ಹಿಂದೂ ರಾಷ್ಟ್ರದ ಬೇಡಿಕೆಯು ಸಂವಿಧಾನಾತ್ಮಕ ಅಧಿಕಾರ !
ಕೆಲವು ವರ್ಷಗಳ ಹಿಂದಿನವರೆಗೆ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ತಿರಸ್ಕಾರದ ದೃಷ್ಟಿಯಿಂದ ನೋಡಲಾಗುತಿತ್ತು; ಆದರೆ ಇಂದು ಭಾರತದಲ್ಲಿ ಮಾತ್ರವಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ‘ಹಿಂದೂ ರಾಷ್ಟ್ರ’ದ ಘೋಷಣೆ ಆರಂಭವಾಗಿದೆ. ಹಿಂದೂ ರಾಷ್ಟ್ರದ ಕರೆಯನ್ನು ಜನಸಾಮಾನ್ಯರ ವರೆಗೆ ತಲುಪಿಸುವುದರಲ್ಲಿ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಪಾಲು ಅಮೂಲ್ಯವಾಗಿದೆ. ಈ ಅಧಿವೇಶನದ ಮಾಧ್ಯಮದಿಂದಲೆ ೨೦೧೨ ರಲ್ಲಿ ಭಾರತದ ಹಿಂದುತ್ವನಿಷ್ಠ ಸಂಘಟನೆಗಳನ್ನು ಸಂಘಟಿಸಿ ‘ಹಿಂದೂ ರಾಷ್ಟ್ರ’ದ ಘೋಷಣೆ ಮಾಡಲಾಗಿತ್ತು. ದಶಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವೆಂದರೆ ಒಂದು ರೀತಿಯಲ್ಲಿ ಹಿಂದೂ ರಾಷ್ಟ್ರದ ವಿಜಯದಶಮಿಯೆ ಆಗಿದೆ. ಹಿಂದೂಗಳ ದಮನದ ವನವಾಸವು ಮುಗಿದು ಮುಂಬರುವ ೩ ವರ್ಷಗಳಲ್ಲಿ ರಾಮರಾಜ್ಯರೂಪಿ ಹಿಂದೂ ರಾಷ್ಟ್ರದ ಮುಂಜಾವು ಉದಯವಾಗುವುದು.
೧೨ ರಿಂದ ೧೮ ಜೂನ್ ೨೦೨೨ ಈ ಅವಧಿಯಲ್ಲಿ ಗೋವಾದ ಫೋಂಡಾದಲ್ಲಿನ ರಾಮನಾಥಿಯ ರಾಮನಾಥ ದೇವಸ್ಥಾನದಲ್ಲಿ ನೆರವೇರಿದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅದರ ಅನುಭವವಾಯಿತು. ಅಮೇರಿಕಾ, ಹಾಂಗಕಾಂಗ್, ನೇಪಾಳ, ಫಿಜಿ ಮತ್ತು ಇಂಗ್ಲೆಂಡ್ ಸಹಿತ ಭಾರತದ ೨೬ ರಾಜ್ಯಗಳಲ್ಲಿನ ೧೭೭ ಕ್ಕಿಂತಲೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಮೇರಿಕಾ, ನೆದರಲ್ಯಾಂಡ್, ಸ್ಕಾಟ್.ಲ್ಯಾಂಡ್, ಮಾರಿಶಸ್, ಆಸ್ಟ್ರೇಲಿಯಾ ಇತ್ಯಾದಿ ದೇಶಗಳಲ್ಲಿನ ಧರ್ಮಪ್ರೇಮಿ ಹಿಂದೂಗಳು ‘ಹಿಂದೂ ರಾಷ್ಟ್ರ ಅಧಿವೇಶನಕ್ಕೆ ನಮ್ಮ ಬೆಂಬಲವಿದೆ’, ಎನ್ನುವ ಆಶಯದ ಫಲಕಗಳನ್ನು ಕೈಯಲ್ಲಿ ಹಿಡಿದು ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಬೆಂಬಲ ನೀಡಿದ್ದಾರೆ. ಸಮಿತಿಯ ‘ಯೂ-ಟ್ಯೂಬ್’ ಚಾನಲ್ HinduJagruti ಹಾಗೂ ಸಮಿತಿಯ www.hindujagruti.org ಈ ಜಾಲತಾಣದಲ್ಲಿ ಅಧಿವೇಶನವನ್ನು ನೇರಪ್ರಸಾರ ಮಾಡಲಾಯಿತು. ೩ ಲಕ್ಷದ ೯೧ ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳ ವರೆಗೆ ‘ಆನ್‌ಲೈನ್’ ಮೂಲಕ ಈ ಅಧಿವೇಶನವು ತಲುಪಿತು.
ವಿಶೇಷ ಪರಿಸಂವಾದದಿಂದ ವಿವಿಧ ಸಮಸ್ಯೆಗಳ ಬಗ್ಗೆ ವಿಚಾರಮಂಥನ ಹಾಗೂ ಉಪಾಯ !
ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ವಿಷಯದಲ್ಲಿ ಕೇಳಿಬರುವ ಆಕ್ಷೇಪಗಳನ್ನು ವೈಯಕ್ತಿಕ ಸ್ತರಗಳಲ್ಲಿ ಖಂಡಿಸಲಾಯಿತು. ‘ಹಿಂದೂ ರಾಷ್ಟ್ರದ ಬೇಡಿಕೆಯು ಹಿಂದೂಗಳ ನೈಸರ್ಗಿಕ ಹಾಗೂ ಸಂವಿಧಾನಾತ್ಮಕ ಅಧಿಕಾರವಾಗಿದೆ. ೨೦೨೫ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಎಲ್ಲರೂ ಸಂಘಟಿತರಾಗಬೇಕು’, ಎಂಬ ಬೀಜಸ್ವರೂಪಿ ಕರೆ ನೀಡಲಾಯಿತು. ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂಹಿತವನ್ನು ಸಾಧಿಸಲ್ಪಡುವುದಿಲ್ಲ. ತದ್ವಿರುದ್ಧ ಹಿಂದೂಗಳ ದಮನ ಹಾಗೂ ಅಲ್ಪಸಂಖ್ಯಾತರ ಓಲೈಕೆ ಮಾಡಲಾಗುತ್ತದೆ. ಜಿಹಾದಿ, ಸಾಮ್ಯವಾದಿ, ಸೆಕ್ಯುಲರ್‌ವಾದಿ, ನಾಸ್ತಿಕವಾದಿ ಹಾಗೂ ಮಿಶನರಿಗಳ ಹಿಂದೂವಿರೋಧಿ ಮೈತ್ರಿಕೂಟದ ಮೂಲಕ ಸನಾತನ ಹಿಂದೂ ಧರ್ಮವನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೂವಿರೋಧಿಗಳನ್ನು ಸೋಲಿಸಿ ಹಿಂದೂ ರಾಷ್ಟ್ರದ ಧ್ವನಿಯನ್ನು ಆಕಾಶಕ್ಕೇರಿಸುವ ನಿರ್ಧಾರವನ್ನು ಅಧಿವೇಶನದಲ್ಲಿ ಮಾಡಲಾಯಿತು.
ದ್ವಂಸಗೊಳಿಸಿರುವ ದೇವಸ್ಥಾನಗಳ ಪುನರ್ನಿರ್ಮಾಣ : ಅದರ ಜೊತೆಗೆ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ ಭಕ್ತರ ವಶಕ್ಕೆ ಒಪ್ಪಿಸಲು ಹಮ್ಮಿಕೊಂಡಿರುವ ದೇಶವ್ಯಾಪಿ ಆಂದೋಲನಗಳ ವೇಗವನ್ನು ಹೆಚ್ಚಿಸಲು ಈ ಅಧಿವೇಶನದಲ್ಲಿ ನಿರ್ಣಯಿಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವಾಗುತ್ತಿರುವಾಗ ಕಾಶಿ ವಿಶ್ವನಾಥ ಮಂದಿರ, ಮಥುರೆಯ ಶ್ರೀಕೃಷ್ಣಜನ್ಮಭೂಮಿಯಲ್ಲಿ ಭವ್ಯವಾದ ಶ್ರೀಕೃಷ್ಣ ಮಂದಿರ ನಿರ್ಮಾಣದ ಬೇಡಿಕೆಯೂ ದೇಶದಾದ್ಯಂತ ಆರಂಭವಾಗಿದೆ. ದೇಶದಲ್ಲಿನ ಅನೇಕ ಮಂದಿರಗಳು ಇಂದು ಇಸ್ಲಾಮೀ ಅತಿಕ್ರಮಣದಿಂದಾಗಿ ಹತ್ತಿಕ್ಕಲಾಗಿದೆ. ಧ್ವಂಸವಾಗಿರುವ ಮಂದಿರಗಳ ಪುನರ್ನಿರ್ಮಾಣಕ್ಕಾಗಿ ಜನಾಭಿಪ್ರಾಯವನ್ನು ಸಿದ್ಧಪಡಿಸುವುದರೊಂದಿಗೆ ಕಾನೂನುಪ್ರಕಾರ ಹೋರಾಟ ಮಾಡುವುದನ್ನೂ ಅಧಿವೇಶನದಲ್ಲಿ ನಿರ್ಧರಿಸಲಾಯಿತು. ಕಾಶಿ ವಿಶ್ವನಾಥ ಮಂದಿರದ ಮುಕ್ತಿಗಾಗಿ ನ್ಯಾಯಾಂಗ ಹೋರಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ನ್ಯಾಯವಾದಿ ಹರಿ ಶಂಕರ ಜೈನ್ ಇವರು ಕೂಡ ಈ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ‘ಇನ್ನು ಕಾಶಿ ವಿಶ್ವನಾಥ ಮಂದಿರದಲ್ಲಿ ಹಿಂದೂಗಳು ಒಟ್ಟಾಗಿ ಶ್ರೀ ವಿಶ್ವನಾಥನ ಪೂಜೆ ಮಾಡುವರು’, ಎಂಬುದರಲ್ಲಿ ಸಂಶಯವಿಲ್ಲ, ಎಂಬ ದೃಢವಿಶ್ವಾಸವನ್ನು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ವ್ಯಕ್ತಪಡಿಸಿದರು.
ಕಾಶ್ಮೀರಿ ಹಿಂದೂಗಳ ಪುನರ್ವಸತಿ : ಜಿಹಾದಿ ಉಗ್ರವಾದದಿಂದ ಭಾರತದಲ್ಲಿ ನಿರಾಶ್ರಿತರಾಗಿ ೩೨ ವರ್ಷಗಳಾದರೂ ಇಂದು ಕೂಡ ಕಾಶ್ಮೀರಿ ಹಿಂದೂಗಳ ನರಮೇಧ ಮುಂದುವರಿದಿದೆ. ಅಂತೂ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವುದು ಯಾವಾಗ ? ಎನ್ನುವ ಪ್ರಶ್ನೆಯನ್ನು ಕಾಶ್ಮೀರಿ ಹಿಂದೂಗಳ ವತಿಯಿಂದ ಅಧಿವೇಶನದಲ್ಲಿ ಮುಂದಿಡಲಾಗಿತ್ತು. ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರದಲ್ಲಿ ಗೌರವದಿಂದ ‘ಪನೂನ್ ಕಾಶ್ಮೀರ’ ಎಂಬ ಸ್ವತಂತ್ರ ಪ್ರಾಂತದಲ್ಲಿ ಪುನರ್ವಸತಿ ಕಲ್ಪಿಸಬೇಕು, ಎನ್ನುವ ಬೇಡಿಕೆಗೆ ಅಧಿವೇಶನದಲ್ಲಿ ಭಾಗವಹಿಸಿದ ಹಿಂದುತ್ವನಿಷ್ಠರು ಪೂರ್ಣ ಬೆಂಬಲ ನೀಡಿದರು.
ಮತಾಂತರ ನಿಷೇಧ : ಮತಾಂತರದ ಭೀಕರ ಸಮಸ್ಯೆಯ ವಿಷಯದಲ್ಲಿಯೂ ಅಧಿವೇಶನದಲ್ಲಿ ವಿಚಾರವಿಮರ್ಷೆ ಮಾಡಲಾಯಿತು. ಮತಾಂತರದ ಸಮಸ್ಯೆಯು ದೇಶದಾದ್ಯಂತ ಇರುವುದರಿಂದ ಸಂವಿಧಾನದ ಪರಚ್ಛೇದ ೨೫ ರಲ್ಲಿ ತಿದ್ದುಪಡಿ ಮಾಡಿ ಅದರಲ್ಲಿನ ಧರ್ಮದ ‘ಪ್ರಚಾರ ಮಾಡುವುದು’ (Propagate) ಈ ಪದವನ್ನು ತೆಗೆಯಬೇಕೆಂಬ ಬೇಡಿಕೆಯನ್ನು ಅಧಿವೇಶನದಲ್ಲಿ ಮಾಡಲಾಯಿತು. ಈ ಪದವನ್ನು ತೆಗೆದ ನಂತರ ಮತಾಂತರವನ್ನು ತಡೆಗಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಕಾನೂನನ್ನು ಮಾಡಬೇಕು, ಎಂಬ ಪ್ರಸ್ತಾಪವನ್ನು ಸಂಮತಿಸಲಾಯಿತು. ಮತಾಂಧರು ಮಾಡುವ ಗಲಭೆ, ಆಕ್ರಮಣಗಳಲ್ಲಿ ದೇಶದಾದ್ಯಂತ ಹಿಂದೂಗಳನ್ನು ಗುರಿಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಉಪಸ್ಥಿತರಿದ್ದ ಹಿಂದುತ್ವನಿಷ್ಠರಿಗೆ ಆತ್ಮರಕ್ಷಣೆಗಾಗಿ ಸಿದ್ಧರಾಗಿರಲು ಕರೆ ನೀಡಲಾಯಿತು.
ಹಿಂದೂ ರಾಷ್ಟ್ರ ಸಂಸತ್ತು : ‘ಹಿಂದೂ ರಾಷ್ಟ್ರ ಸಂಸತ್ತು’ ಇದು ಈ ಅಧಿವೇಶನದ ವೈಶಿಷ್ಟ್ಯವೆನಿಸಿತು. ಹೇಗೆ ಜನಪ್ರತಿನಿಧಿಗಳ ಸಂಸತ್ತು ಇದೆಯೊ, ಹಾಗೆಯೆ ಧರ್ಮಹಿತದ ವಿಷಯದಲ್ಲಿ ಚರ್ಚೆ ಮಾಡಲು ಅಧಿವೇಶನದಲ್ಲಿ ೩ ದಿನ ಧರ್ಮಪ್ರತಿನಿಧಿಗಳ ಪ್ರತೀಕಾತ್ಮಕ ‘ಹಿಂದೂ ರಾಷ್ಟ್ರ ಸಂಸತ್ತು’ ನಡೆಯಿತು. ‘ಮಂದಿರಗಳ ಸುವ್ಯವಸ್ಥಾಪನೆ’, ‘ಹಿಂದೂ ಶಿಕ್ಷಣಪದ್ಧತಿ’ ಹಾಗೂ ‘ಹಿಂದೂ ರಾಷ್ಟ್ರದ ಸ್ಥಾಪನೆಯ ಸಂವಿಧಾನಾತ್ಮಕ ಮಾರ್ಗ’ ಈ ವಿಷಯದಲ್ಲಿ ಈ ಸ್ವತಂತ್ರ ಸಂಸತ್ತನ್ನು ಆಯೋಜಿಸಲಾಗಿತ್ತು. ತುರ್ತುಪರಿಸ್ಥಿಯಲ್ಲಿ ೪೨ ನೇ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ತುರುಕಿಸಿದ ‘ಸೆಕ್ಯುಲರ್’ ಮತ್ತು ‘ಸೋಶಲಿಸ್ಟ್’ ಈ ಪದಗಳನ್ನು ತೆಗೆಯಬೇಕು ಕಾನೂನಿನ ಮಂಡನೆಯು ಭಾರತೀಯ ಸಂಸ್ಕೃತಿಗನುಸಾರ ಆಗಬೇಕು, ಭಾರತದ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಧರ್ಮಾಧಾರಿತ ಗುರುಕುಲ ಶಿಕ್ಷಣವನ್ನು ನೀಡಬೇಕು, ಹಿಂದೂಗಳ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರಿಗೆ ಒಪ್ಪಿಸಬೇಕು ಇತ್ಯಾದಿ ಪ್ರಸ್ತಾಪಗಳನ್ನು ಈ ಸಂಸತ್ತಿನಲ್ಲಿ ‘ಜಯತು ಜಯತು ಹಿಂದೂರಾಷ್ಟ್ರಮ್’ ಈ ಜಯಘೋಷಗಳೊಂದಿಗೆ ಸಮ್ಮತಿಸಲಾಯಿತು.
ಹಲಾಲ್ ಜಿಹಾದ್ ಗ್ರಂಥದ ಪ್ರಕಾಶನ : ಅಧಿವೇಶನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಬರೆದ ‘ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಹೊಸ ಆಕ್ರಮಣ, ಹಲಾಲ ಜಿಹಾದ್ ?’ ಈ ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿನ ಪುಸ್ತಕಗಳನ್ನು ಪ್ರಕಾಶನಗೊಳಿಸಲಾಯಿತು. ‘ಹಲಾಲ್ ಅರ್ಥವ್ಯವಸ್ಥೆ’ಯನ್ನು ವಿರೋಧಿಸಲು ಆಂದೋಲನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ದಶಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಸಂಮತಿಸಲಾದ ಠರಾವುಗಳು : ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು, ಹಿಂದೂಗಳ ಮೂಲಭೂತ ಅಧಿಕಾರಗಳನ್ನು ಹನನಗೊಳಿಸುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧’ ಈ ಕಾನೂನನ್ನು ತಕ್ಷಣ ರದ್ದುಪಡಿಸಿ ಕಾಶಿ, ಮಥುರಾ, ತಾಜಮಹಾಲ್, ಭೋಜಶಾಲೆ ಇತ್ಯಾದಿ ಮೊಗಲ ಆಕ್ರಮಕರು ಕಬಳಿಸಿದ ಸಾವಿರಾರು ದೇವಸ್ಥಾನಗಳನ್ನು ಮತ್ತು ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು, ಗೋವಾದಲ್ಲಿ ‘ಇನ್ಕ್ವಿಝಿಶನ್’ನ ಹೆಸರಿನಲ್ಲಿ ೨೫೦ ವರ್ಷ ಗೋಮಂತಕೀಯರ ಮೇಲೆ ಮಾಡಿದ ಅಮಾನವೀಯ ಹಾಗೂ ಕ್ರೂರ ಅತ್ಯಾಚಾರಗಳ ವಿಷಯದಲ್ಲಿ ಕ್ರೈಸ್ತರ ಧರ್ಮಗುರು ಪೋಪ್ ಇವರು ಗೋವಾದ ನಾಗರಿಕರಲ್ಲಿ ಬಹಿರಂಗ ಕ್ಷಮಾಯಾಚನೆ ಮಾಡಬೇಕು, ಭಾರತದಲ್ಲಿ ‘ಎಫ್.ಎಸ್.ಎಸ್.ಎ.ಐ..’ (FSSAI) ಮತ್ತು ‘ಎಫ್.ಡಿ.ಎ.’ (FDA) ಇಂತಹ ಸರಕಾರಿ ಸಂಸ್ಥೆಗಳಿರುವಾಗ ಧಾರ್ಮಿಕ ಆಧಾರದಲ್ಲಿ ‘ಸಮಾಂತರ ಅರ್ಥವ್ಯವಸ್ಥೆ’ಯನ್ನು ನಿರ್ಮಿಸುವ ‘ಹಲಾಲ್ ಸರ್ಟಿಫಿಕೇಶನ್’ನ ಮೇಲೆ ತಕ್ಷಣ ನಿರ್ಬಂಧ ಹೇರಬೇಕು, ರಾಷ್ಟ್ರೀಯ ಸ್ತರದಲ್ಲಿ ಗೋಹತ್ಯಾನಿಷೇಧ ಕಾನೂನು ತರಬೇಕು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿನ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ಅಂತರರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಮತ್ತು ಭಾರತ ಸರಕಾರಗಳ ಮೂಲಕ ವಿಚಾರಣೆ ಮಾಡಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆಯನ್ನು ನೀಡಬೇಕು. ಪೌರತ್ವ ಸುಧಾರಣಾ ಕಾನೂನನ್ನು ಅನುಷ್ಠಾನಗೊಳಿಸಬೇಕು ಇತ್ಯಾದಿ ಪ್ರಸ್ತಾಪಗಳನ್ನು ಈ ಅಧಿವೇಶನದಲ್ಲಿ ಸಂಮತಿಸಲಾಯಿತು.
