Ticker

6/recent/ticker-posts

Ad Code

Responsive Advertisement

ಬಳ್ಳಾರಿಯಲ್ಲಿ ಅತ್ಯಾಧುನಿಕ 'ಸಂಜೀವಿನಿ' ಡಯಾಗ್ನಸ್ಟಿಕ್ ಲ್ಯಾಬ್ ಸಚಿವ ಶ್ರೀರಾಮುಲು ಅವರಿಂದ ಉದ್ಘಾಟನೆ

ಬಳ್ಳಾರಿ ಜೂನ್ 13. ಪ್ರತಿಯೊಬ್ಬರು 30 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಆಗುವ ಬಹಳಷ್ಟು ಆರೋಗ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ.ಹೀಗಾಗಿ ಒಂದೇ ಸೂರಿನಡಿ ಬಳ್ಳಾರಿಯಲ್ಲಿ ಸಂಜೀವಿನಿ ಡಯಾಗ್ನಾಸ್ಟಿಕ್ ಆರಂಭವಾಗಿದೆ. ಇನ್ನೂ ಕಾಲಕಾಲಕ್ಕೆ ರಕ್ತ ತಪಾಸಣೆಯಿಂದ ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರೆ ಅರೋಗ್ಯ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಬಹುದು. ಅಲ್ಲದೆ, ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುವ ಸಮಯದಲ್ಲೇ ಅವುಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗದಂತೆ ಕಾಪಾಡಬಹುದಾದ ಡಯಾಗ್ನಾಸ್ಟಿಕ್ ಸೆಂಟರ್ ಅನ್ನು ಸಚಿವ ಶ್ರೀರಾಮುಲು ಅವರು ಲೋಕಾರ್ಪಣೆ ಮಾಡಿದರು. 

ಸಂಜೀವಿನಿ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಯಂತ್ರೋಪಕರಣಗಳಿದ್ದು, ನಿಖರವಾದ ಫಲಿತಾಂಶವನ್ನು ನೀಡುತ್ತವೆ. ಅಲ್ಲದೆ ನುರಿತ ವೈದ್ಯರು ಹಾಗೂ ತಜ್ಞರು ನಿಖರವಾದ ಫಲಿತಾಂಶ ನೀಡುತ್ತಾರೆ. ಸಂಜೀವಿನಿ ಡಯಾಗ್ನೋಸ್ಟಿಕ್ ಲ್ಯಾಬ್ ಅತ್ಯುತ್ತಮ ಸೇವೆಯನ್ನು ಒದಗಿಸುತ್ತದೆ. ಬಳ್ಳಾರಿಯ ಜನರು ಉತ್ತಮ ಸೇವೆಯನ್ನು ಪಡೆಯಲು ಅನುಕೂಲವಾಗುವಂತಹ ಪರಿಸರವನ್ನು ನಿರ್ಮಿಸಲಾಗಿದೆ. 

ಒಟ್ಟಾರೆಯಾಗಿ ಸಂಜೀವಿನಿ ಲ್ಯಾಬ್ ರಾಜ್ಯದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಮತ್ತು ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಹೊಂದಿರುವ ಲ್ಯಾಬ್‍ಗಳಲ್ಲಿ ಒಂದೆನಿಸಿದೆ. ಇಲ್ಲಿ ಇತ್ತೀಚಿನ ಡಯಾಗ್ನಾಸ್ಟಿಕ್ ಮೆಡಿಸಿನ್, ನಿಖರವಾದ ಡಯಾಗ್ನಾಸಿಸ್ ಮತ್ತು ಚಿಕಿತ್ಸೆಗೆ ಪೂರಕವಾದ ರಿಪೋರ್ಟ್‍ಗಳನ್ನು ನೀಡಲಾಗುತ್ತದೆ. ಈ ಮೂಲಕ ಸಾರ್ವಜನಿಕರು ಮತ್ತು ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಗಳಿಸಲಿದೆ ಎಂದು ಶ್ರವಣ್‍ರೆಡ್ಡಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿಯ ನುರಿತ ವೈದ್ಯರು,ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement