ಯಾದಿ. ಇತ್ಯಾದಿ.


0 Comments