ದಿನಾಂಕ 26-05-2022 ರಂದು ಬೆಳಗಿನ ಜಾವ 04-00 ಗಂಟೆಗೆ ಪಿರ್ಯಾದುದಾರರಾದ ಮಣಪ್ಪುರಂ ಪೈನಾನ್ಸ್ ಬ್ರಾಂಚ್ ಮಾನ್ಯೇಜರ್ ರವರು ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ, ದಿನಾಂಕ 25-05-2022 ರಂದು ಎಂದಿನಂತೆ ರಾತ್ರಿ 08-00 ಗಂಟೆಗೆ ಕೆಲಸ ಮುಗಿಸಿಕೊಂಡು ಮಣಪ್ಪುರಂ ಪೈನಾನ್ಸ್ ಕಚೇರಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ 26-05-2022 ರಂದು ಬೆಳಗಿನ ಜಾವ 02-20 ಗಂಟೆ ಸಮಯದಲ್ಲಿ ತ ಮ್ಮ ಕಂಪನಿಯ ನಿಯಂತ್ರಣ ಕೋಣೆಯಿಂದ ತಮ್ಮ ಮೊಬೈಲ್ ಫೋನ್‍ಗೆ ಕರೆ ಮಾಡಿ ಬ್ರಾಂಚ್‍ನಲ್ಲಿ ಇರುವ ಸಿಸಿಟಿವಿ ಕ್ಯಾಮರಾ ಆಫ್ ಆಗಿದ್ದು, ಕೂಡಲೇ ಪರೀಶೀಲಿಸಿ ಎಂದು ತಿಳಿಸಿದ ಮೇರೆಗೆ ಕೂಡಲೇ ಬ್ಯಾಂಚ್ ಬಳಿ ಬಂದು ನೋಡಲಾಗಿ ಯಾರೋ ಕಳ್ಳರು ತಮ್ಮ ಬ್ರಾಂಚ್ ಮುಖ್ಯದ್ವಾರದ ಗೇಟ್‍ಗೆ ಹಾಕಿದ್ದ ಬೀಗವನ್ನು ಹೊಡೆದು ಹಾಕಿ ರೋಲಿಂಗ್ ಶಟರ್ ಅನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಳ ಪ್ರವೇಶಿಸಿ ಸೇಫ್ ಲಾಕರ್ ಇರುವ ರೂಂಗೆ ಹಾಕಿದ್ದ ಬೀಗವನ್ನು ಸಹ ಗ್ಯಾಸ್ ಕಟರ್‍ನಿಂದ ಕತ್ತರಿಸಿ ಕಳ್ಳತನ ಮಾಡಲು ಪ್ರಯತ್ನಿಸಿದ್ದು, ಬ್ಯಾಂಚ್‍ನಲ್ಲಿ ಅಳವಡಿಸಿದ್ದ ಸೈರನ್ ಹೊಡೆದುಕೊಂಡಿದ್ದರಿಂದ ಕಳ್ಳತನ ಮಾಡಲು ಬಂದಿದ್ದವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಆದ್ದರಿಂದ ತÀಮ್ಮ ಶಾಖೆಯ ಬಾಗಿಲನ್ನು ಗ್ಯಾಸ್ ಕಟರ್‍ನಿಂದ ಕತ್ತರಿಸಿ ಕಳ್ಳತನ ಮಾಡಲು ಪ್ರಯತ್ನಿಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನಾ ಕಳವು ಪ್ರಯತ್ನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶ್ರೀ ಜಗದೀಶ್ ಬಿ.ಆರ್., ಪೊಲೀಸ್ ಇನ್ಸ್‍ಪೆಕ್ಟರ್ ರಾಜಗೋಪಾಲನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ಪ್ರಕರಣದ ತನಖೆ ಕೈಗೊಂಡು ಈ ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 10.2 ಕೆ.ಜಿ ಆಕ್ಸಿಜನ್ ಗ್ಯಾಸ್ ಸಿಲಿಂಡರ್-1 (ಆಕ್ಸಿಜನ್ ಗನ್ ಸಮೇತ), 6.6 ಕೆ.