Ticker

6/recent/ticker-posts

Ad Code

Responsive Advertisement

ಶ್ರೀಮೋಹನದಾಸರು

 "ಭಕ್ತಿಯಲ್ಲಿ ಭಾಗಣ್ಣ

  ಯುಕ್ತಿಯಲಿ ಮೋಹನ್ನ

  ಶಕ್ತಿಯಲಿ ತಿಮ್ಮಣ್ಣ"

ಶ್ರೀ ವಿಜಯದಾಸರ ಕಾರುಣ್ಯದಿಂದ  ತಾಯಿ ಮತ್ತುಗಂಡು ಮಗು  ಚಕ್ರತೀರ್ಥದಲ್ಲಿ ಪ್ರಾಣತ್ಯಾಗ ಮಾಡಲು ಬಂದವರನ್ನು ತಾಯಿ ಮಗುವನ್ನು ರಕ್ಷಣೆ ಮಾಡಿ ಉಳಿಸುತ್ತಾರೆ. ಆ ತಾಯಿಯನ್ನು ತಮ್ಮ ಸಹೋದರಿ ಯನ್ನಾಗಿ  ಮತ್ತು ಮಗುವನ್ನು ತಮ್ಮ ಸಾಕುಮ ಗನನ್ನಾಗಿ ಸ್ವೀಕರಿಸುತ್ತಾರೆ.

  ತಾಯಿ ಮಗುವನ್ನು ತಮ್ಮ ಹರಿನಿವಾಸಕ್ಕೆ ಕರೆತಂದು ತಮ್ಮ ಪತ್ನಿಗೆ ಆ ಮಗುವನ್ನು ಉಡಿಗೆ ಹಾಕಿ "ನೋಡು ನೀನು ಕಳೆದುಕೊಂಡ ಮಗ ಸಿಕ್ಕಿದ್ದಾನೆ.

  ಹರಿ ಚಿತ್ತ,ನಾವು ಈ ಮಗುವನ್ನು ಬೆಳೆಸೋಣ,ಕಲಿಸೋಣ ಎಂದು ಬಹಳ ಆನಂದದಿಂದ ಹೇಳುತ್ತಾರೆ.ಆ ತಾಯಿಯ ಕಣ್ಣಲ್ಲಿ ಆನಂದಭಾಷ್ಪ ಸುರಿಯಲಾರಂಭಿಸಿತು.

 ಕೆಲವು ದಿನಗಳ ಹಿಂದಷ್ಟೇ ತಮ್ಮ ಸ್ವಂತಮಗನನ್ನು ಕಳೆದುಕೊಂಡ ವಿಜಯರಾಯ ದಂಪತಿಗಳಿಗೆ ಮಗನೇ ಸಿಕ್ಕಷ್ಟು ಸಂತೋಷವಾಗುತ್ತದೆ.

 ಆ ಮಗುವಿಗೆ ಮೋಹನ ಎಂದು ನಾಮಕರಣ ಮಾಡುತ್ತಾರೆ.ಹೆಸರಿಗೆ ತಕ್ಕಂತೆ ಮೋಹನ,ಮೋಹನನಾಗಿ ಸುಂದರವಾಗಿ ಬೆಳೆಯುತ್ತಾನೆ. ಶ್ರೀವೇದವ್ಯಾಸರು, ಶ್ರೀಆನಂದತೀರ್ಥರು ರಚಿಸಿದ ಶಾಸ್ತ್ರವೆಂಬ ಶರಧಿಯಲ್ಲಿ ಈಜಾಡುವಂತೆ ಮಾಡಿದವರು ಶ್ರೀವಿಜಯರಾಯಗು ರುಗಳು. ಇವರ ಸ್ಪರ್ಷ ಮಾತ್ರದಿಂದಲೇ ಬಡಕಲು ಮೈಯ,ಅನಾರೋಗ್ಯದ ಕೂಸಾಗಿದ್ದ ಮೋಹನ ಸುಂದರವಾಗಿ ಬೆಳೆಯಿತು.

 ವಿಜಯದಾಸರು ತಮ್ಮ ಸಾಕುಮಗನಿಗೆ  ವಿದ್ಯೆ ಕಲಿಸಿ"ಮೋಹನ ವಿಠಲ"ಎಂಬ ಅಂಕಿತವನ್ನು ಕೊಟ್ಟು, ಮೋಹನದಾಸರೆಂದು ಹರಿದಾಸ ಪಂಥಕ್ಕೆ ಸೇರುತ್ತಾರೆ.

 ಈ ಅಂಕಿತದಿಂದ ಹಲವಾರುಕೀರ್ತನೆಗಳನ್ನು, ಸುಳಾದಿ ಉಗಾಭೋಗಗಳನ್ನು ರಚಿಸಿದ್ದಾರೆ. ದೀರ್ಘನುಡಿಯ ಒಂದು ಕೋಲುಹಾಡನ್ನೂ ರಚಿಸಿದ್ದಾರೆ.ಈ ಕೋಲು ಹಾಡು ಬಹಳ ಪ್ರಸಿದ್ಧಿ ಪಡೆದಿದೆ.

 ಮೋಹನದಾಸರಿಗೆ ಒಮ್ಮೆ ಅಪಮೃತ್ಯು ಬಂದು ಸಂದರ್ಭದಲ್ಲಿ ಭೃಗುಋಷಿಗಳ ಅಂಶಜರಾದ ವಿಜಯದಾಸರು ಯಮರಾಜನ ಹತ್ತಿರ ಹೋಗಿ ಮೋಹನದಾಸರಿಗೆ ಪ್ರಾಣದಾನ ಪಡೆದು ಬರುತ್ತಾರೆ.

 ಮೋಹನದಾಸರು ಮಾಂಡವ್ಯ ಋಷಿಗಳ ಅಂಶಜರೆಂದು ಹೇಳುತ್ತಾರೆ.

 ವಿಜಯರಾಯರಿಗೆ ತಮ್ಮ ಸಾಕು ಮಗನ ಮೇಲೆ ಬಹಳ ಅಪ್ರತಿಮ ವಾದ ಪ್ರೇಮ,ಯಾವಾಗಲೂ ಬಿಟ್ಟಿರುತ್ತಿರಲಿಲ್ಲ.

 ವಿಜಯದಾಸರು ತಮ್ಮ ಸಾಕು ಮಗನಾದ ಮೋಹನದಾಸರಿಗೆ ಸಂಪೂರ್ಣ ಅನುಗ್ರಹ ಮಾಡುತ್ತಾರೆ.

 ವಿಜಯದಾಸರ ಪ್ರೀತಿಯ ಸಾಕು ಮಗನಾಗಿ,ಶಿಷ್ಯನಾಗಿ ಅವರು ಪ್ರೀತಿಪಾತ್ರರಾದ ಮೋಹನದಾಸರು ಚಿಪ್ಪಗಿರಿಯಲ್ಲಿರುವ ವಿಜಯದಾಸರ ಕಟ್ಟೆಯ ಬಲಭಾಗದಲ್ಲಿ ವಿರಾಜ ಮಾನರಾಗಿದ್ದಾರೆ,ಹಾಗೂ ನಿರಂತರ ಹರಿವಾಯು ಗುರುಗಳ ಸ್ಮರಣೆ ಮಾಡುತ್ತಾ ವಿಜಯದಾಸರ ಚರಣಸೇವೆಯಲ್ಲಿ ನಿರತರಾಗಿದ್ದಾರೆ.

 ಮೋಹನದಾಸರು  ಜೇಷ್ಠ ಮಾಸದ ಶುಕ್ಲಪಕ್ಷದ ಷಷ್ಠಿ ಯಂದು ಶ್ರೀಹರಿಪಾದವನ್ನು ಸೇರಿದರು.

 ಶ್ರೀ ಮೋಹನದಾಸರ ಆರಾಧನೆಯ ದಿನವಾದ ಇಂದು ನಾವೂ ಅವರು ಸ್ಮರಣೆಮಾಡಿ,ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

 ****************************

ಲೇಖಕರು :

ಜಯಭೀಮ ಜೋಯಿಸ್, ಶಿವಮೊಗ್ಗ

**********

Post a Comment

0 Comments

Ad Code

Responsive Advertisement