ಹಿಂದೂ ರಾಷ್ಟ್ರಕ್ಕಾಗಿ ವರ್ಷವಿಡೀ ಕೃತಿ ಕಾರ್ಯಕ್ರಮ : ರಾಷ್ಟ್ರ ಹಾಗೂ ಧರ್ಮ ರಕ್ಷಣೆಯ ವಿಷಯದ ಕೃತಿಕಾರ್ಯಕ್ರಮವನ್ನು ನಿರ್ಧರಿಸಲು ಗುಂಪುಚರ್ಚೆಯನ್ನು ಈ ಅಧಿವೇಶನದಲ್ಲಿ ಹಮ್ಮಿಕೊಳ್ಳಲಾಯಿತು. ಇದರಲ್ಲಿ ನೂರಾರು ಹಿಂದುತ್ವನಿಷ್ಠರು ಭಾಗವಹಿಸಿದ್ದರು. ಮುಂದಿನ ವರ್ಷವಿಡೀ ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಮಾನಸೂತ್ರ ಕಾರ್ಯಕ್ರಮದ ಅಂತರ್ಗತ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’, ‘ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ’, ‘ಹಿಂದೂ ರಾಷ್ಟ್ರ ಅಧಿವೇಶನ’, ‘ಹಿಂದೂ ರಾಷ್ಟ್ರ ಕಾರ್ಯಕರ್ತರ ತರಬೇತಿ ಶಿಬಿರ’, ‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಬಹಿರಂಗ ಸಭೆ’, ‘ಹಲಾಲ್ ಜಿಹಾದ್‌ನ ವಿಷಯದಲ್ಲಿ ಜನಜಾಗೃತಿ ಬೈಠಕ್’ ಇತ್ಯಾದಿ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಅಧಿವೇಶನದಲ್ಲಿ ನಿರ್ಧರಿಸಲಾಯಿತು.
ಸಂಕ್ಷಿಪ್ತದಲ್ಲಿ, ಹಿಂದುತ್ವನಿಷ್ಠರ ಅಪಾರ ಉತ್ಸಾಹದಲ್ಲಿ ನೆರವೇರಿದ ದಶಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಹಮ್ಮಿಕೊಳ್ಳಲಿರುವ ಆಂದೋಲನಗಳ ವೇಗವನ್ನು ಹೆಚ್ಚಿಸುವ ಹಾಗೂ ವಿಸ್ತಾರಗೊಳಿಸಲು ನಿರ್ಧರಿಸಲಾಯಿತು. ಹಿಂದೂ ರಾಷ್ಟ್ರದ ಸಂಕಲ್ಪನೆಯು ಕೇವಲ ರಾಜಕೀಯವಲ್ಲ, ಇದು ಆಧ್ಯಾತ್ಮಿಕವೂ ಆಗಿದೆ. ಇದು ರಾಮರಾಜ್ಯದ ಮಾದರಿಯಲ್ಲಿದೆ. ಅದನ್ನು ಸಾಧ್ಯಗೊಳಿಸಲು ಅಪಾರ ಪ್ರಯತ್ನ ಮಾಡಲು ಹಿಂದುತ್ವನಿಷ್ಠರು ಮಾಡಿದ ನಿರ್ಧಾರ, ಅಧಿವೇಶನದ ಮೂಲಕ ಸಿಕ್ಕಿದ ಧರ್ಮತೇಜ, ದೇಶದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು, ಅವರಲ್ಲಿ ನಿರ್ಮಾಣವಾದ ಧರ್ಮಬಂಧುತ್ವದ ಭಾವನೆಯು ಈ ಅಧಿವೇಶನದ ಫಲಶ್ರುತಿಯೆಂದು ಹೇಳಬೇಕಾಗುತ್ತದೆ. ಕಾಲಮಹಾತ್ಮೆಗನುಸಾರ ಹಿಂದೂ ರಾಷ್ಟ್ರ ಸ್ಥಾಪನೆ ಆಗುವುದು ಖಚಿತ. ಈ ಕಾರ್ಯದಲ್ಲಿ ತನು-ಮನ-ಧನವವನ್ನು ಸಮರ್ಪಿಸುವ ಪ್ರೇರಣೆ ಎಲ್ಲರಿಗೂ ಸಿಗಲಿ, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !





0 Comments