‘ಜಮೀಯತ್ ಉಲೇಮಾ-ಎ-ಹಿಂದ್’ ಹೇಳಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ! - ಶ್ರೀ. ಆನಂದ ಜಖೋಟಿಯಾ, ಹಿಂದೂ ಜನಜಾಗೃತಿ ಸಮಿತಿ
1919 ರಲ್ಲಿ ಸ್ಥಾಪನೆಯಾದ ‘ಜಮಿಯತ್ ಉಲೇಮಾ-ಎ-ಹಿಂದ್’ ಈ ಸಂಘಟನೆಯು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ನಿರ್ಮಾಣವನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಂತರ ಪಾಕಿಸ್ತಾನ ನಿರ್ಮಿತಿಯಾದ ನಂತರ ಇದೇ ‘ಜಮೀಯತ್ ಉಲೇಮಾ-ಎ-ಹಿಂದ್’ ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿಯೇ ಇದ್ದು ಇಂದು ಹಿಂದೂಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡುತ್ತಿದೆ. ಮುಸ್ಲಿಂ ಭಯೋತ್ಪಾದಕರಿಗೆ ನೆರವು ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್’ ಪ್ರತಿ ವರ್ಷ ಲಕ್ಷಾಂತರ ಯುವಕರ ಸೈನ್ಯವನ್ನು ನಿರ್ಮಿಸುತ್ತಿದೆ ಎಂಬ ವಾರ್ತೆಗಳು ಪತ್ರಿಕೆಗಳಲ್ಲಿ ಬರುತ್ತಿವೆ. ದೇಶದಲ್ಲಿ ಸಿಎಎಗೆ ಅಥವಾ ಕೆಲವು ರಾಜ್ಯಗಳಲ್ಲಿ ಆಗಬಹುದಾದ ಸಮಾನ ನಾಗರಿಕ ಕಾಯಿದೆಯನ್ನು ಒಪ್ಪದಿರುವ ಅವರ ಪ್ರಚೋದನಕಾರಿ ಹೇಳಿಕೆಗಳು ಬಹಳ ಗಂಭೀರವಾಗಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ‘ಜಮೀಯತ್ ಉಲೇಮಾ-ಎ-ಹಿಂದ್’ ಮತ್ತು ಇತರ ಸಂಘಟನೆಗಳ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಆನಂದ ಜಖೋಟಿಯಾ ಇವರು ಬೇಡಿಕೆಯನ್ನಿಟ್ಟಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದೇಶವನ್ನು ಛಿದ್ರಗೊಳಿಸಲು ಜಮೀಯತ್ ಉಲೇಮಾ-ಎ-ಹಿಂದ್ ಪ್ರಯತ್ನಿಸುತ್ತಿದೆಯೇ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ಈ ವೇಳೆ ‘ವಿಶ್ವ ಹಿಂದೂ ಪರಿಷತ್ತಿ’ನ ರಾಷ್ಟ್ರೀಯ ವಕ್ತಾರರಾದ ಶ್ರೀ. ವಿನೋದ ಬನ್ಸಾಲ್ ಅವರು ಮಾತನಾಡುತ್ತಾ ‘ಜಮೀಯತ್ ಉಲೇಮಾ-ಎ-ಹಿಂದ್’ ನಂತಹ ಸಂಘಟನೆಗಳು ಒಂದೆಡೆ ‘ಈ ದೇಶ ನಮ್ಮದು’ ಎಂದು ಇತರರಿಗೆ ತೋರಿಸಲು ಹೇಳುತ್ತವೆ; ಆದರೆ ಮತ್ತೊಂದೆಡೆ, ಈ ದೇಶದ ಕಾನೂನು ಮತ್ತು ಸಂವಿಧಾನವನ್ನು ಪರಿಗಣಿಸದೆ ಷರಿಯಾ ಕಾನೂನು, ತ್ರಿವಳಿ ತಲಾಕ, ಹಲಾಲಾ ಇತ್ಯಾದಿಗಳನ್ನು ಅವರಿಗೆ ಮುಂದುವರಿಸಬೇಕಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ವಿರೋಧಿಸುವ ಪಾತ್ರವನ್ನು ವಹಿಸಲಾಗುತ್ತಿದೆ. ದೇಶ ವಿಭಜನೆಯನ್ನು ಬೆಂಬಲಿಸುವವರು ಈಗ ಮತ್ತೆ ದೇಶ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದರೂ, ಇದು 1947 ರ ವರ್ಷವಲ್ಲ, ರಾಷ್ಟ್ರೀಯವಾದಿ ಸಿದ್ಧಾಂತದ ಬಲಿಷ್ಠ ಭಾರತ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಮೊದಲಿನಂತೆ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
ಈ ವೇಳೆ ಛತ್ತೀಸ್‌ಗಢದ ಸಿಂಧಿ ಸಮುದಾಯದ ಅಧ್ಯಕ್ಷ ಶ್ರೀ. ಅಮಿತ ಚಿಮನಾನಿ ಇವರು ಮಾತನಾಡುತ್ತಾ, ‘ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ’ ಎಂದು ಅಪಪ್ರಚಾರ ಮಾಡಲಾಗುತ್ತಿದೆ; ಆದರೆ ಇದೇ ದೇಶದಲ್ಲಿ ಶಾಹೀನ್‌ಬಾಗ್‌ನಂತಹ ಸ್ಥಳಗಳಲ್ಲಿ ಆಂದೋಲನ ಮಾಡುವ ಮೂಲಕ ರಸ್ತೆಗಳನ್ನು ತಡೆಗಟ್ಟುತ್ತಾರೆ. ರಾಮಮಂದಿರ ವಿಚಾರದಲ್ಲಿ ಹಿಂದೂಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಿ ತೀರ್ಪು ಹಿಂದೂಗಳ ಪರವಾಗಿ ನೀಡಿದರೂ, ನಾವು ಬಾಬರಿ ಕೊಟ್ಟರೂ ಈಗ ‘ಜ್ಞಾನವಾಪಿ’ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ದೇಶದಲ್ಲಿ ಸಂವಿಧಾನ ಮತ್ತು ಕಾನೂನುಗಳನ್ನು ಒಪ್ಪುವುದಿಲ್ಲ ಮತ್ತು ಇನ್ನೊಂದೆಡೆ ನಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಕೂಗಾಡುತ್ತಿದ್ದಾರೆ. ಇದನ್ನು ಎಲ್ಲೆಡೆ ನಿಷೇಧಿಸಬೇಕು ಎಂದು ಹೇಳಿದರು.

0 Comments