ಜಿ ಎಲ್‍ಪಿಜಿ ಗ್ಯಾಸ್ ಸಿಲಿಂಡರ್-1, ಕಟ್ ಅಗಿರುವ 2 ಬೀಗಗಳು, 1-ದ್ವಿಚಕ್ರವಾಹನ, 1-ಬಜಾಜ್ ಪ್ಯಾಸೆಂಜರ್ ಆಟೋರಿಕ್ಷಾ, 1-ಕಬ್ಬಿಣದ ರಾಡ್, 2-ನೈಟಿ, 2-ವೇಲು, 2-ಹ್ಯಾಂಡ್‍ಗ್ಲೌಸ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಎ1) ಆರೋಪಿಯು ಮೂಲತಃ ರಾಮನಗರ ಜಿಲ್ಲೆಯವನಾಗಿದ್ದು, ಹಾಲಿ ರಾಜಗೋಪಾಲನಗರದಲ್ಲಿ ವಾಸವಾಗಿರುತ್ತಾನೆ. ಖಾಸಗಿ ಬಸ್ ಚಾಲಕ ಕೆಲಸ ಮಾಡಿಕೊಂಡಿದ್ದನು. ಈತನು ಮಾಡಿದ ಸಾಲವನ್ನು ತೀರಿಸಲು ಹಣಕ್ಕಾಗಿ ಈ ಕೃತ್ಯವೆಸಗಿರುವುದಾಗಿ ತಿಳಿದು ಬಂದಿರುತ್ತದೆ. ಎ2) ಆರೋಪಿಯು ಮೂಲತಃ ನೇಪಾಳ ರಾಷ್ಟ್ರದವನಾಗಿದ್ದು, ಈಗ್ಗೆ ಸುಮಾರು 04 ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಆಗಮಿಸಿದ್ದು, 03 ವರ್ಷಗಳಿಂದ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಈತನು ಮೋಜಿನ ಜೀವನದ ಖರ್ಚಿಗಾಗಿ ಎ1) ಆರೋಪಿಯು ಜೊತೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಕಂಡು ಬಂದಿರುತ್ತದೆ. ಎ3) ಆರೋಪಿಯು ತುಮಕೂರು ಜಿಲ್ಲೆಯವನಾಗಿದ್ದು, ಸುಂಕದಕಟ್ಟೆಯಲ್ಲಿ ವಾಸವಾಗಿದ್ದುಕೊಂಡು ಪ್ಯಾಸೆಂಜರ್ ಆಟೋರಿಕ್ಷಾ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಈತನು ಸಣ್ಣಪುಟ್ಟ ಸಾಲಗಳನ್ನು ಮಾಡಿಕೊಂಡಿದ್ದು ಸಾಲ ತೀರಿಸಲು ಸಾಧ್ಯವಾಗದೇ ಸುಲಭವಾಗಿ ಹಣ ಗಳಿಸಿ ಸಾಲ ತೀರಿಸಬಹುದೆಂದು ಈ ಕೃತ್ಯವೆಸಗಿರುವುದಾಗಿ ಹಾಗೂ ಈ 3 ಜನ ಆರೋಪಿಗಳು ಏಪ್ರಿಲ್ ತಿಂಗಳಲ್ಲಿ ರಾಜಗೋಪಾಲನಗರ ಸರಹದ್ದಿನಲ್ಲಿ ಎಟಿಎಂ ಮೆಷಿನ್ ಹೊಡೆದು ಹಣ ಕಳವು ಮಾಡಲು ಪ್ರಯತ್ನಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿಯ ಬಂಧನದಿಂದ ರಾಜಗೋಪಾಲನಗರ ಪೊಲೀಸ್ ಠಾಣೆಯ 2-ರಾತ್ರಿ ಕನ್ನಾ ಕಳವು ಪ್ರಯತ್ನ ಪ್ರಕರಣ ಪತ್ತೆಯಾಗಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಶ್ರೀ ಬಿ.ಆರ್. ಜಗದೀಶ್, ಪೊಲೀಸ್ ಇನ್ಸ್‍ಪೆಕ್ಟರ್, ರಾಜಗೋಪಾಲನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಶ್ರೀ ಹನಮಂತ ಹಾದಿಮನಿ, ಆದರ್ಶಗೌಡ, ಬಸವಲಿಂಗಪ್ಪ ಮತ್ತು ಸಿಬ್ಬಂದಿಯವರಾದ ಶ್ರೀ ಪರಮೇಶ್ ಹೆಚ್‍ಸಿ-8155, ಶ್ರೀ ಸಿದ್ರಾಮ್, ಹೆಚ್‍ಸಿ-9987, ಶ್ರೀ ಹನುಮೇಶ್ ಹೆಚ್‍ಸಿ 8895, ಶ್ರೀ ವೀರಭದ್ರ, ಪಿ.ಸಿ.14187, ಶ್ರೀ ಶಿವಸ್ವಾಮಿ ಪಿಸಿ-15587, ಶ್ರೀ ಶ್ರೀಕಾಂತ್ ಕುರಿ, ಪಿ.ಸಿ-17615, ಶ್ರೀ ಕಿರಣ್‍ಗೌಡ, ಪಿ.ಸಿ-17619 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments