Ticker

6/recent/ticker-posts

Ad Code

Responsive Advertisement

ಬಿಎಂಟಿಸಿ ಬಸ್ಸುಗಳಲ್ಲಿ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅವಕಾಶ

ಬೆಂಗಳೂರು, ಜೂನ್ 13 (ಕರ್ನಾಟಕ ವಾರ್ತೆ): ಒಂದರಿಂದ ದ್ವಿತೀಯ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಿಎಂಟಿಸಿ ಸಾಮಾನ್ಯ ಸೇವೆ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಅವಕಾಶ ಕಲ್ಪಿಸಿದೆ.

ವಿದ್ಯಾರ್ಥಿಗಳು  2021-22ನೇ ಸಾಲಿನ ವಿದ್ಯಾರ್ಥಿ ಪಾಸು ಅಥವಾ 2022-23 ನೇ ಸಾಲಿನ ಶಾಲಾ / ಕಾಲೇಜಿನ ಶುಲ್ಕ ರಸೀದಿ/ ಗುರುತಿನ ಚೀಟಿಯೊಂದಿಗೆ ದಿನಾಂಕ : 30-06-2022 ರವರೆಗೆ ಪ್ರಯಾಣಿಸಬಹುದಾಗಿದೆ.

ಪದವಿ / ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ಸಂಜೆ ಕಾಲೇಜು, ವೃತ್ತಿಪರ ಹಾಗೂ ಪಿ.ಹೆಚ್.ಡಿ ಕಾಲೇಜು ವಿದ್ಯಾರ್ಥಿಗಳು 2021-22ನೇ ಸಾಲಿನ ವಿದ್ಯಾರ್ಥಿ ಪಾಸಿನೊಂದಿಗೆ ದಿನಾಂಕ:   31-08-2022 ರವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement