Ticker

6/recent/ticker-posts

Ad Code

Responsive Advertisement

ರಾಷ್ಟ್ರೀಯ ಮಿಲಿಟರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅಪ್ರತಿಮ : ರಾಮನಾಥ್ ಕೋವಿಂದ್

ಬೆಂಗಳೂರು, ಜೂನ್ 13 (ಕರ್ನಾಟಕ ವಾರ್ತೆ): ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಕ್ರೀಡಾಪಟುಗಳು, ಆಡಳಿತ ಸೇವೆ ಅಧಿಕಾರಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಭಾರತದ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ತಿಳಿಸಿದರು.

ಅವರು ಇಂದು ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

1946 ರಲ್ಲಿ ಕಿಂಗ್ ಜಾರ್ಜ್ - ಗಿI ಈ ಶಾಲೆಯನ್ನು ಪ್ರಾರಂಭಿಸಿದರು. 2008 ರಲ್ಲಿ ಇದು ರಾಷ್ಟ್ರೀಯ ಮಿಲಿಟರಿ ಶಾಲೆಯಾಗಿ ನಾಮಕರಣಗೊಂಡಿತು. ಭಾರತದ ಮೊದಲ ಕಮಾಂಡರ್ ಇನ್ ಚೀಪ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ.ಎಂ ಅವರು ಈ ಶಾಲೆಯ ವಿದ್ಯಾರ್ಥಿ ಅಲ್ಲದೆ ಜನರಲ್ ತಿಮ್ಮಯ್ಯ ಸಹ ಈ ಮಣ್ಣಿನ ಮಗ ಎಂದು ಹೆಮ್ಮೆಯಿಂದ ನುಡಿದರು.

ಕರ್ನಾಟಕ ಶೈಕ್ಷಣಿಕ ಹಾಗೂ ತಂತ್ರಜ್ಞಾನಗಳಲ್ಲಿ  ಮುಂಚೂಣಿಯಲ್ಲಿದೆ. ನಾವೀನ್ಯತೆ ಸೂಚ್ಯಂಕದಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ. ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರು ವಿಶ್ವದಲ್ಲಿಯೇ 5 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸಿದೆ.

ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ 23 ರಾಜ್ಯದ ವಿದ್ಯಾರ್ಥಿಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಸಮಾನತೆ, ಏಕತೆ ಸಾರುವ ಇಲ್ಲಿಯ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಈ ಶಾಲೆಯಲ್ಲಿ ಕಲಿತವರು ಪರಮವೀರ ಚಕ್ರ, ವಿಶಿಷ್ಟ ಸೇವಾ ಪದಕ ಮುಂತಾದ ಮನ್ನಣೆ ಪಡೆದಿದ್ದಾರೆ. ಅವರಲ್ಲಿ ಇಲ್ಲಿ ಉಪ್ಥಿತರಿರುವ ಸಿ.ಎನ್. ಗೋರ್ಮಡೆ ಅವರಿಗೆ ಪರಮ ವಿಶಿಷ್ಟ ಸೇವಾ ಪದಕವನ್ನು ತಾವೇ ಪ್ರದಾನ ಮಾಡಿದ್ದಾಗಿ ಸ್ಮರಿಸಿದರು.

ಈ ಪ್ರಸ್ತುತ ವರ್ಷದಿಂದ ಬಾಲಕಿಯರಿಗೆ ಸಹ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ಸಂತೋಷವಾಗುತ್ತದೆ. ಕ್ಯಾ. ಅಭಿಲಾಷಾ ಬಾರಾಕ್ ಅವರು ಮೊದಲ ಮಹಿಳಾ ಅಧಿಕಾರಿಯಾಗಿ ಸೇನೆಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮಹಿಳಾ ಸಶಕ್ತೀಕರಣದ ರೂವಾರಿಯಾಗಿದ್ದಾರೆ.

 ಈ ವರ್ಷ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಶಾಲೆಗೆ ಸಹ 75 ವರ್ಷ ತುಂಬಿರುವುದು ಹೆಮ್ಮೆಯ ವಿಷಯ. ಈ ಶಾಲೆಯ ವಿದ್ಯಾರ್ಥಿಗಳು ಸೈಕ್ಲಿಂಗ್ ಮೂಲಕ 1800 ಕಿ.ಮೀ ಸಂಚರಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ವಿವಿಧ ರಾಜ್ಯಗಳ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ಜನರಿಗೆ ಹೇಳಿದ್ದಾರೆ ಎಂದರು.

ಈ ಶಾಲೆಯ ಧ್ಯೇಯ ವಾಕ್ಯ ‘ಶೀಲಂ ಪರಮ ಭೂಷಣಂ’ ಅಂದರೆ ಸರ್ವರಿಗೂ ತಮ್ಮ ನಡತೆಯೇ ಭೂಷಣ ತರುವಂಥದ್ದು, ಈ ಶಾಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಮುನ್ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ  ಸ್ಮರಣ ಸಂಚಿಕೆಯನ್ನು ರಾಷ್ಟ್ರಪತಿಗಳು ಬಿಡುಗಡೆಗೊಳಿಸಿದರು.  ವೇದಿಕೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್, ಭಾರತೀಯ ನೌಕಾಪಡೆಯ ಉಪಮುಖ್ಯಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಎನ್. ಗೋರ್ಮಡೆ ಉಪಸ್ಥಿರಿದ್ದರು.


Post a Comment

0 Comments

Ad Code

Responsive Advertisement